Sunday, January 12, 2025

ಕೆಪಿಸಿಸಿ ಅಧ್ಯಕ್ಷನಾಗಲು ನಾನು ಸಿದ್ದನಾಗಿದ್ದೇನೆ : ಕಾಂಗ್ರೆಸ್​ನಲ್ಲಿ ಕೋಲಾಹಲ ಎಬ್ಬಿಸಿದ ರಾಜಣ್ಣ ಹೇಳಿಕೆ !

ಉಡುಪಿ : ಕೆಪಿಸಿಸಿ ಹುದ್ದೆ ಆಕಾಂಕ್ಷಿ ವಿಚಾರವಾಗಿ ಮಾತನಾಡಿದ ಸಹಕಾರ ಸಚಿವ ಕೆ.ಎನ್​ ರಾಜಣ್ಣ ‘ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆ ಬೇಕು ಅಂತ ಕೇಳಿಲ್ಲ, ಆದರೆ ಅವರು ನೀಡಿದರೆ ನಾನು ಅಧ್ಯಕ್ಷನಾಗಲು ಸಿದ್ದನಿದ್ದೇನೆ. ಅದಕ್ಕಾಗಿ ನಾನು ಮಂತ್ರಿ ಸ್ಥಾನ ಬಿಡಲು ಸಿದ್ದನಿದ್ದೇನೆ. ಆದರೆ ಅಧ್ಯಕ್ಷ ಸ್ಥಾನ ನೀಡಿ ಎಂದು ನಾನು ಎಲ್ಲಿಯೂ ಅರ್ಜಿ ಹಾಕೊಂಡು ಕೇಳುವ ಪ್ರಮೇಯ ಬಂದಿಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ರಾಜಣ್ಣ ‘ ಡಿಕೆಶಿ ಅವರ ಅಭಿಪ್ರಾಯ ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ? ಆದರೆ  ಸರ್ಕಾರ ಮಾಡಲು 113 ಜನ ಶಾಸಕರು ಬೇಕು. ಅದು ಅವರ ಗಮನದಲ್ಲೂ ಇದೆ. ಡಿಕೆಶಿ ಹೇಳಿಕೆಗೆ ನಾನು ಯಾಕೆ ಕಮೆಂಟ್ ಮಾಡಲಿ. ಪಕ್ಷದ ತಳ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಈ ಕೆಲಸವನ್ನು ಮಾಡಿ ಪಕ್ಷ ಸಂಘಟಿಸಬೇಕು ಎನ್ನುವ ಉದ್ದೇಶ ನನ್ನದು, ಬೇರೆ ಸಮುದಾಯವನ್ನು ವಿರೋಧಿಸಬೇಕು, ದ್ವೇಶ ಮಾಡಬೇಕು ಎಂದು ಅರ್ಥ ಅಲ್ಲ, ಎಲ್ಲ ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗಬೇಕು
ಆ ಕೆಲಸ ಮಾಡಲು ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಯಸಿದ್ದೇನೆ… ಮಾಡಲೇಬೇಕು ಎಂದು ಒತ್ತಾಯಿಸಿಲ್ಲ.

ಇದನ್ನೂ ಓದಿ :ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಾಡೆಮ್ಮೆ, ಕಾಡಾನೆ ಸಾ*ವು !

ಗ್ರಾಮ ಪಂಚಾಯತಿ, ಜಿಲ್ಲಾ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರೇ ಪಕ್ಷದ ಆಧಾರ ಸ್ಥಂಭಗಳಾಗಿರುತ್ತಾರೆ. ಇದು ಕಾರ್ಯಕರ್ತರಿಗೆ ಅಧಿಕಾರ ಕೊಡುವ ಚುನಾವಣೆ, ಈ ಚುನಾವಣೆಯನ್ನು ತೀವ್ರವಾಗಿ ಪರಿಗಣಿಸಿ ಕಾರ್ಯಕರ್ತರಿಗೆ ಅಧಿಕಾರ ಹಂಚಬೇಕು, ಮುಂದಿನ ಲೋಕಸಭೆ ವಿಧಾನಸಭಾ ಚುನಾವಣೆಗೆ ಇದರಿಂದ ಅನುಕೂಲವಾಗುತ್ತದೆ, ಕಾರ್ಯಕರ್ತರು ಉತ್ಸಾಹದಿಂದ ಪಕ್ಷದ ಪರ ಕೆಲಸ ಮಾಡುತ್ತಾರೆ
ಕಾರ್ಯಕರ್ತರಿಗೆ ಅಧಿಕಾರ ಕೊಡುವ ಉದ್ದೇಶ ಇಟ್ಟುಕೊಂಡು ನಾನು ನನ್ನ ಮಾತುಗಳನ್ನು ಹೇಳಿದ್ದೇನೆ.

ಬಣ ರಾಜಕೀಯ ಯಾವ ಪಕ್ಷದಲ್ಲಿ ಇಲ್ಲ ಹೇಳಿ? ಒಂದ ಪಕ್ಷದಲ್ಲಿ ಜಾಸ್ತಿ ಇರಬಹುದು ಒಂದು ಪಕ್ಷದಲ್ಲಿ ಕಡಿಮೆ ಇರಬಹುದು. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಲ್ಲಾ ಕಡೆ ಬಣ ರಾಜಕೀಯ ಇದೆ. ಕಾಂಗ್ರೆಸ್ 1880 ರಲ್ಲಿ ಪ್ರಾರಂಭ ಆದಾಗಲೇ ಬಣ ರಾಜಕೀಯ ಇತ್ತು, ಬಣರಾಜ್ಯಕೀಯ ಇರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದು. ಆದರೆ ಪವರ್ ಶೇರಿಂಗ್ ಬಗ್ಗೆ ನನಗೆ ಗೊತ್ತಿಲ್ಲ ಅದನ್ನು ಅವರೇ ಹೇಳಬೇಕು. ಇದು ಹೈಕಮಾಂಡ್ ಮಟ್ಟದಲ್ಲಿ ನಿರ್ಣಯಾಗುವ ವಿಚಾರ, ಪವರ್ ಸೇರಿ ಆಗಿದೆಯೋ ಆಗಿಲ್ಲವೋ ಗೊತ್ತಿಲ್ಲ,ಅಂತಿಮವಾಗಿ ಹೈಕಮಾಂಡ್ ನಿರ್ಣಯ ಮಾಡುತ್ತೆ. ಆದರೆ ನಾನು ಕಾಂಗ್ರೆಸ್​ ಪಕ್ಷದ ಜೊತೆ ಇರುತ್ತೇನೆ. ಸಿದ್ದರಾಮಯ್ಯರ ಸಂಪುಟದಲ್ಲಿ ಮಂತ್ರಿಯಾಗಿರುವ ನಾನು ಅವರನ್ನು ಡಿಫೆಂಡ್​ ಮಾಡುವುದು ನನ್ನ ಜವಬ್ದಾರಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES