Saturday, January 11, 2025

ಚಂದನ್​ ಶೆಟ್ಟಿಗೆ ಎದುರಾಯ್ತು ಕಂಟಕ : ಕಾಫಿ ರೈಟ್​ ಉಲ್ಲಂಘನೆಯ ಆರೋಪ !

ಕಳೆದ ಅನೇಕ ವರ್ಷಗಳಿಂದ ಯಾವುದೇ ಮ್ಯೂಸಿಕ್​ ಆಲ್ಬಂಗಳನ್ನು ನೀಡದೆ, ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದ ಚಂದನ್​ ಶೆಟ್ಟಿ, ತಮ್ಮ ಅಭಿಮಾನಿಗಳಿಗಾಗಿ ಹೊಸ ವರ್ಷದ ಪ್ರಯುಕ್ತ ಕಾಟನ್​ ಕ್ಯಾಂಡಿ ಎಂಬ ಹಾಡನ್ನು ಬಿಡುಗಡೆ ಮಾಡಿದ್ದರು. ಇದೀಗ ಈ ಹಾಡಿಗೆ ವಿವಾದ ಅಂಟಿಕೊಂಡಿದ್ದು. ಯುವರಾಜ್​ ಎಂಬ ರ್‍ಯಾಪರ್ ನನ್ನ ಹಾಡಿನ ಟ್ಯೂನ್​ನನ್ನು ಚಂದನ್​ ಶೆಟ್ಟಿ ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.

ಹೌದು.. 6 ವರ್ಷಗಳ ಹಿಂದೆಯೇ ‘ವೈ ಬುಲ್ ಪಾರ್ಟಿ ಅನ್ನೋ ಸಾಂಗ್ ಮಾಡಿದ್ದ ಯುವರಾಜ್  ಇದೀಗ ಚಂದನ್​ ಶೆಟ್ಟಿಯ ಮೇಲೆ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಕ್‌ಸ್ಟಾರ್ ಯುವರಾಜ್ ‘ಕಾಟನ್ ಕ್ಯಾಂಡಿ’ ಟ್ಯೂನ್  ನನ್ನ ಈ ಹಿಂದಿನ ಪಾರ್ಟಿ ಸಾಂಗ್‌ ನಕಲಿನಂತೆಯೇ ಇದ್ದು, ದೂರು ನೀಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ :ಬೆಳ್ಳಂ ಬೆಳಿಗ್ಗೆ ಸದ್ದು ಮಾಡಿದ ಬಂದೂಕು : ಡ್ರಗ್​ ಪೆಡ್ಲರ್​ ಕಾಲಿಗೆ ಗುಂಡೇಟು !

ನಟ-ಗಾಯಕ ಹಾಗು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ  ಮ್ಯೂಸಿಕ್ ವಿಡಿಯೋ ‘ಕಾಟನ್ ಕ್ಯಾಂಡಿ’ ಕಳೆದ ತಿಂಗಳು 27ರಂದು ರಿಲೀಸ್​ ಆಗಿದ್ದು, ಸದ್ಯ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ. ‘ಕಾಟನ್ ಕ್ಯಾಂಡಿ’ ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ನಟ, ಗಾಯಕ ಚಂದನ್ ಶೆಟ್ಟಿ ಜೋಡಿಯಾಗಿ ಸುಷ್ಮಿತಾ ಗೋಪಿನಾಥ್ ನಟಿಸಿದ್ದಾರೆ. ಈ ಹಾಡಿನಲ್ಲಿ ಚಂದನ್-ಸುಷ್ಮಿತಾ ಜೋಡಿ ಸಕತ್ ಮೋಡಿ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಯಾವುದೇ ಮ್ಯೂಸಿಕ್ ಆಲ್ಬಂ ನೀಡದ ಚಂದನ್​ ಶೆಟ್ಟಿ ವಿರುದ್ದ ಅವರ ಅಭಿಮಾನಿಗಳು ಕೂಡ ಬೇಸರಗೊಂಡಿದ್ದರು. ಹೊಸ ಹಾಡನ್ನು ನೀಡುವಂತೆ ಬೇಡಿಕೆಯನ್ನು ಇಟ್ಟಿದ್ದರು. ಇದೀಗ ಚಂದನ್​ ಬಿಡುಗಡೆ ಮಾಡಿರುವ ಕಾಟನ್​ ಕ್ಯಾಂಡಿ ಹಾಡಿಗೆ ಟ್ಯೂನ್​ ಕದ್ದ ಆರೋಪವನ್ನು ಗಾಯಕ ಚಂದನ್ ಶೆಟ್ಟಿ ಎದುರಿಸುತ್ತಿದ್ದು. ಈ ಆರೋಪಕ್ಕೆ ಚಂದನ್​ ಶೆಟ್ಟಿ ಏನು ಉತ್ತರ ನೀಡುತ್ತಾರೆ ಎಂಬುದು ಕುತೂಹಲ

RELATED ARTICLES

Related Articles

TRENDING ARTICLES