Thursday, September 11, 2025
HomeUncategorizedಸೂರ್ಯರಶ್ಮಿ ದರ್ಶನಕ್ಕೆ ಸಕಲ ಸಿದ್ದತೆ ಕೈಗೊಂಡ ಗವಿಗಂಗಾಧರೇಶ್ವರ ದೇವಾಲಯ !

ಸೂರ್ಯರಶ್ಮಿ ದರ್ಶನಕ್ಕೆ ಸಕಲ ಸಿದ್ದತೆ ಕೈಗೊಂಡ ಗವಿಗಂಗಾಧರೇಶ್ವರ ದೇವಾಲಯ !

ಬೆಂಗಳೂರ : ನಾಳೆ 2025ರ ಮೊದಲ ಹಬ್ಬ ಮಕರ ಸಂಕ್ರಮಣದ ಸಂಭ್ರಮ ರಾಜ್ಯದೆಲ್ಲೆಡೆ ಮನೆ ಮಾಡಿದೆ. ಸಂಕ್ರಾಂತಿಯಂದು ಅನೇಕ ವಿಶೇಷಗಳು ಜರುಗಲಿದ್ದು. ಬೆಂಗಳೂರಿನ ಗವಿಪುರದಲ್ಲಿರುವ ಗವಿಗಂಗಧಾರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವನ ಮೇಲೆ ಸ್ಪರ್ಶಿಸಿಲಿದೆ.. ಈ ಅದ್ಭುತ ಕ್ಷಣಕ್ಕೆ ಭಕ್ತರೆಲ್ಲಾ ಕಾಯುತ್ತಿದ್ದು.  ದೇವಾಲಯವು ಸಕಲರೀತಿಯಲ್ಲೂ ತಯಾರಿ ಮಾಡಿಕೊಂಡಿದೆ.

ಹೌದು.. ಧನುರ್ಮಾಸ ಮುಗಿಯುತ್ತಿರುವ ಕಾರಣ ನಾಳೆ ಬೆಳ್ಳಗೆಯಿಂದಲೇ ಗವಿಗಂಗಧಾರೇಶ್ವರ ದೇವಾಲಯದಲ್ಲಿ ಬಿಶೇಷ ಪೂಜೆ ಇರಲಿದೆ. ಮಧ್ಯಾಹ್ನ ಒಂದು ಗಂಟೆಯವರೆಗೂ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿದ್ದು. ಅದಾದ ನಂತರ ದೇವಾಲಯದಲ್ಲಿ ಶುದ್ದಿ ಕಾರ್ಯ ನಡೆಯಲಿದೆ. ಇನ್ನೂ..ಈ ಬಾರಿ ಸಂಜೆ 5.14 ರಿಂದ 5.17ರವರೆಗೆ ಅಂದರೆ ಮೂರು ನಿಮಿಷಗಳ ನಡುವೆ ಸೂರ್ಯ ರಶ್ಮಿ ಗವಿಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸಲಿದೆ. ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಾಗುವ ಸೂರ್ಯ ದೇವ ಶಿವದರ್ಶನ ಪಡೆಯುವ ಸಮಯವಿದು. ಈ ವೇಳೆ ಶಿವನ ವಿಗ್ರಹಕ್ಕೆ ಎಳನೀರು ಮತ್ತು ಕ್ಷೀರದಿಂದ ಅಭಿಷೇಕ ಮಾಡಲಾಗುತ್ತದೆ.

ಇದನ್ನೂ ಓದಿ : ಸಾಬ್ರುಗೂ ಎರಡು ಮಕ್ಕಳು ಮಾಡಿಕೊಳ್ಳಿ ಅಂತ ಸಿಎಂ ಹೇಳಲಿ : ಅಶೋಕ್

ಇನ್ನೂ ಶಿವನನ್ನು ಸೂರ್ಯ ರಶ್ಮಿ ಸ್ಪರ್ಶಿಸುವ ಅಪರೂಪದ ಘಳಿಗೆಯನ್ನ ಕಣ್ತುಂಬಿಕೊಳ್ಳಲು ಭಕ್ತಾದಿಗಳು ಕಾತುರದಿಂದ ಕಾಯುತ್ತಿರುತ್ತಾರೆ.. ಹೀಗಾಗಿ ದೇವಾಸ್ಥಾನದ ಆವರಣದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿ ಅದ್ಬುತ ಘಳಿಗೆಯನ್ನ ಕಣ್ತುಂಬಿಕೊಳ್ಳಲು ಅವಕಾಶ, ಮಾಡಿಕೊಡಲಗುತ್ತದೆ. ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿದು ಬರಲಿದೆ.

ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ ಆರಂಭ !

ಇನ್ನೂ.. ಈ ಮಕರ ಸಂಕ್ರಮಣ ಹಲವು ಅದ್ಬತಗಳಿಗೆ ಕಾರಣವಾಗುತ್ತದೆ. ಒಂದು ಕಡೆ ಗವಿಗಂಗಧಾರೇಶ್ವರ ದೇವಾಲಯದಲ್ಲಿ ಸೂರ್ಯನ ಕಿರಣವು ಶಿವನನ್ನ‌ ಸ್ಪರ್ಶಿಸಿದರೇ. ಮತ್ತೊಂದು ಕಡೆ ಶಬರಿಮಲೆ ಅಯ್ಯಪ್ಪನ ದೇಗುಲದಲ್ಲಿ ಮಕರ ಜ್ಯೋತಿ ಕಾಣಿಸಿಕೊಳ್ಳುತ್ತದೆ.

ಇನ್ನೂ ಈಗಾಗಲೇ ಕಳೆದ ಎರಡು ದಿನದಿಂದಲೂ ಅಯ್ಯಪ್ಪ ದೇಗುಲದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿದೆ. ಇಂದು ಪಂಪಾದಲ್ಲಿ ದೀಪೋತ್ಸವ ನಡೆದಿಯಲ್ಲಿದ್ದು, ನಾಳೆ ಅಂದರೆ ಜನವರಿ 14ರಂದು ಸಂಜೆ 5ಕ್ಕೆ ತಿರುವಾಭರಣ ಘೋಷಯಾತ್ರೆ ಶರಂಗುತ್ತಿಗೆ ಆಗಮಿಸುತ್ತದೆ. ನಂತರ ಸಂಜೆ 6.30ಕ್ಕೆ ಅಯ್ಯಪ್ಪನಿಗೆ ಚಿನ್ನಾಭರಣ  ತೊಡಿಸಿ ದೀಪಾರಾಧನೆ ಮಾಡಲಾಗುತ್ತದೆ. ಇದಾದ ಬಳಿಕ ಭಕ್ತರೆಲ್ಲರೂ ವರುಷ ಪೂರ್ತಿ ಕಾತುರದಿಂದ ಕಾಯುವ  ಮಕರಜ್ಯೋತಿಯ ದರ್ಶನವಾಗುತ್ತದೆ. ಇನ್ನೂ ವರುಷಕ್ಕೆ ಒಮ್ಮೆ ಅಯ್ಯಪ್ಪ ಸ್ವಾಮಿಯೂ ಈ ರೀತಿ ಜ್ಯೋತಿ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾರೆ ಎಂಬ ನಂಬಿಕೆ ಜನರಲ್ಲಿ ಇದೆ.

ಒಟ್ನಲ್ಲಿ ವರುಷದ ಮೊದಲ ಹಬ್ಬ ಸಂಕ್ರಾಂತಿಯ ಸಂಭ್ರಮ ಜೊಇರಾಗಿದ್ದು.., ನಾಡಿನೆಲ್ಲೆಡೆ ಹಬ್ಬದ ತಯಾರಿ ಭರದಿಂದ ಸಾಗುತ್ತಿದೆ. ಜೊತೆಗೆ ಮಕರ ಜ್ಯೋತಿ ಹಾಗೂ ಶಿವನ ಮೇಲೆ ಸೂರ್ಯನ ರಶ್ಮಿ ಬೀಳುವ ಅದ್ಭತ ಘಳಿಗೆಯನ್ನ ಕಣ್ತುಂಬಿಕೊಳ್ಳಲು ಇಡೀ ಭಕ್ರಗಣ ಕಾತುರದಿಂದ ಕಾಯ್ತಾ ಇರುವುದಂತೂ ನಿಜ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments