ಬೆಂಗಳೂರು : ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ‘ ಹಸುಗಳ ಕೆಚ್ಚಲು ಕೊಯ್ದ ವಿಚಾರವನ್ನು ನಾವು ಖಂಡಿಸುತ್ತೇವೆ. ಇದಕ್ಕೆ ಕಾನೂನು ಪ್ರಕಾರ ಕ್ರಮ ಆಗುತ್ತೆ. ಆದರೆ ಬಿಜೆಪಿಯವರಿಗೆ ಹಸುಗಳ ಮೇಲೆ ಇದ್ದ ಪ್ರೀತಿ, ಚಿಕ್ಕ ಬಾಲಕಿಯರ ಮೇಲೂ ಇರಬೇಕು. ಇವರ ನಾಯಕರ ಮೇಲೆ ಪೋಕ್ಸೋ ಕೇಸ್ ಇದೆ, ಹಾಸನ ಹೆಣ್ಣು ಮಕ್ಕಳ ಬಗ್ಗೆ ಕೂಡ ಬಿಜೆಪಿಯವರಿಗೆ ಕರುಣೆ ಇರಬೇಕು ಎಂದು ಹೇಳಿದರು.
ಗುತ್ತಿಗೆದಾರರ ವಿಚಾರವಾಗಿ ಪ್ರಿಯಾಂಕ್ ಮಾತು !
ಗುತ್ತಿಗೆದಾರರು ಪತ್ರ ಬರೆದಿರುವ ವಿಚಾರದ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ ‘ನಾನು ಪತ್ರ ಇನ್ನೂ ನೋಡಿಲ್ಲ, ಮೊನ್ನೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಭೇಟಿ ಮಾಡಿದ್ದರು. ಅವರಿಗೆ ಇನ್ನು ಮೂನಾಲ್ಕು ವರ್ಷದ ಹಣ ಬಾಕಿ ಇದೆ. ಹಿಂದಿನ ಸರ್ಕಾರ ನಿಯಮ ಮಿರಿ ಗುತ್ತಿಗೆ ಕೊಟ್ಟಿದ್ದಾರೆ. ನೂರು ರೂಪಾಯಿ ಕೆಲಸಕ್ಕೆ 1000 ರೂಪಾಯಿ ನೀಡಿದ್ದಾರೆ.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತದಲ್ಲಿ ಯುವ ಪತ್ರಕರ್ತ ಧಾರುಣ ಸಾ*ವು !
ಬಿಜೆಪಿಗರು ಸಾಲ ಮಾಡಿ ತುಪ್ಪ ತಿಂದಿದ್ದಾರೆ. ಇದರ ದಾಖಲೆ ನಾನು ಇಡುತ್ತೇನೆ,ಸಾವಿರಾರು ಕೋಟಿ ಬಾಕಿ ಇಟ್ಟು ಹೋಗಿದ್ದಾರೆ, ಅವರು ಮಾಡಿದ ಬಾಕಿ ನಾವು ತಿರುಸುತ್ತಿದ್ದೇವೆ, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ಅದೇ ರೀತಿ ಅನುದಾನ ಎಷ್ಟಿದೆ ಅದರ ಮೇಲೆ ಕೆಲಸ ಮಾಡಿಸಬೇಕು. ಆದರೆ ಬಿಜೆಪಿಗರು ನಿಯಮಬಾಹಿರವಾಗಿ ಕೆಲಸ ಮಾಡಿದ್ದಾರೆ. ಸಾಕಷ್ಟು ಗುತ್ತಿಗೆದಾರರು ಬಂದು ಸಮಸ್ಯೆ ಹೇಳಿದ್ದಾರೆ, ಜೇಷ್ಠತೆ ಮೇಲೆ ನಾವು ಹಣ ಬಿಡುಗಡೆ ಮಾಡುತ್ತಿದ್ದೇವೆ, ನಾವು ವಿವೇಚನೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.