ಬೆಂಗಳೂರು : ಗೆಳತಿ ಮೇಲಿನ ಸಿಟ್ಟಿಗೆ ಯುವಕ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಪೊಲೀಸರ ಸಮಯ ಪ್ರಜ್ಞೆಯಿಂದ ಯುವಕನ ಪ್ರಾಣ ಉಳಿದಿದೆ.
ಕೇರಳ ಮೂಲದ ಯುವಕ ಜಿತಿನ್ (26) ಎಂಬಾತ ಬೆಂಗಳೂರಿನಲ್ಲಿ ಸಾಫ್ಟವೇರ್ ಉದ್ಯೋಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಯುವಕ ಕೇರಳ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಕೆಲ ವಿಶಯಗಳಿಗೆ ಮನಸ್ತಾಪ ಉಂಟಾಗಿತ್ತು ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ :ಲಿವಿಂಗ್ ರಿಲೇಷನ್ನಲ್ಲಿದ್ದ ಗೆಳತಿಯನ್ನು ಕೊಲೆ ಮಾಡಿ 8 ತಿಂಗಳ ಕಾಲ ಫ್ರಿಡ್ಜ್ನಲ್ಲಿಟ್ಟ ಸೈಕೋ !
ಇದೇ ಕಾರಣಕ್ಕೆ ನಿನ್ನೆ ಮಧ್ಯರಾತ್ರಿ ಜಿತಿನ್ ಯುವತಿಗೆ ವಿಡಿಯೋ ಕರೆ ಮಾಡಿದ್ದು. ಈ ವೇಳೆ ಮತ್ತೆ ಇವರಿಬ್ಬರ ನಡುವೆ ಗಲಾಟೆಯಾಗಿದೆ. ಇದೇ ವೇಳೆ ವಿಡಿಯೋ ಕಾಲ್ನಲ್ಲಿ ಯುವಕ ಜಿತಿನ್ ಕೈ ಕೊಯ್ದುಕೊಂಡು ಕಾಲ್ ಕಟ್ ಮಾಡಿದ್ದಾನೆ. ಇದರಿಂದ ಗಾಬರಿಯಾದ ಯುವತಿ ಮತ್ತೆ ಕಾಲ್ ಮಾಡಿದ್ದಾಳೆ ಆದರೆ ಯುವಕ ಜಿತಿನ್ ಪೋನ್ ಕರೆಯನ್ನು ಸ್ವೀಕರಿಸಿಲ್ಲ.
ಹೀಗಾಗಿ ಯುವತಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಯುವತಿಯ ಮಾಹಿತಿಯ ಮೇರೆಗೆ ಪೊಲೀಸರು ಯುವಕನ ಮೊಬೈಲ್ ಲೊಕೇಶನ್ ಮೂಲಕ ಯುವಕನ ಪಿ.ಜಿಯನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ರೂಂನಲ್ಲಿ ರಕ್ತದ ಮಡುವಿನಲ್ಲಿದ್ದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.