ಬೆಂಗಳೂರು: ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದು ಪ್ರೇಯಿಸಿ ಕೂಡ ಆತ್ಮಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ರಾಚೇನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಜಾನ್ಸನ್ ಹಾಗೂ ದಿಲ್ಶಾದ್ ಎಂದು ಗುರುತಿಸಲಾಗಿದೆ.
ಥಣಿಸಂದ್ರ ಮೂಲದ ಜಾನ್ಸನ್ ಎಂಬುವವನನ್ನು ದಿಲ್ಶಾದ್ ಪ್ರೀತಿಸುತ್ತಿದ್ದಳು. ಆದರೆ ಮಹಿಳೆಗೆ ವಿಜಯಪುರ ಮೂಲದ ಕೃಷ್ಣ ಎಂಬುವವರ ಜೊತೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆಕೆಯ ಗಂಡ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಸಂಸಾರವೂ ಸುಖವಾಗಿಯೆ ನಡೆಯುತ್ತಿತ್ತು.
ಆದಾಗ್ಯೂ ಜಾನ್ಸನ್ -ದಿಲ್ಶಾದ್ ಪರಸ್ಪರ ಪ್ರೀತಿಸುತ್ತಿದ್ದರು, ಆದರೆ ಇವರಿಬ್ಬರ ಪ್ರೀತಿ ಮಧ್ಯೆ ಅದೇನಾಯ್ತೋ ಏನೋ. ಗೊತ್ತಿಲ್ಲ ನಿನ್ನೆ ಸಂಜೆ 6.30 ಕ್ಕೆ ಸರಿಯಾಗಿ ಜಾನ್ಸನ್ ಥಣಿಸಂದ್ರದಲ್ಲಿರುವ ಮನೆಗೆ ಬಂದು ತನ್ನ ಕೊಠಡಿ ಸೇರಿದ್ದ ಜಾನ್ಸನ್ ಎಷ್ಟೊತ್ತಾದರು ಹೊರಗೆ ಬರಲೇ ಇಲ್ಲ..ಕುಟುಂಬಸ್ಥರು ಕೂಡ ಸುಸ್ತಾಗಿ ಮಲಗಿರ್ಬೋದು ಅಂತಾ ಸುಮ್ಮನಿದ್ರು..ಎಷ್ಟೊತ್ತಾದ್ರು ಬರದೇ ಇದ್ದಾಗ ಮಧ್ಯರಾತ್ರಿ 2 ಗಂಟೆಗೆ ತಂದೆ ಆನಂದ್ ಎದ್ದು ಬಾಗಿಲು ಬಡಿದಿದ್ದಾರೆ. ಮೂರು ಬಾರಿ ಕರೆ ಮಾಡಿದ್ದು ಕರೆ ಸ್ವೀಕರಿಸಿರಲಿಲ್ಲ..ಆಗಿದ್ದಾಯ್ತು ನಿದ್ದೆಯಲ್ಲಿರಬಹುದು ಅಂತಾ ಸುಮ್ಮನಾಗಿದ್ದಾರೆ.
ಇದನ್ನೂ ಓದಿ:ಭಾನುವಾರವು ಕೆಲಸ ಮಾಡಿ ಎಂದ ಸುಬ್ರಹ್ಮಣ್ಯನ್ : 56 ಕೋಟಿ ಸಂಬಳ ಕೊಟ್ಟರೆ ಮಾಡುತ್ತೇವೆ ಎಂದ ನೆಟ್ಟಿಗರು !
ಆದರೆ ಬೆಳಗ್ಗೆ 6.30 ಆದರು ಎದ್ದು ಬರದಿದ್ದಾಗ ಅನುಮಾನ ಬಂದಿದ್ದು ಹತ್ತಿರದಲ್ಲೇ ಇದ್ದ ಅಳಿಯ ಹಾಗೂ ಜಾನ್ಸನ್ ಸ್ನೇಹಿತರನ್ನು ಕರೆದು ರೂಮಿನ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ..ಸ್ಥಳಕ್ಕೆ ಬಂದ ಹೆಣ್ಣೂರು ಪೊಲೀಸರು ಪರಿಶೀಲನೆ ನಡೆಸಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಜಾನ್ಸನ್ ಸಾವಿನ ಸುದ್ದಿಯನ್ನು ತಿಳಿದ ದಿಲ್ಯಾದ್ ಶಾಕ್ಗೆ ಒಳಗಾಗಿದ್ದಳು. ಮನೆಯ ಬಳಿ ಬಂದು ಆತನ ಕಡೆಯ ದರ್ಶನವನ್ನು ಮಾಡಿಕೊಂಡು ಮನೆಗೆ ಹೋಗಿದ್ದಳು. ಮನೆಗೆ ಹೋದ ಆಕೆ ತಾನೂ ಬದುಕಿರಬಾರದು ಎಂದು ನಿರ್ಧರಿಸಿದ್ದಳು. ಇಂದು ಬೆಳಿಗ್ಗೆ ತನ್ನ ಸೀರೆಯಿಂದ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸರು ಮತ್ತು ಹೆಣ್ಣೂರು ಪೊಲೀಸರು ಪ್ರತ್ಯೇಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತನಿಖೆ ಬಳಿಕೆ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಆದರೆ ಅದೇನೆ ಇರಲಿ ದಿಲ್ಯಾದ್ನ ಇಬ್ಬರು ಮಕ್ಕಳು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದಂತು ದುರಂತ !