ವಿಜಯಪುರ: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ದರೋಡೆಕೋರರ ತಂಡ ಪ್ರತಿದಿನ ಒಂದೊಂದು ಪ್ರದೇಶದಲ್ಲಿ ದಾಳಿ ಮಾಡಿ ಚಿನ್ನಾಭರಣ ದೋಚುತ್ತಿತ್ತು. ವಿಜಯಪುರ ಪೊಲೀಸರಿಗೆ ಸವಾಲಾಗಿದ್ದ, ಈ ಗ್ಯಾಂಗ್ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗುಂಡಿನ ದಾಳಿ ಮಾಡಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ನಗರದ ಟೋಲ ನಾಕಾ ಬಳಿ ಬೆಳಗಿನ ಜಾವ 3 ಗಂಟೆಗೆ ಪರಾರಿಯಾಗುತ್ತಿದ್ದ ದರೋಡೆಕೋರ ಮೇಲೆ ಗುಂಡು ಹಾರಿಸಲಾಗಿದೆ. ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಮನೆ ದರೋಡೆಗೆ ಬಂದಿದ್ದ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪಡೆದ ಖದೀಮರನ್ನ ಬೆನ್ನಟ್ಟಿದ್ದು, ಟೋಲ್ ನಾಕಾ ಬಳಿ ಪರಾರಿಯಾಗುವ ವೇಳೆ ಗುಂಡೇಟು ನೀಡಲಾಗಿದ್ದು, ಮಧ್ಯಪ್ರದೇಶ ಮೂಲದ ಮಹೇಶ್ ಎಂಬಾತನಿಗೆ ಗುಂಡು ತಗುಲಿವೆ. ಉಳಿದ ಮೂವರು ಪರಾರಿಯಾಗಿದ್ದು, ಅವರನ್ನು ಶೋಧಕ್ಕಾಗಿ ತಂಡಗಳನ್ನ ರಚನೆ ಮಾಡಲಾಗಿದೆ. ತೊಗರಿ ಹೊಲದಲ್ಲಿ ಆರೋಪಿಗಳ ಮೇಲೆ ಫೈರಿಂಗ್ ಮಾಡುವ ವೇಳೆ ಕತ್ತಲಾಗಿದ್ದ ಕಾರಣ, ಗುಂಡೇಟು ತಿಂದವನ ಕಂಡಿದಿಲ್ಲ. ಬೆಳಿಗ್ಗೆ ಅದೇ ಜಾಗದಲ್ಲಿ ಹುಡುಕಾಟ ನಡೆಸಿದಾಗ ಆರೋಪಿ ಅಲ್ಲೆ ಕುಸಿದು ಬಿದಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ತರಲಾಗಿದೆ.
ಇದನ್ನೂ ಓದಿ:ಲಾಂಗ್ನಿಂದ ಕೊಚ್ಚಿ ವ್ಯಕ್ತಿಯ ಭೀಕರ ಕೊ*ಲೆ !
ಕಳೆದ ರಾತ್ರಿ ವಿಜಯಪುರದ ಜೈನಾಪುರ ಲೇ ಔಟ್ ನಲ್ಲಿ ಸಂತೋಷ ಎನ್ನುವವರ ಮನೆಗೆ ದಾಳಿ ಮಾಡಿದ್ದ ಖದೀಮರು ಅವರಿಗೆ ಚಾಕು ಇರಿದು ಅವರ ಪತ್ನಿ ಬಳಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಅತ್ಯಂತ ಕಠಿಣ ಚಾಲೆಂಜ್ ಸ್ವೀಕರಿಸಿದ ಪೊಲೀಸರು ಖದೀಮರ ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಿದ್ದರು. ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿಗಳಿಗೆ ಗುಂಡೇಟು ನೀಡಿದ್ದಾರೆ. ಇನ್ನು ದರೋಡೆಕೋರರು ಉಳಿದವರು ಪರಾರಿಯಾಗಿದ್ದರ ಬಗ್ಗೆ ನಗರದ ಜನರಲ್ಲಿ ಆತಂಕ ಮುಂದುವರೆದಿದ್ದು, ಗಸ್ತು ಹೆಚ್ಚು ಮಾಡುವಂತೆ ಮನವಿ ಮಾಡಿದ್ದಾರೆ.
ಸದ್ಯ ನಾಲ್ವರ ಪೈಕಿ ಓರ್ವ ಖದೀಮ ಪೊಲೀಸರಿಗೆ ತಗಲಾಕೊಂಡಿದ್ದು, ಉಳಿದವರನ್ನ ಆದಷ್ಟು ಬೇಗ ಬಂಧಿಸಬೇಕಾಗಿದೆ. ಜನರಿಗೆ ಖದೀಮರ ಬಗ್ಗೆ ಇರುವ ಭಯ ಹೋಗಲಾಡಿಸಲು ಪೋಲಿಸ್ ಇಲಾಖೆ ಪ್ರಯತ್ನ ಮಾಡಬೇಕಿದೆ.