Sunday, February 23, 2025

ಕೊಳವೆ ಬಾವಿಗೆ ಬಿದ್ದಿದ್ದ ನಾಯಿ ಮರಿ ರಕ್ಷಣೆ : ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ !

ಕಲಬುರಗಿ : ಜಿಲ್ಲೆಯಲ್ಲಿ ಮನ ಮಿಡಿಯುವ ರಕ್ಷಣ ಕಾರ್ಯಚರಣೆ ನಡೆದಿದ್ದು. ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಕೊಳವೆ ಬಾವಿಗೆ ಎಸೆದಿದ್ದ ನಾಯಿ ಮರಿಯನ್ನು ರಕ್ಷಿಸಿದ್ದಾರೆ.

ಹೌದು …ಕಲಬುರಗಿ ನಗರದ ಮಾಣಿಕೇಶ್ವರಿ ಕಾಲೋನಿಯಲ್ಲಿ ಘಟನೆ ನಡೆದಿದ್ದು. ಆಟವಾಡುತ್ತಿದ್ದ ಬಾಲಕನೋರ್ವ ನಾಯಿ ಮರಿಯನ್ನು ಕೊಳವೆ ಬಾವಿಗೆ ಹಾಕಿದ್ದನು. ಕೊಳವೆ ಬಾವಿಗೆ ಬಿದ್ದ ನಾಯಿ ಮರಿ ಅರಚುವುದನ್ನು ಕಂಡ ಸ್ಥಳೀಯರು. ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ : ಆಧ್ಯಾತ್ಮ ಗುರು​ಗಳನ್ನು ಭೇಟಿ ಮಾಡಿದ ವಿರಾಟ್ ದಂಪತಿ : ಚಾಂಪಿಯನ್ಸ್​​ ಟ್ರೋಫಿಯಲ್ಲಿ ಮಿಂಚಲಿದ್ದಾರೆ ಎಂದ ಫ್ಯಾನ್ಸ್​

ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಬಂದು ಕಾರ್ಯಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು. 25 ಅಡಿ ಆಳದಲ್ಲಿದ್ದ ನಾಯಿ ಮರಿಯನ್ನು ಜೀವಂತವಾಗಿ ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದು. ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯ ಮಹಾಪೂರವೆ ಹರಿದು ಬಂದಿದೆ. ಇದೀಗ ತೆರೆದ ಕೊಳವೆ ಬಾವಿಯನ್ನು ಮುಚ್ಚಲಗಿದೆ.

 

RELATED ARTICLES

Related Articles

TRENDING ARTICLES