ನಟ ರಾಮ್ ಚರಣ ಅಭಿನಯದ ‘ಗೇಮ್ ಚೇಂಜರ್’ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.ಗೇಮ್ ಚೇಂಜರ್ ಸಿನಿಮಾದಲ್ಲಿ ನಟ ರಾಮ್ ಚರಣ ದ್ವಿಪಾತ್ರದಲ್ಲಿ ಅಭಿನಯಿಸಿದ್ದು. ತಂದೆಯಾಗಿ ಮತ್ತು ಮಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾ ಬಿಡುಗಡೆಯಾದ ಕೆಲವೆ ಗಂಟೆಗಳಲ್ಲಿ ಫೈರಸಿಯಾಗಿದೆ ಎಂದು ಮಾಹಿತಿ ದೊರೆತಿದೆ.
ಬಿಡುಗಡೆಯಾದ ಒಂದು ಗಂಟೆಯೊಳಗೆ ಈ ಚಿತ್ರವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಪೈರಸಿ ವೆಬ್‌ಸೈಟ್‌ಗಳನ್ನು ನಿಲ್ಲಿಸಲು ವರ್ಷಗಳಿಂದ ಪ್ರಯತ್ನಿಸಿದರೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಬಿಗ್ ಬಜೆಟ್ನ ಈ ಸಿನಿಮಾಗೆ ಫೈರಸಿ ಮತ್ತೊಂದು ಮೈನಸ್ ಪಾಯಿಂಟ್ ಆಗಿ ಪರಿಣಮಿಸಿದೆ.
ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ ವಿಮರ್ಶಕರು !
ಸಿನಿಮಾವನ್ನು ಖ್ಯಾತ ನಿರ್ದೇಶಕ ಶಂಕರ್ ಚಿತ್ರವನ್ನು ನಿರ್ದೇಶನ ಮಾಡಿದ್ದು. ಈ ಚಿತ್ರದಲ್ಲಿ ರಾಮ್ ಚರಣ್, ಅಂಜಲಿ, ಕಿಯಾರಾ ಅಡ್ವಾಣಿ, ಸಮುದ್ರಖನಿ, ಎಸ್ ಜೆ ಸೂರ್ಯ, ಜಯರಾಮ್, ಸುನಿಲ್ ಮುಂತಾದವರು ನಟಿಸಿದ್ದಾರೆ. ಸಿನಿಮಾವನ್ನು 450 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದು. ಈ ಚಿತ್ರದ ಒಂದು ಹಾಡಿಗೆ ಶಂಕರ್ 95 ಕೋಟಿ ಖರ್ಚು ಮಾಡಿದ್ದಾರೆ.
ಈ ಸಿನಿಮಾಗೆ ಕಾರ್ತಿಕ್ ಸುಬ್ಬರಾಜ್ ಕಥೆ ಚಿತ್ರಕಥೆ ಬರೆದಿದ್ದು. ವಾರಿಸು ಸಿನಿಮಾದ ನಿರ್ಮಾಪಕ ದಿಲ್ ರಾಜು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 3 ವರ್ಷಗಳ ನಂತರ ರಾಮ್ ಚರಣ ಅಭಿನಯದ ಈ ಚಿತ್ರ ಬಿಡುಗಡೆಯಾಗಿದ್ದು. ನಕಾರಾತ್ಮಕ ವಿಮರ್ಶೆಯನ್ನು ಪಡೆದು ಈ ಚಿತ್ರ ಸಿನಿಮಾ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದೆ.
ಚಿತ್ರದ ಮೊದಲಾರ್ಧ ಹೆಚ್ಚು ಸ್ವಾರಸ್ಯಕರವಾಗಿ ಮೂಡಿಬಂದಿದ್ದು. ಮೊದಲಾರ್ಧ ಹೋಗುವುದೇ ತಿಳಿಯುವುದಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಕಥೆ ಇದ್ದಲ್ಲೇ ಗಿರಕಿ ಹೊಡೆಯುತ್ತದೆ. ನಾಯಕ ಮತ್ತು ಖಳನಾಯಕನ ನಡುವಿನ ಜಟಾಪಟಿಯಲ್ಲೇ ಸೆಕೆಂಡ್ ಹಾಫ್ ಹೆಚ್ಚು ಮುಳುಗಿದೆ. ಕಥೆಯಲ್ಲಿ ಒಂದರಮೇಲೊಂದು ಟ್ವಿಸ್ಟ್ಗಳು ಎದುರಾಗುತ್ತವೆಯಾದರೂ ಎಷ್ಟೋ ದೃಶ್ಯಗಳಲ್ಲಿ ಲಾಜಿಕ್ ಇಲ್ಲವೇ ಇಲ್ಲ ಎಂದು ಚಿತ್ರ ವಿರ್ಮಶಕರು ಚಿತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.