ರಾಮನಗರ: ಶಾಸಕ ಸಿ.ಪಿ ಯೋಗೇಶ್ವರ್ ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆ ಆರಂಭಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಶಾಸಕ ಸಿ,ಪಿ ಯೋಗೇಶ್ವರ್ ತಮ್ಮ ಪತ್ನಿಯೊಂದಿಗೆ ವಾಟರ್ ಬೈಕ್ ನಡೆಸುವ ಮೂಲಕ ಕಾಲಕಳೆದಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಕಣ್ವ ಜಲಾಶಯದಲ್ಲಿ ವಾಟರ್ ಬೋಟಿಂಗ್ ಅನ್ನು ಆರಂಭಿಸಲು ಸಿದ್ದತೆ ಆರಂಭಿಸಿದ್ದು. ಈ ವೇಳೆ ಶಾಸಕ ಸಿ.ಪಿ ಯೋಗೇಶ್ವರ್ ಕಣ್ವ ಜಲಾಶಯದಲ್ಲಿ ವಾಟರ್ ಬೋಟ್ ಓಡಿಸುವ ಸಂಭ್ರಮಿಸಿದ್ದಾರೆ. ಈ ವೇಳೆ ಅವರ ಧರ್ಮ ಪತ್ನಿ ಶೀಲಾ ಯೋಗೇಶ್ವರ್ ಕೂಡ ಅವರ ಜೊತೆಗೆ ಇದ್ದರು.
ಇದನ್ನೂ ಓದಿ : ಹಸು ಮೇಲಿರೋ ಕಾಳಜಿ, ದಲಿತ ಹೆಣ್ಮಕ್ಕಳ ಮೇಲೆಯೂ ಇರಲಿ : ಪ್ರಿಯಾಂಕ ಖರ್ಗೆ
ನಿನ್ನೆ(ಜ.12) ಸಂಜೆ ಪ್ರಾಯೋಗಿಕ ಬೋಟಿಂಗ್ ರೈಡ್ ಪರೀಕ್ಷೆ ನಡೆಸಿದ ಯೋಗೇಶ್ವರ್ ಮತ್ತು ಅವರ ಪತ್ನಿ ಕೆಲ ಕಾಲ ರಿಲ್ಯಾಕ್ಸ್ ಮೂಡ್ನಲ್ಲಿ ಕಾಲ ಕಳೆದಿದ್ದಾರೆ.