ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದೇಶದಲ್ಲಿ ಮಾತ್ರವಲ್ಲ. ಇದೀಗ ವಿಶ್ವಮಟ್ಟದಲ್ಲೂ ಸದ್ದು ಮಾಡ್ತಿದೆ. ಯಾಕಂದ್ರೆ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚಾಗ್ತಿರೋದ್ರಿಂದ, ಬೆಂಗಳೂರು ಟ್ರಾಫಿಕ್ ವಿಶ್ವಮಟ್ಟಲ್ಲಿ ಹೆಸರಗಿದೆ. ಹಾಗಾದ್ರೆ ಬೆಂಗಳೂರು ಟ್ರಾಫಿಕ್ ಜಾಂ ವಿಶ್ವಮಟ್ಟದಲ್ಲೇ ಎಷ್ಟನೇ ಸ್ಥಾನದಲ್ಲಿ ಇದೆ ಅಂತೀರಾ ಈ ಸ್ಟೋರಿ ನೋಡಿ.
ಹೌದು ರಾಜ್ಯ ರಾಜಧಾನಿ ಬೆಂಗಳೂರು ಸಿಟಿ ಅಂದ್ರೆ ಸಾಕು ಜನರಿಗೆ ಥಟ್ ಅಂತಾ ನೆನಪು ಆಗೋದೆ ಟ್ರಾಫಿಕ್ ಸಮಸ್ಯೆ,ಅಲ್ಲದೇ ಬ್ರಾಂಡ್ ಬೆಂಗಳೂರಿಗೆ ಎದುರಾಗಿರುವ ಅತಿ ದೊಡ್ಡ ಸಮಸ್ಯೆ ಎಂದರೆ ಅದುವೇ ಟ್ರಾಫಿಕ್ ಸಮಸ್ಯೆ, ಹೀಗಾಗಿ ಈ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕ್ಬೇಕು ಅಂತಾ ಒಂದ್ಕಡೆ ಪೊಲೀಸ್ ಇಲಾಖೆ ಪ್ಲಾನ್ ಮಾಡಿದ್ರೆ, ಮತ್ತೊಂದು ಕಡೆ ಬಿಬಿಎಂಪಿ ಕೂಡ ಸರ್ಕಸ್ ನಡೆಸುತ್ತಿದ್ದೆ. ಆದ್ರೂ ಕೂಡ ನಗರದಲ್ಲಿ ಟ್ರಾಫಿಕ್ ಕಂಟ್ರೋಲ್ ಆಗದೆ ದೇಶದ ಮಟ್ಟದಲ್ಲಿ ಸದ್ದು ಮಾಡಿತ್ತು.ಅಷ್ಟೇ ಅಲ್ಲ ನೆದರ್ ಲ್ಯಾಂಡ್ ನ ಲೋಕೆಷನ್ ಟೆಕ್ನಾಲಜಿ ಟಾಮ್ ಟಾಮ್ ಸಂಸ್ಥೆ ಪ್ರಕಾರ ಇದೀಗ ಬೆಂಗಳೂರು ಟ್ರಾಫಿಕ್ ವಿಶ್ವದಲ್ಲಿ ಟಾಪ್ ಥ್ರೀ(3) ಯಲ್ಲಿದೆ ಎಂದು ವರದಿ ಬಿಡುಗೆಡೆ ಮಾಡಿದೆ.
ಇದನ್ನೂ ಓದಿ: ಸಾಬ್ರುಗೂ ಎರಡು ಮಕ್ಕಳು ಮಾಡಿಕೊಳ್ಳಿ ಅಂತ ಸಿಎಂ ಹೇಳಲಿ : ಅಶೋಕ್
ಹೌದು ಬೆಂಗಳೂರು ಟ್ರಾಫಿಕ್ ಬಗ್ಗೆ ಈಗಾಗಲೇ ದೇಶ ವಿದೇಶಗಳ ಮಟ್ಟದಲ್ಲಿ ಚರ್ಚೆ ಆಗಿದೆ,ಟ್ರಾಫಿಕ್ ಗೆ ಬ್ರೇಕ್ ಹಾಕ್ಬೇಕು ಅಂತಾ ಏನೆಲ್ಲಾ ಸರ್ಕಾಸ್ ಮಾಡಿದ್ರೂ ಕೂಡ ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ದಟ್ಟಣೆ ಹೆಚ್ಚಾಗ್ತಿರೋದ್ರಿಂದ ಟ್ರಾಫಿಕ್ ಕಂಟ್ರೋಲ್ಗೆ ಬ್ರೇಕ್ ಹಾಕಲು ಆಗ್ತಿಲ್ಲ. ಇತ್ತಿಚೆಗೆ ಅದ್ಯಯನ ನಡೆಸಿದ ನೆದರ್ ಲ್ಯಾಂಡ್ ಟಾಮ್ ಟಾಮ್ ಸಂಸ್ಥೆಯ ಪ್ರಕಾರ ಕೊಲಂಬಿಯಾ, ಕೋಲ್ಕತಾ ಬಿಟ್ರೆ ವಿಶ್ವದಲ್ಲೇ ಬೆಂಗಳೂರು ಟ್ರಾಫಿಕ್ ಮೂರನೇ ಸ್ಥಾನಪಡೆದುಕೊಂಡಿದೆ ಎಂದು ವರದಿ ಮಾಡಲಾಗಿದೆ. ಹೀಗಾಗಿ ಇದಕ್ಕೆ ವಾಹನ ಸವಾರರು ಒಂದು ಮನೆಗೆ ಒಂದು ಗಡಿ ಇದ್ರೆ ಮಾತ್ರ ಟ್ರಾಫಿಕ್ ಕಂಟ್ರೋಲ್ ಆಗುತ್ತೆ ಇಲ್ಲದ್ದಿದ್ರೆ ಇವರು ಏನು ಮಾಡಿದ್ರೂ ಟ್ರಾಫಿಕ್ ಕಂಟ್ರೋಲ್ ಮಾಡಲು ಆಗಲ್ಲ ಎನ್ನುತ್ತಿದ್ದಾರೆ.
ಇದನ್ನೂ ಓದಿ:ಸೂರ್ಯರಶ್ಮಿ ದರ್ಶನಕ್ಕೆ ಸಕಲ ಸಿದ್ದತೆ ಕೈಗೊಂಡ ಗವಿಗಂಗಾಧರೇಶ್ವರ ದೇವಾಲಯ !
ಒಟ್ಟಾರೆ ಬೆಂಗಳೂರು ಟ್ರಾಫಿಕ್ ಕಂಟ್ರೋಲ್ ಮಾಡ್ತಿವಿ ಅಂತಾ ಪೊಲೀಸ್ ಇಲಾಖೆ, ಬಿಬಿಎಂಪಿ ಜೊತೆ ಇನ್ನೂ ನಾಲ್ಕು ಇಲಾಖೆ ಸೇರ್ಕೋಂಡ್ರೂ ಕೂಡ ನಗರದಲ್ಲಿನ ಟ್ರಾಫಿಕ್ ಬ್ರೇಕ್ ಬಿಳಲು ಸಾದ್ಯವಿಲ್ಲ ಎನ್ನುತ್ತಾರೆ ಒಂದುವೇಳೆ ಟ್ರಾಫಿಕ್ ಕಂಟ್ರೋಲ್ ಹಾಗ್ಬೇಕು ಅಂದ್ರೆ ವಾಹನ ಸಂಖ್ಯೆ ಕಡಿಮೆ ಆಗಬೇಕು ಅಂತಾ ವಾಹನ ಸವಾರಿಯ ಹೇಳ್ತಿದ್ದಾರೆ.ಮುಂದಿನ ದಿನಗಳಲ್ಲಿ ಬ್ರಾಂಡ್ ಬೆಂಗಳೂರು ನೆಪದಲ್ಲದ್ರೂ ಟ್ರಾಫಿಕ್ ಕಂಟ್ರೋಲ್ ಗೆ ಬ್ರೇಕ್ ಬಿಳುತ್ತಾ ಅಂತಾ ಕಾದೂ ನೋಡ್ಬೇಕಿದೆ.