Saturday, January 11, 2025

ಜೈ ಹನುಮಾನ್​ ಚಿತ್ರ ತಂಡದ ವಿರುದ್ದ ಪ್ರಕರಣ ದಾಖಲು : ರಿಷಬ್​ ಶೆಟ್ಟಿ ಪಾತ್ರದ ಬಗ್ಗೆ ಆಕ್ಷೇಪ !

ಬೆಂಗಳೂರು : ಕಾಂತಾರ ಖ್ಯಾತಿಯ ರಿಷಬ್​ ಶೆಟ್ಟಿಗೆ ಸಂಕಷ್ಟ ಎದುರಾಗಿದ್ದು. ರಿಷಬ್‌ ಶೆಟ್ಟಿ ನಟಿಸುತ್ತಿರುವ ಜೈ ಹನುಮಾನ್‌ ಸಿನಿಮಾದ ಪೋಸ್ಟರ್​ ವಿರುದ್ದ ಹೈಕೋರ್ಟ್​ ವಕೀಲ ಮಾಮಿದಾಳ್ ತಿರುಮಲ್ ರಾವ್ ಎಂಬುವವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.

ಹೌದು.. ನಟ ರಿಷಬ್​ ಶೆಟ್ಟಿ ಅವರ ನಟಿಸುತ್ತಿರುವ ಜೈ ಹನುಮಾನ್​ ಚಿತ್ರದ ಪೋಸ್ಟರ್​ನಲ್ಲಿ ಹನುಮಂತನ ಪೋಸ್ಟರ್​ ಆಕ್ಷೇಪಾರ್ಹವಾಗಿದೆ ಎಂದು ವಕೀಲ ಮಾಮಿದಾಳ್ ತಿರುಮಲ್ ರಾವ್ ಆರೋಪಿಸಿದ್ದಾರೆ. ಈ ಹಿನ್ನೆಲೆ ಜೈ ಹನುಮಾನ್‌ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ಮತ್ತು ನಾಯಕ ನಟ ರಿಷಬ್ ಶೆಟ್ಟಿ ಸೇರಿದಂತೆ ಚಿತ್ರದ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ನೆನ್ನೆ ಪ್ರಿಯಕರ, ಇಂದು ಪ್ರೇಯಸಿ ಆತ್ಮಹತ್ಯೆ : ತಬ್ಬಲಿಗಳಾದ ಇಬ್ಬರು ಮಕ್ಕಳು !

ಈಗಾಗಲೇ ಸಿನಿಮದ ಪೋಸ್ಟರ್  ಬಿಡುಗಡೆಯಾಗಿದ್ದು. ಇದರಲ್ಲಿ ನಟ ರಿಷಬ್​ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್​ನಲ್ಲಿ ಹನುಮಂತನಿಗಿಂತ ನಟನಿಗೆ ಹೆಚ್ಚಿನ ಆದ್ಯತೆ ನೀಡಿದೆ.ಭಗವಂತನ ನೈಜ ಸ್ವರೂಪದ ಬಗ್ಗೆ ಭವಿಷ್ಯದ ಪೀಳಿಗೆಯ ದಾರಿ ತಪ್ಪಿಸಲಿದೆ ಎಂದು ವಕೀಲ ತಿರುಮಲ್ ರಾವ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ದೂರನ್ನು ನಾಂಪಲ್ಲಿ ಕ್ರಿಮಿನಲ್​ ಕೋರ್ಟ್​ ಅಂಗಿಕರಿಸಿದ್ದು. ಸಿನಿಮಾ ತಂಡಕ್ಕೆ ಸಂಕಷ್ಟ ಎದುರಾಗಿದೆ.

2024ರಲ್ಲಿ ಬಿಡುಗಡೆಯಾಗಿದ್ದ ಹನುಮಾನ್‌ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್‌ ಕಂಡಿತ್ತು. ಬಳಿಕ ಈ ಸಿನಿಮಾದ ಬಹು ನಿರೀಕ್ಷಿತ ಸೀಕ್ವೆಲ್ ಆಗಿ ಜೈ ಹನುಮಾನ್ ಸಿನಿಮಾ ಮಾಡಲು ಮೈತ್ರಿ ಮೂವಿ ಮೇಕರ್ಸ್‌ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ, ತೇಜ ಸಜ್ಜಾ ಮತ್ತು ರಾಣಾ ದಗ್ಗುಬಾಟಿ ಸೇರಿದಂತೆ ಪ್ರಮುಖರು ತಾರಾಗಣದಲ್ಲಿದ್ದು, ಇದೀಗ ಈ ಚಿತ್ರಕ್ಕೆ ಬಿಡುಗಡೆಗೂ ಮೊದಲೇ ವಿಘ್ನ ಎದುರಾಗಿದೆ.

RELATED ARTICLES

Related Articles

TRENDING ARTICLES