Monday, January 13, 2025

ನೂರು ಹಸುಗಳನ್ನ ಕೊಟ್ಟರೂ ಜಮೀರ್​​ ಪಾಪ ಕಡಿಮೆಯಾಗಲ್ಲ : ಛಲವಾದಿ ನಾರಯಣಸ್ವಾಮಿ

ಬೆಂಗಳೂರು : ಚಾಮರಾಜಪೇಟೆಯಲ್ಲಿ ನಡೆದಿರುವ ಅಮಾನವೀಯ ಘಟನೆ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಪರಿಷತ್​ ನಾಯಕ ಛಲವಾದಿ ನಾರಯಣ್​ ಸ್ವಾಮಿ ‘ ನಡೆದಿರುವ ಘಟನೆ ಮನುಷ್ಯರು ಮಾಡುವ ಕೆಲಸವಲ್ಲ, ಕಾಂಗ್ರೆಸ್ ಸರ್ಕಾರ ಅಂದ್ರೆನೇ ಕೆಚ್ಚಲು‌ಕೊಯ್ಯುವ ಸರ್ಕಾರ. ಮೂರು ಹಸು ಕೊಡಿಸುತ್ತೇವೆ ಎಂದು ಜಮೀರ್​ ಹೇಳಿದ್ದಾರೆ. ಆದರೆ ನೂರು ಹಸುಗಳನ್ನು ಕೊಡಿಸಿದರು ಜಮೀರ್​ ಮಾಡಿರುವ ಪಾಪ ಕಡಿಮೆಯಾಗಲ್ಲ.

ಕೇಸ್ ಮುಚ್ಚಿಹಾಕಲು ಅಮಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲ ಓಲೈಕೆ ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್​ ಕೆಟ್ಟ ಪರಂಪರೆಗೆ ನಾಂದಿ ಹಾಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇವರು ಅಧಿಕಾರದ ಕಾದಾಟದಲ್ಲಿ ರಾಜ್ಯವನ್ನು ಮರೆತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಪತ್ನಿಯೊಂದಿಗೆ ಕಣ್ವ ಜಲಾಶಯದಲ್ಲಿ ವಾಟರ್​ ಬೈಕ್​ ರೈಡ್​ ನಡೆಸಿದ ಸಿ.ಪಿ ಯೋಗೇಶ್ವರ್​ !

ಪ್ರಿಯಾಂಕ್​ ಖರ್ಗೆ ವಿರುದ್ದ ಕಿಡಿಕಾರಿದ ನಾರಾಯಣಸ್ವಾಮಿ !

ಬಿಜೆಪಿಯವರು ಹಳೆ ಬ್ಯಾಲೆನ್ಸ್​ ಬಿಟ್ಟುಹೋಗಿದ್ದಾರೆ ಎಂಬ ವಿಚಾರದ ಕುರಿತು ಮಾತನಾಡಿದ ನಾರಯಣ್​ ಸ್ವಾಮಿ ‘ ನಮ್ಮ ಸರ್ಕಾರ ಬರುವ ಮುಂಚೆ ಕಾಂಗ್ರೆಸ್​ ಸರ್ಕಾರ 2 ಲಕ್ಷ ಕೋಟಿ ಬಾಕಿ ಉಳಿಸಿಹೋಗಿತ್ತು. ನಾವು ಅದನ್ನು ಕ್ಲಿಯರ್​ ಮಾಡಿದ್ದೆವು. ಈಗಲೂ ಅದೇ ರೀತಿ ಕ್ಲಿಯರ್​ ಮಾಡಿ. ನೀವೇನು ಯಾರಪ್ಪನ ಮನೆಯದ್ದು ಕೊಡುತ್ತಿಲ್ಲ.

60% ಕಮಿಷನ್ ಕೊಡಬೇಕಾಗಿದೆ ಎಂದು ಗುತ್ತಿಗೆದಾರರು ಹೇಳ್ತಿದಾರೆ. ಬಹಿರಂಗವಾಗಿ ಕಳಪೆ ಕಾಮಗಾರಿ ಮಾಡಿದ್ದೀರ, ಬಿಲ್​ ಮಾಡಿಲ್ಲ, ಎಂದು ಹೆದರುಸ್ತಾರಂತೆ. ಈ ಸರ್ಕಾರ ಆದಷ್ಟು ಬೇಗನೆ ಹೋಗುವ ಲಕ್ಷಣ ಕಾಣ್ತಿದೆ. ಈ ಹಗ್ಗ ಜಗ್ಗಾಟದಲ್ಲಿ ಆದಷ್ಟು ಬೇಗ ಇವರ ಹಗ್ಗ ಕಟ್​ ಆಗಲಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES