ಮಂಗಳೂರು : ಬೀದರ್ ದರೋಡೆ ಪ್ರಕರಣದ ಮಾಸುವ ಮುನ್ನವೆ ಮಂಗಳೂರಿನಲ್ಲಿ ಮತ್ತೊಂದು ದರೋಡೆ ಪ್ರಕರಣ ವರದಿಯಾಗಿದ್ದು. ಹಾಡಹಗಲೇ ಆಘಂತುಕರು ಬಂದೂಕು ತೋರಿಸಿ ಬ್ಯಾಂಕ್ನಲ್ಲಿದ್ದ ಹಣ, ಚಿನ್ನಾಭರಣಗಳನ್ನು ದೋಚಿದಿದ್ದಾರೆ ಎಂದು ಮಾಹಿತಿ ದೊರೆತಿದೆ.
ಮಂಗಳೂರಿನ ಕೆ.ಸಿ ರೋಡ್ ಶಾಖೆಯ ಕೋಟೆಕಾರು ಸಹಕಾರಿ ಬ್ಯಾಂಕಿನಲ್ಲಿ ದರೋಡೆಯಾಗಿದ್ದು. ಹಾಡಹಗಲೇ ಬ್ಯಾಂಕ್ಗೆ ನುಗ್ಗಿದ ಐವರು ಆಘಂತುಕರು ಬಂದೂಕು ತೋರಿಸಿ ದರೋಡೆ ಮಾಡಿದ್ದಾರೆ. ಫಿಯೆಟ್ ಕಾರಿನಲ್ಲಿ ಬಂದಿದ್ದ ದರೋಡೆಕೋರರಿಂದ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ :ಲಕ್ಷ್ಮೀ ಹೆಬ್ಬಾಳ್ಕರ್ ನೋಡಲು ರಾಜಕಾರಣಿಗಳ್ಯಾರು ಬರಬೇಡಿ : ವೈದ್ಯ ಡಾ. ರವಿ ಪಾಟೀಲ್ !
ಬಂದೂಕು ತೋರಿಸಿ ದರೋಡೆ ಮಾಡಿರುವ ಈ ಗ್ಯಾಂಗ್ ಬ್ಯಾಂಕ್ನಲ್ಲಿದ್ದ ಲಕ್ಷಾಂತರ ರೂಪಾಯಿ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಮಾಹಿತಿ ದೊರೆತಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕರು ಆದ ಯು.ಟಿ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.