Saturday, January 11, 2025

ಬೆಳ್ಳಂ ಬೆಳಿಗ್ಗೆ ಸದ್ದು ಮಾಡಿದ ಬಂದೂಕು : ಡ್ರಗ್​ ಪೆಡ್ಲರ್​ ಕಾಲಿಗೆ ಗುಂಡೇಟು !

ಕಲಬುರಗಿ: ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯ ಮೇಲೆ ಬೆಳ್ಳಂಬೆಳಗ್ಗೆ ಪೋಲಿಸರು ಫೈರಿಂಗ್ ಮಾಡಿರುವ ಘಟನೆ ಕಲಬುರಗಿ ನಗರದ ಹೊರವಲಯದ ತಾವರಗೇರಾ ಬಳಿಯಲ್ಲಿ ನಡೆದಿದೆ. ಗುಂಡೇಟು ತಿಂದ ಆರೋಪಿಯನ್ನು 32 ವರ್ಷದ ಸುಪ್ರೀತ್ ನವಲೆ ಎಂದು ಗುರುತಿಸಲಾಗಿದೆ.

ಆರೋಪಿ ಅಕ್ರಮವಾಗಿ ಕಾರಿನಲ್ಲಿ ಡ್ರಗ್ಸ್‌ನ್ನು ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಖಾಕಿ ಪಡೆ ದಾಳಿ ಮಾಡಿದ್ದು, ಕಾರು ನಿಲ್ಲಿಸಿ ತಪಾಸಣೆ ಮಾಡುವಾಗ ಪೋಲಿಸರ ಮೇಲೆ ಚಾಕುವಿನಿಂದ ಆರೋಪಿ ದಾಳಿ ಮಾಡಿದ್ದಾನೆ. ಹೆಡ್ ಕಾನ್‌ಸ್ಟೇಬಲ್ ಗುರುಮೂರ್ತಿಯ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದು, ಈ ವೇಳೆ ಚೌಕ್ ಪೋಲಿಸ್ ಠಾಣೆಯ ಪಿಐ ರಾಘವೇಂದ್ರ ಅವರು ಆರೋಪಿ ಮೇಲೆ ಫೈರಿಂಗ್ ನಡೆಸಿದ್ದಾರೆ.
ಫೈರಿಂಗ್ ಮಾಡಿದ ಪರಿಣಾಮ ಆರೋಪಿ ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೆರ್ ಸೆಂಟರ್‌ಗೆ ದಾಖಲು ಮಾಡಲಾಗಿದೆ. ಇನ್ನೂ ಪ್ರಕರಣ ಸಂಬಂಧ ಅಸ್ಪತ್ರೆಗೆ ಪೊಲೀಸ್ ಆಯುಕ್ತ‌ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2016 ರಿಂದ ಆರೋಪಿ ಅಕ್ರಮ ಡ್ರಗ್ ಸಪ್ಲೈ‌ ಮಾಡುತ್ತಿದ್ದು, ಒಟ್ಟು 3 ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ದಾಖಲಾಗಿವೆ. ಅಲ್ಲದೆ ನೆರೆಯ ಹೈದ್ರಾಬಾದ್‌ನಲ್ಲಿ ಸಹ ಅಕ್ರಮ ಡ್ರಗ್ಸ್‌ ಮಾರಾಟ ಸಂಬಂಧ ಆರೋಪಿ ಮೇಲೆ ಪ್ರಕರಣ ದಾಖಲಾಗಿರುವುದ್ದಾಗಿ ಮಾಹಿತಿ ನೀಡಿದ್ದಾರೆ

RELATED ARTICLES

Related Articles

TRENDING ARTICLES