ಬೆಂಗಳೂರು : ಮರಕ ಸಂಕ್ರಾಂತಿ ಹಬ್ಬ ಪ್ರಯುಕ್ತ ಪವರ್ ಟಿವಿ ಮುಖ್ಯಸ್ಥರಾದ ಶ್ರೀಯುತ ರಾಕೇಶ್ ಶೆಟ್ಟಿಯವರ ನೇತೃತ್ವದಲ್ಲಿ ಆಯೋಜಿಸಿದ್ದ ಪಿಸಿಎಲ್ (ಪವರ್ ಕ್ರಿಕೆಟ್ ಲೀಗ್) 2025ರ ಮೊದಲ ಆವೃತ್ತಿ ಜನವರಿ 14 ಮತ್ತು 15 ರಂದು ನಡೆಯಿತು. ಎರಡು ದಿನಗಳ ಕಾಲ ನಡೆದ ಈ ಲೀಗ್ನಲ್ಲಿ ಒಟ್ಟು ಆರು ತಂಡಗಳು ಭಾಗಿಯಾಗಿದ್ದರು.
ಎ ತಂಡಗಳು
1. ಪವರ್ ಜಾಲಿ
2. ಪವರ್ ಬುಲ್ಸ್
3. ಪವರ್ ಕಿಂಗ್ಸ್
ಬಿ ತಂಡಗಳು
4. ಪವರ್ ರಾಕ್ ಸ್ಟಾರ್
5. ಪವರ್ ಲಯನ್ಸ್
6. ಪವರ್ ಟೈಗರ್ಸ್
ಸತತವಾಗಿ ಎರಡು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕ್ರಿಕೆಟ್ ಆಟದಲ್ಲಿ ಎಲ್ಲಾ ತಂಡಗಳು ಭರ್ಜರಿ ಪ್ರದರ್ಶನ ನೀಡಿದವರು ಕೊನೆಗೆ ಪವರ್ ಕಿಂಗ್ಸ್ ಮತ್ತು ಪವರ್ ಜಾಲಿ ತಂಡಗಳು ಫೈನಲ್ ಪ್ರವೇಶ ಪಡೆದವು.
ಫೈನಲ್ ಪಂದ್ಯದಲ್ಲಿ ಎರಡು ತಂಡಗಳು ಗೆಲುವಿಗಾಗಿ ಕಾದಾಡಿದರು. ಆದರೆ, ಕೊನೆಯಲ್ಲಿ ಮನೋಜ್ ಕುಮಾರ್ ಆವರ ನೇತೃತ್ವದ ಪವರ್ ಕಿಂಗ್ಸ್ ತಂಡ ಪವರ್ ಜಾಲೀಸ್ ತಂಡವನ್ನು ಮಣಿಸುವ ಮೂಲಕ ಮೊದಲ ಆವೃತ್ತಿಯ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ. ಎಂ.ಆರ್ ಸುರೇಶ್ ಅವರ ನೇತೃತ್ವದ ಪವರ್ ಜಾಲೀಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಆರು ತಂಡಗಳ ಪೈಕಿ ಯಾವುದೇ ತಂಡ ಗೆದ್ದಿದ್ದರು ಕೂಡ ಒಟ್ಟಾರೆಯಾಗಿ ಪವರ್ ಟಿವಿ ಗೆಲುವು ಸಾಧಿಸಿದಂತಾಗಿದ್ದು. ಈ ಟೂರ್ನಿಯ ಆಯೋಜನೆಯಿಂದ ಪವರ್ ಟಿವಿಯ ಕುಟುಂಬದಲ್ಲಿ ಹೊಸ ಚೈತನ್ಯ ಮೂಡಿದಂತಾಗಿದೆ.
ಪವರ್ ಕಿಂಗ್ಸ್ ತಂಡ : ಮನೋಜ್ ಕುಮಾರ್ ಆರ್ (ನಾಯಕ), ಮಲ್ಲಿಕಾರ್ಜುನ, ಮಿಥುನ್, ವೆಂಕಟೇಶ್, ನಸೀಮಾ, ಅಶ್ವಿನಿ ದೇವಾಡಿಗ, ಪೂರ್ಣಿಮಾ, ನವೀನ್, ರಮೇಶ್ ಕುಮಾರ್, ಕುಮಾರ್, ಹರಿಬಾಬು, ಭಗತ್ ಸಿಂಗ್ ಅರುಣ್, ಯೋಗೇಶ್, ಸುನೀಲ್ ಸೊಣ್ಣಪ್ಪ, ನಿರಂಜನ್, ಭರತ್, ಅರುಣಾ.
ಪವರ್ ಜಾಲೀಸ್ ತಂಡ : ಎಂ.ಆರ್ ಸುರೇಶ್ (ನಾಯಕ), ಗಣೇಶ್, ಸಚಿನ್ ಶೆಟ್ಟಿ, ರಮ್ಯಾ ಎಲ್, ಮೇಘನಾ, ಅಂಜಲಿ, ಲೋಕೇಶ್ ಗೌಡ, ವಿನಯ್, ಧನರಾಜ್, ದುರ್ಗೆಶ್, ಪುನಿತ್, ರಕ್ಷಿತ್, ರಾಜನ್ ಮಿಶ್ರಾ, ಹರೀಶ್, ಪವನ್ ಗೌಡ, ವಿನಯ್, ದುರ್ಗಾ, ತನುಶ್ರೀ.