Saturday, January 18, 2025

ಲಾಂಗ್​ನಿಂದ ಕೊಚ್ಚಿ ವ್ಯಕ್ತಿಯ ಭೀಕರ ಕೊ*ಲೆ !

ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ  ಹಾಸನದಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು 44 ವರ್ಷದ ನಂಜುಂಡೇಗೌಡ ಎಂದು ಗುರುತಿಸಲಾಗಿದೆ.

ರೈತರಿಂದ ಹಾಲು ಸಂಗ್ರಹ ಮಾಡಿಕೊಂಡು ಡೈರಿಗೆ ಹಾಲು ಹಾಕಲು ಮಹೀಂದ್ರ ಜಿತೋ ವಾಹನದಲ್ಲಿ ನಂಜುಂಡೇಗೌಡ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಮರುವನಹಳ್ಳಿ-ಮಡಬ ರಸ್ತೆಯಲ್ಲಿ ಮರದ ಪಟ್ಟಿಗೆ ಮೊಳೆ ಇಟ್ಟು ವಾಹನ ಪಂಚರ್ ಮಾಡಿದ್ದಾರೆ. ವಾಹನ ಪಂಕ್ಚರ್ ಆಗಿರುವುದನ್ನು ಗಮನಿಸಿದ ನಂಜುಂಡೇಗೌಡ ವಾಹನದಿಂದ ಕೆಳಗೆ ಇಳಿದಿದ್ದಾನೆ.

ಇದನ್ನೂ ಓದಿ : Aeroindia 2025 : ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಂದ ಕ್ರೇನ್​ಗಳನ್ನು ಕೆಳಗಿಳಿಸುವಂತೆ ಬಿಬಿಎಂಪಿ ಆದೇಶ

ಇದೇ ಸಮಯಕ್ಕೆ ಕಾಯುತ್ತಿದ್ದ ದುಷ್ಕರ್ಮಿಗಳು ನಂಜುಂಡೇಗೌಡನನ್ನು ಲಾಂಗ್​ನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ನಂಜುಂಡೇಗೌಡನ ಕುತ್ತಿಗೆ, ತಲೆ, ಕೈಗೆ ಲಾಂಗ್​ನಿಂದ ಭೀಕರವಾಗಿ ಹಲ್ಲೆ ಮಾಡಿದ್ದು. ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

RELATED ARTICLES

Related Articles

TRENDING ARTICLES