Saturday, January 18, 2025

Aeroindia 2025 : ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಂದ ಕ್ರೇನ್​ಗಳನ್ನು ಕೆಳಗಿಳಿಸುವಂತೆ ಬಿಬಿಎಂಪಿ ಆದೇಶ

ಬೆಂಗಳೂರು: ಏರ್‌ ಶೋ ಹಿನ್ನೆಲೆಯಲ್ಲಿ ಯಲಹಂಕ ವಾಯುಸೇನಾ ನೆಲೆಯ ಸುತ್ತಮುತ್ತ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಕ್ರೇನ್​ಗಳ ಎತ್ತರವನ್ನು ತಗ್ಗಿಸುವಂತೆ ಬಿಬಿಎಂಪಿ ಸುತ್ತೋಲೆ ಪ್ರಕಟಿಸಿದೆ. ಫೆಬ್ರವರಿ 1ನೇ ತಾರೀಖಿನಿಂದ 14ನೇ ತಾರೀಖಿನವರೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ದೊರೆತಿದೆ.

ಇದೇ ಫೆಬ್ರವರಿ 10ನೇ ತಾರೀಖಿನಿಂದ 14ರವರೆಗೆ ಬೆಂಗಳೂರಿನ ಯಲಹಂಕದಲ್ಲಿ ಏರ್​ಶೋ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ದೇಶ-ವಿದೇಶದಿಂದ ಯುದ್ದ ವಿಮಾನಗಳು, ಹೆಲಿಕಾಪ್ಟರ್​​ಗಳು ಭಾಗವಹಿಸಲಿವೆ. ಇದರ ಬೆನ್ನಲ್ಲೆ ಏರ್​ಶೋ ನಡೆಯುವ 10 ಕಿಮೀ ಸುತ್ತಳತೆಯಲ್ಲಿ ಬಹುಮಹಡಿ ಕಟ್ಟಡಗಳ ಮೇಲಿರುವ ಕ್ರೇನ್​ಗಳನ್ನು ತೆರವು ಮಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಇದನ್ನೂ ಓದಿ:ಆನ್​ಲೈನ್​ ಗೇಮ್​ ಆಡದಂತೆ ಬುದ್ದಿ ಹೇಳಿದ ತಾಯಿ : ನೇಣಿಗೆ ಶರಣಾದ ಮಗ !

ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್‌ಕ್ರಾಪ್ಟ್ 1937ರ ಸೆಕ್ಷನ್​ 91ರಡಿಯಲ್ಲಿ ಈ ಆದೇಶವನ್ನು ಹೊರಡಿಸಿದ್ದು. ಏರ್​ಶೋಗು ಮುನ್ನ ಯುದ್ದ ವಿಮಾನಗಳು ತಾಲೀಮು ನಡೆಸುವ ಕಾರಣದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES