ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹದಿಹರೆಯದವರ ಡ್ರಗ್ಸ್ ಪಾರ್ಟಿ ನಡೆದಿರುವ ಅನುಮಾನ ವ್ಯಕ್ತವಾಗಿದೆ. ನಗರದಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಪ್ರತಿಷ್ಠಿತ ಕಾಲೇಜಿನ ಯುವಕ- ಯುವತಿಯರು ಪಾಲ್ಗೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು. ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿSilದೆ. ದೂರು ದಾಖಲಾದರೂ ಎಫ್‌ಐಆರ್ ಮಾಡಿಲ್ಲ ಎಂಬ ಆರೋಪ ಸಹ ಇದೆ.
ನಗರದ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಮರಾವತಿ ಬಡವಾಣೆಯ ನಾಗಸಂದ್ರದ ಬಳಿ ಫ್ಲ್ಯಾಟ್ ವೊಂದರಲ್ಲಿ ಪಾರ್ಟಿ ನಡೆದಿತ್ತು. ಈ ಪಾರ್ಟಿಯಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದಾರಂತೆ. ಕಳೆದ ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬ ಹಿನ್ನೆಲೆ ಮಧ್ಯರಾತ್ರಿ ಅರ್ಚಿತ್ ಎಂಬಾತ ಪಾರ್ಟಿ ಆರೆಂಜ್ ಮಾಡಿದ್ದ. ಇದೇ ವೇಳೆ ಪಾರ್ಟಿಯಲ್ಲಿ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದಾರಂತೆ. ಪಾರ್ಟಿಯಲ್ಲಿ ಮಾದಕವಸ್ತು ಸೇವನೆ ಮಾಡಿ ಮಿಡ್ ನೈಟ್ ವರೆಗೂ ಪಾರ್ಟಿ ನಡೆಸಿದ್ದಾರಂತೆ. ಇದರ ಜೊತೆಗೆ ಲೈಂಗಿಕ ಕ್ರಿಯೆ ಸಹ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ವಿಜಯಪುರ ಜನರಿಗೆ ತಲೆನೋವಾಗಿದ್ದ ದರೋಡೆಕೋರನಿಗೆ ಗುಂಡೇಟು ನೀಡಿದ ಪೊಲೀಸರು !
ಅಲ್ಲದೇ ಪುನಃ ಹೊಸವರ್ಷಕ್ಕೆ ಪಾರ್ಟಿ ಆಯೋಜನೆ ಮಾಡಿ ಡಿಸೆಂಬರ್ 31ರ ಮಧ್ಯರಾತ್ರಿ ಯುವಕ ಯುವತಿಯರಿಗೆ ಮೊಬೈಲ್ ತೆಗೆದುಕೊಂಡು ಬರಬಾರದು ಅಂತಾ ಹೇಳಿದ್ದಾನಂತೆ. ಹೀಗಾಗಿ ಯಾರು ಕೂಡ ಪೊನ್ ತೆಗೆದುಕೊಂಡು ಹೋಗಿಲ್ಲ. ಪಾರ್ಟಿಯಲ್ಲಿ ಯುವಕನೊಬ್ಬ ಚಿಲ್ಲಮ್ ನಲ್ಲಿ ಗಾಂಜಾ ಹೊಡೆಯೋ ವಿಡಿಯೋ ಫೋಟೋ ರಿವಿಲ್ ಆಗಿದೆ. ಗಾಂಜಾ ಸೇವನೆ ಆಗಿರೋ ಬಗ್ಗೆ ಖುದ್ದಾಗಿ ಯುವಕರೊಬ್ಬರು ಸ್ಥಳೀಯರಿಗೆ ಮಾಹಿತಿ ಕೊಟ್ಟಿದ್ದಾರಂತೆ. ಪಾರ್ಟಿಯಲ್ಲಿ ಗಾಂಜಾ ಸೇವನೆಯಾಗಿದೆ. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ದವರು ಬ್ಲಡ್ ಸ್ಯಾಂಪಲ್ ಹಾಗೂ ಕೂದಲು ಮೂತ್ರ ಪರೀಕ್ಷೆ ಮಾಡಿಸಬೇಕು ಅಂತಾ ಜನವರಿ ೧೨ ರಂದು ವಿಡಿಯೋ ಪೋಟೋಗಳ ಆಧಾರ ಮೇಲೆ ಪೀಣ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದ್ಯ ಪೊಲೀಸರು ಎಲ್ ಪಿ ಟಿ ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಎಫ್ಐಆರ್ ಯಾಕೆ ಮಾಡಿಲ್ಲ ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಮುಂದೆ ಪ್ರಕರಣ ಎಲ್ಲಿಗೆ ನಿಲ್ಲುತ್ತೆ ಎಂಬುದನ್ನು ಕಾದು ನೋಡಬೇಕಿದೆ.