Wednesday, January 15, 2025

‘ರಾಮ ಮಂದಿರ ಸ್ಥಾಪನ ದಿನವೆ ನಿಜವಾದ ಸ್ವಾತಂತ್ರ್ಯ ದಿನ’ : RSS ಮುಖ್ಯಸ್ಥರನ್ನು ದೇಶದ್ರೋಹಿ ಎಂದ ರಾಹುಲ್

ದೆಹಲಿ : ರಾಮ ಮಂದಿರ ನಿರ್ಮಾಣದ ನಂತರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂಬ RSS ಮುಖ್ಯಸ್ಥ ಮೋಹನ್​ ಭಾಗವತ್​  ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್​ ಗಾಂಧಿ, ಮೋಹನ್​ ಭಾಗವತ್​ರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.

ನೂತನ ಕಾಂಗ್ರೆಸ್ ಪ್ರಧಾನ ಕಛೇರಿಯಾದ ಇಂದಿರಾ ಭವನ ಉದ್ಘಾಟನೆ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ಭಾಗವತ್ ಅವರ ಹೇಳಿಕೆಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿ ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ಗವಿಮಠದ ಜಾತ್ರೆಯಲ್ಲಿ ಜಿಲೇಬಿ ಹಾಕಿದ ಗವಿಶ್ರೀ : ಲಕ್ಷಾಂತರ ಭಕ್ತರಿಗೆ ದಾಸೋಹ ವ್ಯವಸ್ಥೆ !

ಮುಂದುವರಿದು ಮಾತನಾಡಿದ ರಾಹುಲ್​ ಗಾಂಧಿ ‘ಮೋಹನ್​ ಭಾಗವತ್​ ಹೇಳಿರುವ ಹೇಳಿಕೆ ದೇಶದ್ರೋಹದ ಹೇಳಿಕೆಯಾಗಿದೆ. ಅವರು ಇಡೀ ಸಂವಿಧಾನ ಮತ್ತು ಬ್ರಿಟಿಶರ ವಿರುದ್ದ ನಡೆಸಿದ ಸ್ವಾತಂತ್ರ್ಯವನ್ನು ಅಸಿಂಧು ಎಂದು ಹೇಳಿದ್ದಾರೆ. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳುವುದು ಭಾರತದ ಎಲ್ಲಾ ಸಾರ್ವಜನಿಕರಿಗೂ ಮಾಡುವ ಅವಮಾನ. ಇಂತಹ ಹೇಳಿಕೆಯನ್ನು ನೀಡಿರುವ ಮೋಹನ್ ಭಾಗವತ್​ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಬೇಕು ಏಂದು ರಾಹುಲ್​ ಆಗ್ರಹಿಸಿದರು.

ಏನಿದು ಮೋಹನ್ ಭಾಗವತ್ ವಿವಾದಾತ್ಮಕ ಹೇಳಿಕೆ​ !

ಆರೆಸ್ಸೆಸ್ ಮುಖ್ಯಸ್ಥ ಮೋಹನ್​ ಭಾಗವತ್​ ಸೋಮವಾರ ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ದಿನವನ್ನು “ಭಾರತದ ನಿಜವಾದ ಸ್ವಾತಂತ್ರ್ಯ” ಎಂದು ಉಲ್ಲೇಖಿಸಿದ್ದಾರೆ. ಇಂದೋರ್‌ನಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರಿಗೆ ‘ರಾಷ್ಟ್ರೀಯ ದೇವಿ ಅಹಲ್ಯಾ ಪ್ರಶಸ್ತಿ’ ಪ್ರದಾನ ಮಾಡಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್​ ಭಾಗವತ್ ‘ ರಾಮ ಮಂದಿರದ ಪ್ರತಿಷ್ಠಾಪನೆಯ ದಿನಾಂಕವನ್ನು “ಪ್ರತಿಷ್ಠಾ ದ್ವಾದಶಿ” ಎಂದು ಆಚರಿಸಬೇಕು. ಹಲವಾರು ವರ್ಷಗಳಿಂದ ಶತ್ರುದಾಳಿಯನ್ನು ಎದುರಿಸಿದ ಭಾರತಕ್ಕೆ ರಾಮ ಮಂದಿರ ಸ್ಥಾಪನೆಯಾದ ದಿನ ನಿಜವಾದ ಸ್ವಾತಂತ್ರ್ಯ ದಿನವಾಗಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೆ ರಾಹುಲ್​ ಸೇರಿದಂತೆ ಅನೇಕರು ಮೋಹನ್​ ಭಾಗವತ್​ ನೀಡಿರುವ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

RELATED ARTICLES

Related Articles

TRENDING ARTICLES