Sunday, January 12, 2025

ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ರೂ. ಗೆದ್ದ ಬಾಗಲಕೋಟೆ ಯುವಕ !

ಬಾಗಲಕೋಟೆ: ಆತ ಬಡ ಯುವಕ ಪದವಿ ಮುಗಿಸಿ ವ್ಯಾಚ್ ಮನ್ ಆಗಿ ಕೆಲ್ಸಾ ಮಾಡ್ತಿದ್ದ. ಆದರೆ ಸೋನಿ ಟಿವಿಯಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಕೋನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮ ಆ ಯುವಕನ ಪಾಲಿಗೆ ಭಾಗ್ಯದ ಬಾಗಿಲನ್ನು ತೆರೆದಿದ್ದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಈ ಯುವಕ 50 ಲಕ್ಷ ಹಣವನ್ನು ಪಡೆದಿದ್ದಾನೆ.

ಹೌದು….ಸೋನಿ ಚಾನಲ್ ನಲ್ಲಿ ಬಿಗ್ ಬಿ ಅಮಿತಾ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಯುವಕ ಮಹಾಲಿಂಗಪೂರ ಪಟ್ಟಣದ ಯುವಕ ರಮಜಾನ್ ಮಲ್ಲಿಕಸಾಬ್ ಪೀರಜಾದೆ ಎಂಬಾತ ಕಾರ್ಯಕ್ರಮದ ಕೊನೆಯ ಘಟ್ಟಕ್ಕೆ ತಲುಪಿ ಹೆಚ್ಚು ರಿಸ್ಕ್​ ತೆಗೆದುಕೊಳ್ಳದೆ 50 ಲಕ್ಷಕ್ಕೆ ಕ್ವಿಟ್​ ಮಾಡಿ, 50 ಲಕ್ಷ ರೂಪಾಯಿ ಹಣವನ್ನು ಗೆದ್ದಿದ್ದಾರೆ. ಇತ್ತಾ ಕಾರ್ಯಕ್ರಮದಲ್ಲಿ ಗೆದ್ದು ಬಂದಿರುವ ರಮಜಾನ್ ಮಲ್ಲಿಕಸಾಬ್ ಪೀರಜಾದೆಗೆ ಗ್ರಾಮದಲ್ಲಿ ಭಾರಿ ಸ್ವಾಗತ ದೊರೆತಿದೆ.

ಇದನ್ನೂ ಓದಿ:ಮದ್ದೂರಿನ ಸೊಸೆಗೆ ಮಿಸೆಸ್ ಇಂಡಿಯಾ ಕಿರೀಟ !

ಬಡ ಕುಟುಂಬದಲ್ಲಿ ಜನಿಸಿ ಭಾರಿ ಸಾಧನೆ ಮಾಡಿದ ಯುವಕ !

ಇನ್ನು ರಮಜಾನ್ ಬಡ ಕುಟುಂಬದಲ್ಲಿ ಜನಿಸಿದ್ದು, ತಾಯಿ ಮುರೆನಾ ಮನೆಗೆಲಸ, ತಂದೆ ಮಲಿಕ್ ಸಾಬ್ ಗ್ಯಾರೇಜ್ ನಡೆಸುತ್ತದ್ದಾರೆ. ಇವರ ಪುತ್ರ ರಮಜಾನ್ ವಾಚ್​ಮನ್ ಕೆಲಸ ಮಾಡ್ತಾ ಡಿಗ್ರಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದಾನೆ. ಜ.13ರಂದು ರಾತ್ರಿ 9 ಗಂಟೆಗೆ ಹಿಂದಿ ಸೋನಿ ಚಾನಲ್‌ನಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಛನ್ ರಿಂದ 50 ಲಕ್ಷ ರೂ ಚಕ್ ಪಡೆಯಲಿದ್ದಾನೆ.

ಒಟ್ಟಿನಲ್ಲಿ ಮಹಾಲಿಂಗಪೂರದ ಪಟ್ಟಣದ ಬಡ ಯುವಕನಿಗೆ ಅದೃಷ್ಟ ಖುಲಾಯಿಸಿದ್ದು,ಆರ್ಥಿಕವಾಗಿ ಕುಟುಂಬದ ಸಮಸ್ಯೆ ನಿವಾರಣೆಗೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಸಹಕಾರಿಯಾಗಿದೆ.ರಮ್ ಜಾನ್ ಕಾರ್ಯಕ್ರಮದಲ್ಲಿ ಗೆದ್ದು ಪಟ್ಟಣಕ್ಕೆ ವಾಪಸ್ ಆಗ್ತಿದ್ದಂತೆ ಆತನ ಸ್ನೇಹ ಬಳಗದಿಂದ ಸನ್ಮಾನದ ಜೊತೆ ಮೆರವಣಿಗೆ ಕೂಡಾ ನಡೆಸಿದ್ದು ವಿಶೇಷ.

RELATED ARTICLES

Related Articles

TRENDING ARTICLES