Wednesday, January 15, 2025

ಲಕ್ಷ್ಮೀ ಹೆಬ್ಬಾಳ್ಕರ್​ ಕಾರು ಅಪಘಾತ ಪ್ರಕರಣ : ಹಿಟ್​ ಆ್ಯಂಡ್​ ರನ್​​ ಕೇಸ್​ ದಾಖಲಿಸಿದ ಕಾರು ಚಾಲಕ !

ಬೆಳಗಾವಿ: ನಿನ್ನೆ ಮುಂಜಾನೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕಾರು ಅಪಾಘಾತವಾದ ಪ್ರಕರಣದಲ್ಲಿ ಲಕ್ಷ್ಮೀ ಹೆಬ್ಬಳ್ಕರ್​ ಗನ್​​ಮ್ಯಾನ್​ ಕಾರ್​ ಡ್ರೈವರ್ ವಿರುದ್ದ ದೂರು ನೀಡಿದ್ದರು. ಕಾರು ಚಾಲಕ ಶಿವಪ್ರಸಾದ ಮತ್ತೊಂದು ದೂರು ದಾಖಲು ಮಾಡಿದ್ದು. ಅಪರಿಚಿತ ಕಂಟೇನರ್​ ವಿರುದ್ದ ಹಿಟ್​ ಆ್ಯಂಡ್​ ಡ್ರೈವ್ ದೂರನ್ನು ದಾಖಲು ಮಾಡಿದ್ದಾರೆ.

ಈ ದೂರಿನ ಪ್ರಕಾರ್ ಓವರ್‌ಟೇಕ್ ಮಾಡುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಆಯ್ತಾ ಎಂದು ಪ್ರಶ್ನೆ ಮೂಡಿದೆ. ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಿನ್ನೆ ಬೆಳಗ್ಗೆ 5 ಗಂಟೆಗೆ ಕಾರು ಅಪಘಾತ ಸಂಭವಿಸಿತ್ತು.

ದೂರು ದಾಖಲಿಸಿರುವ ಡ್ರೈವರ್ ಶಿವಪ್ರಸಾದ ‘ ನಾನು ಸಚಿವರ ಸರ್ಕಾರಿ ಕಾರು KA01 GA977 ಚಲಾಯಿಸುತ್ತಿದ್ದೆ. ಕಾರಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಸಚಿವರ ಅಂಗರಕ್ಷಕ ಈರಪ್ಪ ಹುಣಶಿಕಟ್ಟಿ ಇದ್ದರು. ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದೆವು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಧಾರವಾಡ-ಬೆಳಗಾವಿ ಮಧ್ಯದ ರಾಷ್ಟ್ರೀಯ ಹೆದ್ದಾರಿ 48ರ ಮೇಲಿದ್ದೆವು. ನಮ್ಮ ಮುಂದೆ ಲೈನ್ 1 ರಲ್ಲಿ ಹೋಗುತ್ತಿದ್ದ ಕಂಟೇನರ್ ಟ್ರಕ್ ಚಾಲಕ ಯಾವುದೇ ಮುನ್ಸೂಚನೆ ಕೊಡದೇ ಎಡಬದಿಗೆ ಬಂದ. ಆಗ ಎಡಬದಿಗೆ ತೆಗೆದುಕೊಂಡರೂ ಟ್ರಕ್ ಚಾಲಕ ಕಾರಿನ ಬಲ ಬದಿಗೆ ತಾಗಿಸಿದ.

ಇದನ್ನೂ ಓದಿ : ಮಸೀದಿಯಾಗಿರುವ ದೇವಾಲಯಗಳನ್ನು ಹಿಂತಿರುಗಿಸಿ : ಮೋದಿಗೆ ಅಖಾಡ್ ಪರಿಷತ್​​ ಮುಖ್ಯಸ್ಥರ ಆಗ್ರಹ !

ಕಾರು ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣ, ಗಂಭೀರ ಗಾಯಗಳಾಗಿವೆ. ಅಪಘಾತ ಮಾಡಿ ವಾಹನ ನಿಲ್ಲಿಸದೇ ಲಾರಿ ಡ್ರೈವರ್ ಹೋಗಿದ್ದಾನೆ ಎಂದು ದೂರು ದಾಖಲಿಸಲಾಗಿದೆ.

ಚಾಲಕ ಶಿವಪ್ರಸಾದ ನೀಡಿರುವ ಈ ದೂರಿನಲ್ಲಿ ಎಲ್ಲಿಯೂ ಕೂಡ ನಾಯಿ ಅಡ್ಡಬಂದ ವಿಚಾರವನ್ನು ಪ್ರಸ್ತಾಪಿಸಿಲ್ಲ. ಇವರು ನೀಡಿರುವ ಈ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು BNS ಕಾಯ್ದೆಯಡಿ 281, 125A,125B ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆಯಡಿ 134, 187 ಅಡಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES