Saturday, January 18, 2025

‘ಗ್ಯಾರಂಟಿಗಳು ದೇಶಕ್ಕೆ ಒಳ್ಳೆಯದು ಎಂದು ಮೋದಿ ಒಪ್ಪಿಕೊಳ್ಳಬೇಕು’ : ಬಿಜೆಪಿ ಪ್ರಣಾಳಿಕೆಗೆ ಕೇಜ್ರಿವಾಲ್​ ಟಾಂಗ್

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆಗೆ ಸಿದ್ದವಾಗಿದೆ. ಇದರ ನಡುವೆ ಬಿಜೆಪಿ ಮತ್ತು ಎಎಪಿ ಪಾರ್ಟಿಗಳು ಜನರ ಮನವೊಲಿಸಲು ಅನೇಕ ಕಸರತ್ತು ಆರಂಭಿಸಿವೆ. ಇದರ ನಡುವೆ ಇಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಘೋಷಣೆ ಮಾಡಿದ್ದು. ಇದಕ್ಕೆ ಅರವಿಂದ್​ ಕೇಜ್ರಿವಾಲ್​ ಟಾಂಗ್​ ನೀಡಿದ್ದಾರೆ.

ದೆಹಲಿ ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್​ ಮತ್ತು ಎಎಪಿಗಳು ಅನೇಕ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು. ಇದರ ನಡುವೆ ಬಿಜೆಪಿಯೂ ನಾನೇನು ಕಮ್ಮಿ ಇಲ್ಲ ಎಂದು ಅನೇಕ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದಕ್ಕೆ ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೇಸರಿ ಪಕ್ಷದ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಬಿಜೆಪಿ, ಎಎಪಿಯನ್ನು “ನಕಲು” ಮಾಡಿ ತನ್ನ ದೆಹಲಿ ಚುನಾವಣಾ ಪ್ರಣಾಳಿಕೆಯಲ್ಲಿ ಹಲವಾರು ‘ಉಚಿತ’ಗಳನ್ನು ಘೋಷಿಸಿದೆ.

ಇದನ್ನೂ ಓದಿ: ಹೆಂಡತಿಯ ಅಕ್ರಮ ಸಂಬಂಧಕ್ಕೆ ಬಿತ್ತು ಗಂಡನ ಹೆಣ !

ಪ್ರಧಾನಿ ಮೋದಿ ಫ್ರೀಬೀಸ್​ಗಳು ದೇಶಕ್ಕೆ ಮಾರಕ ಎಂದು ಹೇಳಿದ್ದರು. ಆದರೆ ಇದೀಗ ಅವರು ಗ್ಯಾರಂಟಿ ಯೋಜನೆಗಳು ಘೋಷಣೆ ಮಾಡಿದ್ದಾರೆ. ಆದ್ದರಿಂದ ಅವರು ಉಚಿತ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದು ತಪ್ಪು ಎಂದು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

RELATED ARTICLES

Related Articles

TRENDING ARTICLES