Sunday, February 23, 2025

ಲಕ್ಷ್ಮೀ ಹೆಬ್ಬಾಳ್ಕರ್​ ನೋಡಲು ರಾಜಕಾರಣಿಗಳ್ಯಾರು ಬರಬೇಡಿ : ವೈದ್ಯ ಡಾ. ರವಿ ಪಾಟೀಲ್​ !

ಬೆಳಗಾವಿ : ಕಾರು ಅಪಘಾತದಲ್ಲಿ ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಆರೋಗ್ಯದಲ್ಲಿ ನಿನ್ನೆ ಸಂಜೆ ಏರುಪೇರಾಗಿತ್ತು ಎಂದು ಲಕ್ಷ್ಮೀ ಹೆಬ್ಬಾಳ್ಕರ್​ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ರವಿ ಪಾಟೀಲ್​ ಹೇಳಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್​ ಆರೋಗ್ಯ ವಿಚಾರವಾಗಿ ಮಾತನಾಡಿದ ವೈದ್ಯ ರವಿ ಪಾಟೀಲ್​ ‘ ಕಾರು ಅಪಘಾತದಲ್ಲಿ ಆಗಿ ನಾಲ್ಕು ದಿನ ಆಯ್ತು. ಈ ಅಪಘಾತದಲ್ಲಿ ನಾಲ್ಕು ಜ‌ನ ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಚನ್ನರಾಜ ಹಟ್ಟಿಹೊಳಿ ಗುಣಮುಖರಾಗಿದ್ದಾರೆ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಬೆನ್ನು ಮೂಳೆ ಮುರಿದಿದ್ದು, ಮೆದುಳು ಊದಿಕೊಂಡಿದೆ. ಇದಕ್ಕೆ ಚಿಕಿತ್ಸೆ ನೀಡಿದ್ದೇವೆ. ಅವರಿಗೆ ಕನಿಷ್ಟ 48 ಗಂಟೆಗಳ ಕಾಲ ಕಂಪ್ಲೀಟ್​ ರೆಸ್ಟ್​ ಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : ಕೆನಡಾ ಪ್ರಧಾನಿ ರೇಸ್​ನಲ್ಲಿ ಕನ್ನಡಿಗ : ‘ಎಲ್ಲಾದರು ಇರು, ಎಂತಾದರು ಇರು, ಕನ್ನಡವಾಗಿರು ಎಂದ’ ಚಂದ್ರಆರ್ಯ

ಮುಂದುವರಿದು ಮಾತನಾಡಿದ ವೈದ್ಯ ರವಿ ಪಾಟೀಲ್​ ‘ಅವರನ್ನು ನೋಡಲು ಅವರ ಅಭಿಮಾನಿಗಳು ದಿನನಿತ್ಯ ಬರುತ್ತಿದ್ದಾರೆ. ಆದರೆ ಅವರಿಗೆ ಕಂಪ್ಲೀಟ್​ 48 ಗಂಟೆಗಳ ಕಾಳ ರೆಸ್ಟ್​ ಬೇಕಿದೆ. ನಿನ್ನೆ ಸಂಜೆ ತಲೆ ನೋವು, ತಲೆ ಸುತ್ತು ಬರುವುದು ಹೆಚ್ಚಾಗಿತ್ತು. ಕುತ್ತಿಗೆ ಭಾಗಕ್ಕೆ ಪೆಟ್ಟು ಬಿದ್ದಿರುವುದರಿಂದ ಕತ್ತಿನಲ್ಲಿ ಬಾವು ಕಾಣಿಸಿಕೊಂಡಿದೆ.  ಅವರಿನ್ನು 4 ದಿನ ಆಸ್ಪತ್ರೆಯಲ್ಲಿರಬೇಕು. ಆದರೆ ಭಾನುವಾರ ಅವರನ್ನು ಡಿಸ್ಚಾರ್ಜ ಮಾಡುತ್ತೇವೆ. ಆದರೆ ಅವರನ್ನೂ ಭೇಟಿ ಮಾಡಲು ಬರುವವರ ಸಂಖ್ಯೆ ಹೆಚ್ಚಾಗಿದ್ದು. ರಾಜಕಾರಣಿಗಳು ಬರದಂತೆ ಮಾಧ್ಯಮದ ಮುಖಾಂತರ ಮನವಿ ಮಾಡಿದರು.

 

RELATED ARTICLES

Related Articles

TRENDING ARTICLES