Thursday, January 16, 2025

ಸ್ವಂತ ಮಾವನಿಂದಲೆ ಲೈಂಗಿಕ ಕಿರುಕುಳ : ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆ ಮಾಡಿಕೊಂಡ ಯುವತಿ !

ಬೆಂಗಳೂರು : ಸ್ವಂತ ಮಾವನಿಂದಲೆ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದ್ದು. ಯುವತಿಯ ಖಾಸಗಿ ವಿಡಿಯೋ ಚಿತ್ರಕರಿಸಿಕೊಂಡಿದ್ದ ಆರೋಪಿ ಯುವತಿಗೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಆದರೆ ಈ ಕಿರುಕುಳ ಸಹಿಸದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಯುವತಿಯನ್ನು ಸುಹಾಸಿ ಸಿಂಗ್​ ಎಂದು ಗುರುತಿಸಲಾಗಿದೆ.

ಪ್ರವೀಣ್​ ಸಿಂಗ್​ ಮತ್ತು ಸುಹಾಸಿ ಸಿಂಗ್​ ಇಬ್ಬರು ಸಂಬಂಧಿಗಳಾಗಿದ್ದರು. ಯುವತಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡಿಕೊಂಡಿದ್ದಳು. ಪ್ರವೀಣ್​ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಈಗಾಗಲೇ ಮದುವೆಯಾಗಿದ್ದ ಪ್ರವೀಣ್​ ಸಿಂಗ್​ ಪತ್ನಿಯ ಜೊತೆಗೆ ಕೆಆರ್​.ಪುರಂನ ಆಲ್ಫಾ ಗಾರ್ಡನ್ ನಲ್ಲಿರುವ ಎಸ್​ವಿಎಸ್ ಪ್ಯಾರಡೈಸ್ ಅಪಾರ್ಟ್ ಮೆಂಟ್​ನಲ್ಲಿ ವಾಸವಾಗಿದ್ದನು. ಇವರ ಜೊತೆಗೆ ಸುಹಾಸಿ ಸಿಂಗ್ ಕೂಡ ಇದೇ ಅರ್ಪಾಟ್​ಮೆಂಟ್​ನಲ್ಲಿ ವಾಸವಾಗಿದ್ದಳು.

ಸುಹಾಸಿ ಸಿಂಗ್ ಮತ್ತು ಪ್ರವೀಣ್​ ಒಂದೆ ಮನೆಯಲ್ಲಿ ವಾಸವಾಗಿದ್ದರಿಂದ ಅವರಿಬ್ಬರ ನಡುವೆ ಸಲುಗೆಯು ಬೆಳೆದಿತ್ತು. ಅನೇಕ ಬಾರಿ ಪ್ರವೀಣ್​ ಮತ್ತು ಆತನ ಪತ್ನಿಯೊಂದಿಗೆ ಟ್ರಿಪ್​ಗೆ ಹೋಗಿದ್ದ ಸುಹಾಸಿ ಸಿಂಗ್​ ಮತ್ತು ಪ್ರವೀಣ್​ ನಡುವೆ ಅನೇಕ ಬಾರಿ ದೈಹಿಕ ಸಂಪರ್ಕವೂ ಕೂಡ ನಡೆದಿತ್ತು. ಆದರೆ ಪ್ರವೀಣ್​ ಈ ಖಾಸಗಿ ಕ್ಷಣಗಳನ್ನು ತನ್ನ ಮೊಬೈಲ್​ನಲ್ಲಿ ಚಿತ್ರಿಕರಿಸಿಕೊಂಡಿದ್ದನು. ಹೆಂಡತಿಗೆ ತಿಳಿಯದಂತೆ ಸುಹಾಸಿ ಜೊತೆ ಕಾಲ ಕಳೆಯುತ್ತಿದ್ದನು.

ಇದನ್ನೂ ಓದಿ: ನ್ಯೂಕ್ಲಿಯರ್ ಶಕ್ತಿಗಿಂತ, ಆಧ್ಯಾತ್ಮಿಕ ಶಕ್ತಿ ದೊಡ್ಡದು : ಉಪ ರಾಷ್ಟ್ರಪತಿ ಜಗದೀಪ್​ ಧನ​ಕರ್​

ಆದರೆ ಇತ್ತೀಚೆಗೆ ಈ ವಿಡಿಯೋಗಳನ್ನು ಸುಹಾಸಿಗೆ ತೋರಿಸಿದ್ದ ಪ್ರವೀಣ್​ ಲೈಂಗಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದನು. ಹೋಟೆಲ್​ನಲ್ಲಿ ರೂಂ ಮಾಡಿ ಬಾ ಎಂದು ಕಿರುಕುಳ ನೀಡಲು ಆರಂಭಿಸಿದ್ದನು. ಈ ಕಿರುಕುಳವನ್ನು ಸಹಿಸದ ಸುಹಾಸು ಜನವರಿ 12 ರಂದು ಸಂಜೆ 7.30 ಸುಮಾರಿಗೆ ಹೋಟೆಲ್​ ರೂಂನಲ್ಲಿ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಮತ್ತು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮಾವ ಪ್ರವೀಣ್​ ಪ್ರಚೋದನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.

ಘಟನೆ ಸಂಬಂಧ ಹೆಚ್​​ಎಎಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಆರೋಪಿ ಪ್ರವೀಣ್​ನನ್ನು ಬಂಧಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES