Friday, January 17, 2025

‘ಬಾ ಯವ್ವಾ, ನೀನು ಬಾರದೆ ಇದ್ರೆ ಜಾತ್ರೆ ಮುಗಿಯಲ್ದು : ಬುದ್ದಿಮಾಂದ್ಯೆ ಕೈಯಿಂದ ಗವಿಶ್ರೀಗಳಿಗೆ ಸನ್ಮಾನ !

ಕೊಪ್ಪಳ : ಜಿಲ್ಲೆಯಲ್ಲಿ ನಡೆಯುವ ಗವಿಸಿದ್ದೇಶ್ವರ ಜಾತ್ರೆವಿಶ್ವಪ್ರಸಿದ್ದ ಜಾತ್ರೆಯಾಗಿದೆ. ಈ ಜಾತ್ರೆಯ ಅಂಗವಾಗಿ ನಿನ್ನೆ(ಜ.17) ರಾತ್ರಿ ಗವಿಸಿದ್ದೇಶ್ವರ ಶ್ರೀಗಳ ಕೈಲಾಸ ಮಂಟಪದಲ್ಲಿ ನಡೆದ ಕಾರ್ಯಕ್ರಮವು ಸ್ವಾರಸ್ಯಕರ ಸಂದರ್ಭಕ್ಕೆ ಸಾಕ್ಷಿಯಾಗಿದ್ದು. ಬುದ್ದಿ ಮಾಂದ್ಯ ಯುವತಿಯೊಬ್ಬರು ಶ್ರೀಗಳಿಗೆ ವೇದಿಕೆ ಮೇಲೆ ಬಂದು ಸನ್ಮಾನಿಸಿದ್ದಾರೆ.

ವೇದಿಕೆ ಮೇಲೆ ಶ್ರೀಗಳು ಪ್ರವಚನ ನೀಡುವ ವೇಳೆ ಬುದ್ದಿಮಾಂದ್ಯ ಯುವತಿ ವೇದಿಕೆ ಮೇಲೆ ಬಂದಿದ್ದಾರೆ. ಈ ವೇಳೆ ಆಕೆಯನ್ನು ನೋಡಿದ ಶ್ರೀಗಳು ‘ಬಾ ಯವ್ವಾ ನೀನು ಬಾರದೆ ಇದ್ರೆ ಜಾತ್ರೆ ಮುಗಿಯಲ್ಲ’ ಎಂದು ಹೇಳಿ ಯುವತಿಯನ್ನು ಸ್ವಾಗತಿಸಿದರು. ಈ ವೇಳೆ ಮುಂದುವರಿದು ಮಾತನಾಡಿದ ಶ್ರೀಗಳು ‘ನೀನು ಬಾಳಾ ಫೇಮಸ್​ ಆಗಿದ್ದೀಯ, ಯೂಟ್ಯೂಬ್​ನಲ್ಲಿ ನನಗಿಂತ ನಿನ್ನ ಫ್ಯಾನ್ಸ್​ ಬಹಳ ಇದ್ದಾರೆ ‘ ಎಂದು ನಗೆ ಚಟಾಕಿ ಹಾರಿಸಿದರು. ಈ ವೇಳೆ ವೇದಿಕೆ ಮೇಲೆ ಬಂದ ಯುವತಿ ಶ್ರೀಗಳಿಗೆ ಶಾಲು ಮತ್ತು ಹಾರ ನೀಡಿ ಸಂತಸ ಪಟ್ಟರು.

ಇದನ್ನೂ ಓದಿ :ನಟ ಸೈಪ್​ ಅಲಿಖಾನ್​ಗೆ ಚಾಕು ಇರಿದಿದ್ದ ಆರೋಪಿ ಅರೆಸ್ಟ್​ !

ಈ ಬುದ್ದಿಮಾಂಧ್ಯ ಯುವತಿ ಕಳೆದ ವರ್ಷ ಶ್ರೀ ಮಠದ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಎಂದು ದೇಣಿಗೆ ನೀಡಿ ಸದ್ದು ಮಾಡಿದ್ದರು. ಈ ಯುವತಿಯ ಕಾರ್ಯಕ್ಕೆ ರಾಜ್ಯದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

RELATED ARTICLES

Related Articles

TRENDING ARTICLES