Friday, September 5, 2025
HomeUncategorizedದನ ತಿನ್ನುವ ಸಾಬರಿಗೆ ಸರ್ಪೋಟ್​ ಮಾಡುವುದನ್ನು ನಿಲ್ಲಿಸಿ : ಪ್ರತಾಪ್​ ಸಿಂಹ !

ದನ ತಿನ್ನುವ ಸಾಬರಿಗೆ ಸರ್ಪೋಟ್​ ಮಾಡುವುದನ್ನು ನಿಲ್ಲಿಸಿ : ಪ್ರತಾಪ್​ ಸಿಂಹ !

ಮೈಸೂರು: ಹಸುಗಳ ಮೇಲೆ ನಡೆಯುತ್ತಿರುವ ದಾಳಿಯ ಕುರಿತು ಮಾತನಾಡಿದ ಮಾಜಿ ಸಂಸದ ಕಾಂಗ್ರೆಸಿಗರ ಮೇಲೆ ವಾಗ್ದಾಳಿ ನಡೆಸಿದ್ದು. ದನ ತಿನ್ನವು ಸಾಬರಗೆ ಸಪೋರ್ಟ್​ ಮಾಡುವುದನ್ನು ಕಾಂಗ್ರೆಸಿಗರು ನಿಲ್ಲಿಸಲಿ ಎಂದು ಕಾಂಗ್ರೆಸಿಗರ ಮೇಲೆ ಆಕ್ರೋಶ ಹೊರಹಾಕಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್​ ಸಿಂಹ ‘ ಸಂಕ್ರಾಂತಿ ಸಂದರ್ಭದಲ್ಲಿ ಗೋವುಗಳನ್ನು ಎರಡನೇ ತಾಯಿಯೆಂದು ಪೂಜಿಸುತ್ತೇವೆ. ಆದರೆ ಅಂತಹ ಗೋ ಮಾತೆಯ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆದಿದ್ದಾರೆ. ಜೊತೆಗೆ  ಇಂದು ಬೆಳಿಗ್ಗೆ ನಂಜನಗೂಡಿನಲ್ಲಿ ಗೋವನ್ನು ಕಳ್ಳತನ ಮಾಡಲು ಬಂದಾಗ ಗೋವು ಬೆದರಿದಾಗ ಅದರ ಬಾಲವನ್ನು ಕಟ್ ಮಾಡಿ ಹೋಗಿದ್ದಾರೆ. ಇಂತಹ ಕಟುಕರಿಗೆ ತಕ್ಕ ಶಾಸ್ತಿಯಾಗಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಏನೆಲ್ಲಾ ಘಟನೆಗಳು ನಡೆದವು ಎಂದು ನೀವೆಲ್ಲಾ ನೋಡಿದ್ದೀರಿ. ಈಗಲೂ ಅದೇ ಪರಿಸ್ಥಿತಿ ಇದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್​ ಜೋಡೆತ್ತಿನ ಚಿಹ್ನೆ ಇಟ್ಟುಕೊಂಡು ಆಡಳಿತ ನಡೆಸಿದರು. ಆದರೆ ನಂತರ ಮುಸ್ಲೀಂ ಓಲೈಕೆ ಮಾಡಲು ಇಳಿದರು.

ಇದನ್ನೂ ಓದಿ :ಪವರ್​ ಕ್ರಿಕೆಟ್​ ಲೀಗ್​ 2025 : ಪವರ್​ ಜಾಲೀಸ್​​ ತಂಡ ಮಣಿಸಿ ಟ್ರೋಫಿ ಗೆದ್ದ ಪವರ್​ ಕಿಂಗ್ಸ್​​ ತಂಡ

ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಆ ಸಾಬಿಯನ್ನು ಮಾನಸಿಕ ಅಸ್ವಸ್ತ ಎಂದು ಹೇಖುತ್ತಿದ್ದಾರೆ. ಇಂತಹ ಹಲಾಲ್ ಕೋರ್ ಸಾಬರಿಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸಲಿ. ಈ ರೀತಿಯ ಓಲೈಕೆ ನಿಮಗೆ ಶೋಭೆ ತರುವುದಿಲ್ಲ‌‌.ಮುಂದೆ ಈ ರಾಜ್ಯದಲ್ಕಿ ನಿಮ್ಮ ತಾಲಿಬಾನಿ ಸರ್ಕಾರ ತರುವುದು ಸ್ಪಷ್ಟವಾಗಿದೆ. ಇಂತಹ ಘಟನೆಯಿಂದ ಹಿಂದೂಗಳಿಗಾಗಲಿ, ಅಧಿಕಾರಿಗಳಿಗಾಗಲಿ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ. ತಕ್ಷಣ ಈ ಸರ್ಕಾರ ತೊಲಗಬೇಕು ಎಂದು ಕಾಂಗ್ರೆಸ್​ ಮೇಲೆ ವಾಗ್ದಾಳಿ ನಡೆಸಿದರು.

ಮುಂದುವರಿದು ಮಾತನಾಡಿದ ಪ್ರತಾಪ್​ ಸಿಂಹ ‘ ಕಾಂಗ್ರೆಸ್​ನವರು ಗಾಂಧಿ ಅನುಯಾಯಿಗಳು ಎಂದು ಹೇಳಿಕೊಂಡು ಓಡಾಡುತ್ತಾರೆ. ಆದರೆ ಗಾಂಧೀಜಿ ಗೋವನ್ನು ಪೂಜ್ಯ ರೀತಿಯಲ್ಲಿ ನೋಡುತ್ತಿದ್ದರು. ಆದರೆ ಕಾಂಗ್ರೆಸ್​ನವರು ಏನು ಮಾಡುತ್ತಿದ್ದೀರ.  ಹಸುವಿಗೆ ಯಾವ ಪರಿಸ್ಥಿತಿ ಆಗಿದೆಯೋ ಅದೇ ಪರಿಸ್ಥಿತಿ ಅಪರಾಧಿಗೂ ಆಗಬೇಕು.

ಸಿದ್ದರಾಮಯ್ಯರ ಮೊದಲ ಅವಧಿಯಲ್ಲಿ ಸಾಕಷ್ಟು ಅಧಿಕಾರಿಗಳು ಸತ್ತಿದ್ದಾರೆ. ಇತ್ತೀಚೆಗೆ ವೇದಿಕೆ ಮೇಲೆ ಜಿಲ್ಲಾಧಿಕಾರಿಗೆ ಅವಮಾನ ಮಾಡಿದ್ದಾರೆ. ಇದು ನಿಮಗೆ ಶೋಬೆ ತರುವುದಿಲ್ಲ. ಮೊದಲ ಅವಧಿಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಅಧಿಕಾರಿಗಳಿಗೆ ಅಧಿಕಾರ ತಪ್ಪಿಸಿದ್ರಿ. ಈಗಲೂ ಅದನ್ನೇ ಮಾಡುತ್ತೀದ್ದೀರಲ. ಇದರ ಕುರಿತು ಮುಖ್ಯಕಾರ್ಯದರ್ಶಿ ಹಾಗೂ ಐಎಎಸ್ ಅಧಿಕಾರಿಗಳ ಸಂಘದವರಿಗೂ ಈ ಬಗ್ಗೆ ನೀವು ಧ್ವನಿ ಎತ್ತಬೇಕು ಎಂದು ಕರೆ ಕೊಡುತ್ತೇನೆ ಎಂದು ಪ್ರತಾಪ್​ ಸಿಂಹ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments