ಮೈಸೂರು : ಗರ್ಭಿಣಿ ಹೆಂಡತಿಯ ಹೆರಿಗೆಗಾಗಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯೋರ್ವ ಆಸ್ಪತ್ರೆ ಆವರಣದಲ್ಲಿ ಸಾವನ್ನಪ್ಪಿದ್ದು. ಮೃತ ವ್ಯಕ್ತಿಯನ್ನು 47 ವರ್ಷದ ನಾಗೇಶ್ ಎಂದು ಗುರುತಿಸಲಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ಗ್ರಾಮದ ನಾಗೇಶ್ ಹೆಂಡತಿಯ ಹೆರಿಗೆಗಾಗಿ ತನ್ನ ಪತ್ನಿಯನ್ನು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದನು. ನಗರದ ಚೆಲುವಾಂಬ ಆಸ್ಪತ್ರೆಗೆ ಪತ್ನಿಯನ್ನು ದಾಖಲಿಸಿದ್ದನು. ರಾತ್ರಿ ಹೆಂಡತಿಗೆ ಹೆರಿಗೆಯಾಗಿ ಮಗವು ಜನಿಸಿತ್ತು.
ಇದನ್ನೂ ಓದಿ :ಸ್ನೇಹಿತನ ಕೊ*ಲೆ ಮಾಡಿ, ಶಿರಾಡಿಘಾಟ್ ಪ್ರಪಾತಕ್ಕೆ ಎಸೆದ ಕೊ*ಲೆಗಡುಕರು !
ಆದರೆ ನಾಗೇಶ್ ರಾತ್ರಿ 10:30ರ ಸುಮಾರಿಗೆ ನಿದ್ದೆಯ ಕಾರಣದಿಂದ ಆಸ್ಪತ್ರೆಯ ಮುಂಭಾಗದಲ್ಲಿ ಬಂದು ಮಲಗಿದ್ದನು. ಬೆಳಿಗ್ಗೆ 7 ಗಂಟೆಗೆ ಬಂದು ನೋಡಿದಾಗ ನಾಗೇಶ್ ಮೃತಪಟ್ಟಿರುವು ತಿಳಿದು ಬಂದಿದೆ. ಹೃದಯಾಘಾತ ಅಥವ ಅತಿಯಾದ ಚಳಿಯಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು. ಮೃತದೇಹವನ್ನು ಶವಗಾರಕ್ಕೆ ರವಾನೆ ಮಾಡಲಾಗಿದೆ.
ಆದರೆ ದುರಾದರಷ್ಟವಶಾತ್ ಹುಟ್ಟಿದ ಮಾರನೇ ದಿನಕ್ಕೆ ಮಗು ತನ್ನ ತಂದೆಯನ್ನು ಕಳೆದುಕೊಂಡಿದ್ದು. ಈ ಘಟನೆ ಎಲ್ಲಾರ ಕಣ್ಣಾಲಿಗಳಲ್ಲಿ ಕಣ್ಣೀರು ಒಸರುವಂತೆ ಮಾಡಿದೆ.