ಬೆಂಗಳೂರು : ಸಸ್ಯ ಕಾಶಿ ಲಾಲ್‌ಬಾಗ್‌ನಲ್ಲಿ ನಾಳೆಯಿಂದ 217ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಗಣರಾಜ್ಯೋತ್ಸವ ಅಂಗವಾಗಿ ನಡೆಯುತ್ತಿರುವ ಈ ಫಲಪುಷ್ಪ ಪ್ರದರ್ಶನವು ಮಹರ್ಷಿ ವಾಲ್ಮೀಕಿಯವರ ಜೀವ ಚರಿತೆಯನ್ನು ಒಳಗೊಂಡಿದೆ.
ಇನ್ನೂ.. ನಾಳೆಯಿಂದ ಜನವರಿ 27ರವರೆಗೆ ಒಟ್ಟು 12ದಿನಗಳ ಕಾಲ ನಡೆಯಲಿರುವ ವಿಶ್ವವಿಖ್ಯಾತ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಅವರು ನಾಳೆ ಬೆಳ್ಳಗೆ ಚಾಲನೆ ನೀಡಲಿದ್ದು, ಡಿ.ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು ಭಾಗಿಯಾಗುವ ಸಾಧ್ಯತೆ ಇದೆ. ಈ ಬಾರಿಯ ವಿಶೇಷವಾಗಿ 85 ವಿವಿಧ ಜಾತಿಯನ್ನ ಹೂಗಳನ್ನ ಬಳಸಲಾಗುತ್ತಿದ್ದು, 8ಲಕ್ಷಕ್ಕೂ ಅಧಿಕ ಪಾಟ್ಸ್ ಹಾಗೂ 11ಲಕ್ಷಕ್ಕೂ ಅಧಿಕ ಕಟ್ ಪ್ಲವರ್‌ಗಳ ಬಳಲಾಗುತ್ತಿದೆ.
ಇದನ್ನೂ ಓದಿ: ಕಾವೇರಿ ನದಿಯಲ್ಲಿ ಈಜಲು ಹೋಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾ*ವು !
ಈ ಪ್ರದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ಸಾಧ್ಯತೆ ಇದ್ದು. ಸಾಮಾನ್ಯ ದಿನಗಳಲ್ಲಿ ಬರುವ ವಯಸ್ಕರಿಗೆ 80 ರೂಪಾಯಿ ಟಿಕೆಟ್ ಹಾಗೂ ರಜೆ ದಿನಗಳಲ್ಲಿ ಬರುವವರಿಗೆ 100 ರೂಪಾಯಿ ನಿಗದಿ ಮಾಡಲಾಗಿದೆ. ಉಳಿದಂತೆ ಮಕ್ಕಳಿಗೆ 30 ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಇನ್ನೂ ಶಾಲಾ ಮಕ್ಕಳು ಶಾಲಾ ಸಮವಸ್ತ್ರ ಧರಿಸಿ ಬಂದರೆ ಅಂತಹ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಒಟ್ಟಿನಲ್ಲಿ ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಲಾಲ್ಬಾಗ್ ಸರ್ವ ರೀತಿಯಲ್ಲೂ ಸಿದ್ದಗೊಂಡಿದ್ದು. ನಾಳೆಯಿಂದ ಒಟ್ಟು 12 ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ.