Wednesday, January 15, 2025

ಹಸುವಿನ ಕೆಚ್ಚಲು ಕೊಯ್ದ ಪ್ರಕರಣ : ಪ್ರಾಣಿ ರಕ್ಷಣೆಗೆ ಕಂಟ್ರೋಲ್​ ರೂಂ ರಚಿಸಿದ BBMP !

ಬೆಂಗಳೂರು : ಚಾಮರಾಜ ಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದಿಂದ ಎಚ್ಚೆತ್ತಿರುವ ಬಿಬಿಎಂಪಿ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದು. ಇದಕ್ಕಾಗಿ ಕಂಟ್ರೋಲ್​ ರೂಂ ರಚಿಸಿದೆ ಎಂದು ಮಾಹಿತಿ ದೊರೆತಿದೆ.

ಹೌದು.. ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲುಮ ಕೊಯ್ದ ಪ್ರಕರಣ ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಈ ಘಟನೆ ಕುರಿತು ರಾಜ್ಯ ಬಿಜೆಪಿ ಪ್ರತಿಭಟನೆ ಮಾಡಿ, ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿತ್ತು. ಇದರಿಂದ ಎಚ್ಚೆತ್ತಿರುವ ಬಿಬಿಎಂಪಿ ಪ್ರಾಣಿಗಳ ರಕ್ಷಣೆಗೆ ಕಂಟ್ರೋಲ್​ ರೂಂ ಸ್ಥಾಪನೆ ಮಾಡಿದೆ. ಪ್ರಾಣಿಗಳ ಮೇಲೆ ಹಲ್ಲೆ ಹಾಗೂ ಪ್ರಾಣಿಗಳ ರಕ್ಷಣೆಗಾಗಿ ಎಮರ್ಜೆನ್ಸಿ ಕಾಲ್ ರಚಿಸಿರುವ ಬಿಬಿಎಂಪಿ, ಈ ಕುರಿತು ದೂರು ನೀಡಲು 1533 ಎಂಬ ಟೋಲ್ ಫ್ರೀ ನಂಬರ್ ನೀಡಲಾಗಿದೆ ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ : ಹಿರಿಯ ನಟ ಸರಿಗಮ ವಿಜಿ​ ನಿಧನ !

ಸಮುದಾಯ ಪ್ರಾಣಿಗಳಿಗಳ ಸಮಸ್ಯೆಗಳನ್ನು ಕಾಲಮಿತಿಯೊಳಗಾಗಿ ಹಾಗೂ ತ್ವರಿತಗತಿಯಲ್ಲಿ ಬಗೆಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ದೊರೆತಿದ್ದು. ಪ್ರಾಣಿಗಳ ಜನನ ನಿಯಂತ್ರಣ, ಆಂಟಿ-ರೇಬಿಸ್ ವ್ಯಾಕ್ಸಿನೇಷನ್ ವಿನಂತಿಗಳು, ನಾಯಿ ಕಡಿತ , ಪ್ರಾಣಿಗಳಿಗೆ ಆಹಾರ ನೀಡುವವರಿಗೆ ಕಿರುಕುಳ, ಪ್ರಾಣಿಗಳ ಮೇಲಿನ ಕ್ರೌರ್ಯ, ಸೇರಿದಂತೆ ಪ್ರತಿ ದೂರುಗಳ ಕುರಿತು ಕ್ರಮ ಕೈಗೊಳ್ಳಲು ಈ ಕಂಟ್ರೋಲ್​ ರೂಂ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES