ರಾಂಚಿ : ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು ಕ್ಷುಲ್ಲಕ ವಿಷಯಕ್ಕೆ 10ನೇ ತರಗತಿಯ 80 ವಿದ್ಯಾರ್ಥಿನಿಯರ ಬಟ್ಟೆ ತೆಗೆಯುವಂತೆ ಮಾಡಿದ್ದಾರೆ. ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಬ್ಲೇಸರ್‌ನಲ್ಲೇ ಮನೆಗೆ ಕಳುಹಿಸಿದ್ದಾರೆ.ಈ ಬಗ್ಗೆ ವಿದ್ಯಾರ್ಥಿನಿಯರ ಕುಟುಂಬಸ್ಥರು ಜಿಲ್ಲಾಧಿಕಾರಿ ಧನಬಾದ್ ಅವರಿಗೆ ದೂರು ನೀಡಿದ್ದಾರೆ.
ಹೌದು… ಜಾರ್ಖಂಡ್‌ನ ಧನ್‌ಬಾದ್‌ನ ಜಿಲ್ಲೆಯ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಖುಷಿಯಿಂದ ಪೆನ್ ಡೇ ಆಚರಿಸಿ , ಎಲ್ಲಾ ವಿದ್ಯಾರ್ಥಿನಿಯರು ಪರಸ್ಪರರ ಅಂಗಿಯ ಮೇಲೆ ಶುಭಾಶಯಗಳನ್ನು ಬರೆದುಕೊಂಡಿದ್ದಾರೆ. ಈ ವಿಷಯ ತಿಳಿದ ಪ್ರಾಂಶುಪಾಲರು ಕೆಂಡಾಮಂಡಲಗೊಂಡು ವಿದ್ಯಾರ್ಥಿನಿಯರನ್ನೆಲ್ಲ ಕೂಡಿ ಹಾಕಿ ಅವರ ಅಂಗಿ ಬಿಚ್ಚಿಸಿ. ಕೇವಲ ಬ್ಲೇಸರ್ನಲ್ಲೆ ಮನೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ : ಹಿಂದೂ ಎಂಬ ಪದವು ಅಪಮಾನಕರವಾದ ಶಬ್ಧವಾಗಿದೆ : ಪ್ರೋ.ಕೆ.ಎಸ್ ಭಗವಾನ್
ಘಟನೆ ಬಗ್ಗೆ ತಿಳಿದ ಕುಟುಂಬಸ್ಥರು ಧನ್‌ಬಾದ್‌ನ ಡಿಸಿ ಮಾಧವಿ ಮಿಶ್ರಾ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಶಾಲೆಯ ಆಡಳಿತವು ತನಿಖೆಯನ್ನು ಪ್ರಾರಂಭಿಸಿದೆ. ಅಧಿಕಾರಿಯೊಬ್ಬರು ಶನಿವಾರ ಈ ಮಾಹಿತಿ ನೀಡಿದ್ದಾರೆ. ಪ್ರಾಂಶುಪಾಲರ ಈ ಕ್ರಮವನ್ನು ತಾಲಿಬಾನ್ ಕೃತ್ಯ ಎಂದು ಜರಿಯಾ ಶಾಸಕ ರಾಗಿಣಿ ಸಿಂಗ್ ಬಣ್ಣಿಸಿದ್ದಾರೆ. ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ