Tuesday, January 14, 2025

ಸಾಬ್ರುಗೂ ಎರಡು ಮಕ್ಕಳು ಮಾಡಿಕೊಳ್ಳಿ ಅಂತ ಸಿಎಂ ಹೇಳಲಿ : ಅಶೋಕ್

ಬೆಂಗಳೂರು: ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಎರಡು ಮಕ್ಕಳು ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ, ವಿಪಕ್ಷ ನಾಯಕ ಆರ್​.ಅಶೋಕ್​  ‘ ಸಿಎಂ ಅಲ್ಲಿ ಹೋಗಿ ಎರಡೆ ಮಕ್ಕಳು ಮಾಡಿ ಎಂದು ಹೇಳಿದ್ದಾರೆ. ಆದರೆ ಇದೇ ಮಾತನ್ನು ಹೋಗಿ ಸಾಬರ ಬಳಿ ಹೇಳೋಕಾಗಲ್ಲ, ಸಿದ್ದರಾಮಯ್ಯ ಒಂದು ಕಣ್ಣಿಗೆ ಸುಣ್ಣ ಮತ್ತು ಇನ್ನೊಂದು ಕಣ್ಣಿಗೆ ಬೆಣ್ಣೇ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರ್​.ಅಶೋಕ್​ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ನೂರು ಹಸುಗಳನ್ನ ಕೊಟ್ಟರೂ ಜಮೀರ್​​ ಪಾಪ ಕಡಿಮೆಯಾಗಲ್ಲ : ಛಲವಾದಿ ನಾರಯಣಸ್ವಾಮಿ

ಚಾಮರಾಜಪೇಟೆ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅಶೋಕ್​ !

ಚಾಮರಾಜಪೇಟೆಯಲ್ಲಿ ನಡೆದ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸಿದ ಘಟನೆ ಎಂದ ಆರ್​.ಅಶೋಕ್​, ಇದೊಂದು ಹೀನ ಕೃತ್ಯ, ಸಂಕ್ರಾಂತಿ ಹಬ್ಬದ ವೇಳೆ ಮನಸ್ಸಿಗೆ ಘಾಸಿಯಾಗುವಂತ ಕೆಲಸವನ್ನು ಮಾಡಿದ್ದಾರೆ.
ನಾವು ಸರ್ಕಾರಕ್ಕೆ ಆಗ್ರಹ ಮಾಡಿದ್ದೆವು. ಈಗ ಕಾಟಾಚಾರಕ್ಕೆ ಪೊಲೀಸ್ ಇಲಾಖೆ ಸೈಯದ್ದ್ ಅಂತ ಬಂದಿಸಿದ್ದಾರೆ
ಬಿಹಾರಿ ಅಂತ ಹೇಳ್ತಾ ಇದ್ದಾರೆ. 10 ವರ್ಷ ಇಲ್ಲೇ ಇರೋವ್ನು ಹೇಗೆ ಬಿಹಾರಿ ಆಗ್ತಾನೆ, ಮುಖ್ಯವಾಗಿ ಇವನ ಹಿಂದೆ ಯಾರಿದ್ದಾರೆ ಅನ್ನೋದು ಮುಖ್ಯ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಆರ್​.ಅಶೋಕ್​ ‘ತನಿಖೆ ಮಾಡದೇ ಆರೋಪಿಯನ್ನು ಜೈಲಿಗೆ ಕಳಿಸಿರೋದು ಎಷ್ಟು ಸರಿ, ಬೇಕಾ ಬಿಟ್ಟಿ ಅರೆಸ್ಟ್ ಮಾಡಿದ್ದಾರೆ. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡೋದು ಬಿಡೋವರೆಗು ಇದು ಹೀಗೆ ಮುಂದುವರೆಯಲಿದೆ, ಹಸುವಿನ ಕೆಚ್ಚಲು ಕುಯ್ಯೂದು ಅಕ್ಷ್ಯಮ್ಯ ಅಪರಾಧ. ಆದರೆ ಸರ್ಕಾರ ಇದನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಜಮೀರು ಹೊಸ ಹಸುಗಳನ್ನು ಕೊಡಿಸುತ್ತೇವೆ ಎಂದು ಹೇಳಿದ್ದಾರೆ. ಅದೇನು ದೊಡ್ಡ ವಿಚಾರ ಅಲ್ಲ. ಅದರೆ ಸರ್ಕಾರ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಲಿ ಎಂದು ನಾವು ಆಗ್ರಹಿಸುತ್ತೇವೆ ಎಂದು ಹೇಳಿದರು.

 

RELATED ARTICLES

Related Articles

TRENDING ARTICLES