ಬೆಂಗಳೂರು : ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪರಮೇಶ್ವರ್ ‘ಈಗ ಡಿಕೆಶಿ ಅವರು ಎರಡು ದೊಡ್ಡ ಸ್ಥಾನಗಳನ್ನು ನಿಭಾಯಿಸುತ್ತಿದ್ದಾರೆ, ಈಗಿರುವಾಗ ಸಹಜವಾಗಿ ಅಧ್ಯಕ್ಷ ಸ್ಥಾನವನ್ನು ಬದಲಾಯಿಸಿ ಎಂದು ಕೇಳುತ್ತಾರೆ, ನಾನು ಸಹ ಕೆಪಿಸಿಸಿ ಅಧ್ಯಕ್ಷನಾಗಲು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಮಾತನಾಡಿದ ಪರಮೇಶ್ವರ್ ‘ ಅಧ್ಯಕ್ಷರ ಬದಲಾವಣೆ ಯಾವಾಗ ಎಂದು ಗೊತ್ತಿಲ್ಲ, ಆದರೆ ಲೋಕಸಭೆ ಚುನಾವಣೆ ನಂತರ ಬದಲಾವಣೆ ಆಗುತ್ತೆ ಎಂದು ಸತೀಶ್ ಜಾರಕಿಹೋಳಿ ಹೇಳಿರುವುದನ್ನು ನಾನು ನೋಡಿದೆ. ಅದರ ಬಗ್ಗೆ ನನಗೆ ಏನು ಗೊತ್ತಿಲ್ಲ. ಆದರೆ ಡಿಕೆಶಿ ಈಗ ಅಧ್ಯಕ್ಷರಿದ್ದಾರೆ, ಎರಡು ದೊಡ್ಡ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಈಗೀರುವಾಗ ಸಹಜವಾಗಿ ಅಧ್ಯಕ್ಷ ಸ್ಥಾನ ಬದಲಾಯಿಸಿ ಎಂದು ಬೇರೆಯವರು ಕೇಳ್ತಾರೆ.
ಇದನ್ನೂ ಓದಿ : ಪ್ರೀತಿ ಮಾಡುವಂತೆ ಇಬ್ಬರು ಯುವಕರಿಂದ ಕಿರುಕುಳ : ಅಪ್ರಾಪ್ತ ಬಾಲಕಿ ಆತ್ಮಹ*ತ್ಯೆ !
ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲು ಮಂತ್ರಿ ಸ್ಥಾನವನ್ನು ನಿಭಾಯಿಸುತ್ತಿದ್ದೆ, ಈ ವೇಳೆ ಬದಲಾಯಿಸಿ ಎಂದು ಹೇಳಿದರು. ಆದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೇ ಕೊಟ್ಟಿದ್ದೆ. ಮಂತ್ರಿಗಿರಿ ಮತ್ತು ಅಧ್ಯಕ್ಷಗಿರಿಯಲ್ಲಿ ನಾನು ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಿಕೊಂಡಿದ್ದೆ. ಈಗಲೂ ಶಾಸಕರು ಅದನ್ನೆ ಬಯಸುತ್ತಿದ್ದಾರೆ. ಡಿಕೆಶಿ ಎರಡು ದೊಡ್ಡ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ. ಜೊತೆಗೆ ಪಕ್ಷ ಸಂಘಟಿಸುವ ಜವಬ್ದಾರಿ ಕೂಡ ಇದೆ. ಈ ವಿಷಯದಲ್ಲಿ ಹೈಕಮಾಂಡ್ನವರು ಏನು ತೀರ್ಮಾನ ಮಾಡ್ತಾರೋ ನೋಡಬೇಕು ಎಂದು ಹೇಳಿದರು.