Wednesday, January 15, 2025

ಕಾವೇರಿ ನದಿಯಲ್ಲಿ ಈಜಲು ಹೋಗಿ ಇಂಜಿನಿಯರಿಂಗ್​ ವಿದ್ಯಾರ್ಥಿ ಸಾ*ವು !

ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಮಂಡ್ಯ  ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯಲ್ಲಿ ನಡೆದಿದ್ದು. ಮೃತ ಯುವಕನನ್ನು ಶ್ರೇಯಸ್​ ಎಂದು ಗುರತಿಸಲಾಗಿದೆ.

ಮೈಸೂರಿನ ನಾಗನಹಳ್ಳಿಯ ನಿವಾಸಿಯಾಗಿರುವ ಮೃತ ಶ್ರೇಯಸ್​ (19) ಮಂಡ್ಯದ ಪಾಲಹಳ್ಳಿ ಸಮೀಪವಿರುವ MIT ಕಾಲೇಜಿನಲ್ಲಿ ಬಿ.ಇ (ಬ್ಯಾಚುಲರ್​ ಆಫ್​ ಇಂಜಿನಿಯರಿಂಗ್​) ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದನು.  ಇಂದು ತನ್ನ ಮೂರು ಜನ ಸ್ನೇಹಿತರೊಂದಿಗೆ ಬಲಮುರಿಗೆ ಈಜಲೆಂದು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ : ರಾಜ್ಯ ಸರ್ಕಾರ ಗೋ ಮಾತೆಯ ಶಾಪಕ್ಕೆ ಗುರಿಯಾಗಲಿದೆ : ಕೆ.ಎಸ್​ ಈಶ್ವರಪ್ಪ

ಮೂವರಲ್ಲಿ ಶ್ರೇಯಸ್​ಗೆ ಈಜು ಬರುತ್ತಿದ್ದರಿಂದ ಶ್ರೇಯಸ್​ ಈಜಾಡಲು ನದಿಗೆ ಇಳಿದಿದ್ದನು. ಆದರೆ ಉಳಿದ ಸ್ನೇಹಿತರಿಗೆ ಈಜಲು ಬರದ ಕಾರಣ ಅವರು ದಡದಲ್ಲೆ ಕುಳಿತಿದ್ದರು. ಆದರೆ ನದಿಯಲ್ಲಿದ್ದ ಸುಳಿಗೆ ಸಿಲುಕಿದ ಶ್ರೇಯಸ್​​ ಈಜಲು ಆಗದೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ KRS ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES