ಬೆಂಗಳೂರು : ದಿನದಿಂದ ದಿನಕ್ಕೆ ಆನ್ಲೈನ್ ಗೇಮ್ ಗೀಳಿಗೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು. ಇದೀಗ ನಗರದಲ್ಲಿ ಒಂದೆ ದಿನ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ಘಟನೆ ವರದಿಯಾಗಿದ್ದು. ಮಹದೇವಪುರ ಹಾಗೂ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿವೆ.
ಹೌದು.. ಇತ್ತೀಚೆಗೆ ನಮ್ಮ ಯುವಸಮಾಜ ಆನ್ಲೈನ್ ಜೂಜಾಟದ ದಾಸರಾಗುತ್ತಿದ್ದು. ಒಂದೆ ಭಾರಿಗೆ ಹೆಚ್ಚು ಹಣವನ್ನು ಗಳಿಸಬಹುದು ಎಂಬ ಭ್ರಮೆಯಲ್ಲಿ ಈ ಜೂಜಾಟದ ದಾಸರಾಗಿ ಕೊನೆಗೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಇದೇ ಹುಚ್ಚಿಗೆ ಬಿದ್ದು ನಗರದಲ್ಲಿ ಒಂದೆ ದಿನ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ :ಆಟವಾಡುತ್ತಿದ್ದ ಮಗುವಿಗೆ ಹಾವು ಕಡಿತ : 2 ವರ್ಷದ ಮಗು ಸಾ*ವು !
30 ವರ್ಷದ ಮಲ್ಲಿಕಾರ್ಜುನ್ ಆತ್ಮಹತ್ಯೆ !
ಮೂಲತಃ ವಿಜಯನಗರ ಮೂಲದ ಮಲ್ಲಿಕಾರ್ಜುನ್ ಎಂಬ 30 ವರ್ಷದ ಯುವಕ ತಾನೂ ವಾಸಿಸುತ್ತಿದ್ದ ಪಿಜಿಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಕಳೆದ ನಾಲ್ಕು ವರ್ಷಗಳಿಂದ ಯುವಕ ಆನ್ಲೈನ್ ಗೇಮ್ ಹುಚ್ಚಿಗೆ ಬಿದ್ದಿದ್ದನು. ಖಾಸಗಿ ಆಸ್ಪತ್ರೆಯಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್ ತನಗೆ ಬರುವ ಎಲ್ಲಾ ಹಣವನ್ನು ಈ ಗೇಮ್ಗಳಲ್ಲಿ ಹೂಡಿಕೆ ಮಾಡುತ್ತಿದ್ದನು.
ಆದರೆ ನಿರಂತರವಾಗಿ ಈ ಗೇಮ್ಗಳಲ್ಲಿ ಲಾಸ್ ಅನುಭವಿಸಿದ ಮಲ್ಲಿಕಾರ್ಜುನ್ ಇವುಗಳ ಬಗ್ಗೆ ಬೇಸತ್ತಿ ಹೋಗಿದ್ದನು. ಕೊನೆಗೆ ಆತ್ಮಹತ್ಯೆಯ ದಾರಿ ಹಿಡಿದಿದ್ದು. ತಾನೂ ವಾಸಿಸುತ್ತಿದ್ದ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ :ಕೆಟ್ಟ ಸೂ**ರ ಕಣ್ಣು ತೆಗೆದು ಬಿಡವ್ವ : MLC ಸೂರಜ್ ರೇವಣ್ಣ ದುರಂಹಕಾರಿ ಹೇಳಿಕೆ !
ಆಟೊ ಡ್ರೈವರ್ ಆತ್ಮಹತ್ಯೆ !
ಇದೇ ಆನ್ಲೈನ್ ಗೇಮಿನ ಚಟಕ್ಕೆ ಬಿದ್ದು. ಬಳ್ಳಾರಿ ಮೂಲದ ಆಟೋ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಆಟೋ ಡ್ರೈವರ್ ಹೆಂಡತಿ ಮತ್ತು ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದನು. ಆಟೋ ಓಡಿಸಿಕೊಂಡು ಸಂಸಾರವನ್ನು ಸಾಗಿಸುತ್ತಿದ್ದ ಈತ ಆನ್ಲೈನ್ ಗೇಮ್ ಚಟಕ್ಕೆ ಬಿದ್ದದ್ದನು.
ಆನ್ಲೈನ್ ಗೇಮಿನಿಂದ ಸಾಕಷ್ಟು ಅನುಭವಿಸಿದ್ದ ಈತ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಕೊರಳೊಡ್ಡಿದ್ದಾನೆ. ಸ್ಥಳಕ್ಕೆ ಬೆಳ್ಳಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಗೇಮ್ಗಳ ಬಗ್ಗೆ ಎಷ್ಟೆ ಜಾಗೃತಿ ಮೂಡಿಸಿದರು ಕೂಡ ಯುವಕರು ಇದಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ .