ಹಾಸನ : ರಾಜ್ಯದ ಮೋಸ್ಟ್ ವಾಂಟೆಡ್ ನಕ್ಸಲರು ಶರಣಾಗಿರುವ ಸಂದರ್ಭದಲ್ಲಿ ನಕ್ಸಲ್ ನಾಯಕ ವಿಕ್ರಂಗೌಡನಿಗೆ ಸಂಬಂಧಿಸಿದೆ ಎನ್ನಲಾದ ಆಡಿಯೊ ವೈರಲ್ ಆಗಿದ್ದು. ವಿಕ್ರಂಗೌಡ ಸರ್ಕಾರದ ಮುಂದೆ ಶರಣಾದರೆ ಜನರಿಗೆ ಮೋಸ ಮಾಡಿದಂತಾಗುತ್ತದೆ ಎಂದು ಈ ಆಡಿಯೋದಲ್ಲಿ ಹೇಳಿದ್ದಾನೆ.2024 ನವೆಂಬರ್ 18ರಂದು ಎನ್ಕೌಂಟರ್‌ಗೆ ಬಲಿಯಾದ ವಿಕ್ರಂ ಗೌಡ ಸ್ಪೋಟಕ ಆಡಿಯೋದ ಇಂಚಿಂಚು ಮಾಹಿತಿ ಈ ವರದಿಯಲ್ಲಿದೆ.
ಕರಾವಳಿ ಮಲೆನಾಡಿನ ನಕ್ಸಲ್ ಇತಿಹಾಸದ ಅಂತ್ಯಕ್ಕೆ ಮುನ್ನುಡಿ ಬರೆದ ವಿಕ್ರಂ ಗೌಡ ಎನ್ಕೌಂಟರ್ ಗೆ ಸಂಬಂಧಿಸಿದ ಸ್ಪೋಟಕ ಆಡಿಯೋ ವೈರಲ್ ಆಗಿದೆ. ಶರಣಾಗತಿಗೆ ಒಪ್ಪದ ವಿಕ್ರಂ ಗೌಡ ತನ್ನ ಹೋರಾಟವನ್ನು ಮುಂದುವರಿಸುವ ಕುರಿತು ಸಂಧಾನಕಾರರೊಂದಿಗೆ ತೀವ್ರವಾಗಿ ಮಾತನಾಡಿದ್ದಾನೆ. 2024 ನವೆಂಬರ್ 18ರಂದು ಎನ್ಕೌಂಟರ್‌ಗೆ ಬಲಿಯಾದ ವಿಕ್ರಂ ಗೌಡನದ್ದು ಎನ್ನಲಾದ ಈ ಆಡಿಯೋದಲ್ಲಿ , ನಕ್ಸಲ್ ಚಲನೆ ಮತ್ತು ಶರಣಾಗತಿಗೆ ಸಂಬಂಧಿಸಿದಂತೆ ಸ್ಪೋಟಕ ವಿಚಾರಗಳು ಬಹಿರಂಗವಾಗಿದೆ.
ಇದನ್ನೂ ಓದಿ : ಮೈಸೂರಿಗೆ ಹೋಗಲು ಅನುಮತಿ ನೀಡಿದ ನ್ಯಾಯಾಲಯ : ಫಾರ್ಮಹೌಸ್ನಲ್ಲಿ ದಾಸನ ಸಂಕ್ರಾಂತಿ !
ಆಡಿಯೋದಲ್ಲಿ ಏನಿದೆ !
ರಿಲೀಸ್ ಆಗಿರುವ ಆಡಿಯೋದಲ್ಲಿ ಮಾತನಾಡಿರುವ ವಿಕ್ರಂ ಗೌಡ ‘ನಾವು ಯಾವುದೇ ರಾಜಿಗೆ ಹೋಗುವುದಿಲ್ಲ,
ಪಕ್ಷ ಅಥವಾ ಸಂಘಟನೆ ಜತೆ ಹೋಗುವುದಿಲ್ಲ, ರಾಜಿಗೆ ಹೋಗುವೆಂದರೆ ಅರ್ಥ ಏನು? ದುಡಿಯುವ ಜನರಿಗೆ ದ್ರೋಹ ಮಾಡಿದಂತಾಗುತ್ತದೆ, ದುಡ್ಡು ಮಾಡಲು ಹೋಗುತ್ತಿದ್ದಾರೆ ಎಂದು ಜನರು ತಿಳಿಯುತ್ತಾರೆ. ಲಕ್ಷ, ಕೋಟಿಗಟ್ಟಲೆನ ಹಣ ಕೊಡುತ್ತೇವೆ ಎಂದೂ ಹೇಳುತ್ತಿದ್ದಾರೆ, ಆದರೆ ನಾವೂ ಒಪ್ಪುವುದಿಲ್ಲ.
ನಾವು ರಾಜಿಗೆ ಹೋದರೆ ನಾವು ಜನಕ್ಕೆ ನಿಮ್ಮೊಂದಿಗೆ ಇರುತ್ತೇವೆ ಎಂದು ಆಶ್ವಾಸನೆ ನೀಡಿದ್ದೇವೆ. ಅದಕ್ಕೆ ನಾವು ಮೋಸ ಮಾಡಿದಂತಾಗುತ್ತದೆ. ಆ ಕೆಲಸವನ್ನು ನಾವು ಮಾಡುವುದಿಲ್ಲ, ಸಿಪಿಐಯವರು ರಾಜಿ ಮಾಡಿಕೊಂಡು ಪಕ್ಷ ಕಟ್ಟಿಕೊಂಡರು, ಎಲೆಕ್ಷನ್ ಮೂಲಕವೇ ಈ ವ್ಯವಸ್ಥೆಯನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ.
ಅದು ಸಾಧ್ಯವೇ? ನಾವು ಕೆಸರು ಗುಂಡಿಗೆ ಬಿದ್ದು ಕೆಸರಾಗಿಲ್ಲ ಎಂದರೆ ನಂಬುತ್ತಾರಾ? ವ್ಯವಸ್ಥೆಯೇ ಒಂದು ಕೊಚ್ಚೆ ಗುಂಡಿ. ಈ ಕೆಸರನ್ನು ಎಲೆಕ್ಷನ್ನಿಂದ ಬದಲಾಯಿಸಲು ಸಾಧ್ಯವಿಲ್ಲ.
ನಮ್ಮ ದೃಷ್ಟಿಕೋನದಲ್ಲಿ ವ್ಯವಸ್ಥೆ ತಲೆಕೆಳಗಾಗಿದೆ ಅದನ್ನು ಸರಿಪಡಿಸಲು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ
ಒಬ್ಬ ತಾಯಿ ಒಂದು ಮಗುವಿಗೆ ಜನ್ಮ ಕೊಡಬೇಕಾದರೆ, ಎಷ್ಟು ನೋವು ಅನುಭವಿಸುತ್ತಾಳೆ ಎಂದು ಆ ತಾಯಿಗೇ ಗೊತ್ತು. ಅದೇ ರೀತಿಯಾಗಿ ಈ ವ್ಯವಸ್ಥೆಯನ್ನು ಬದಲಾಯಿಸಲು ನಾವು ಕಷ್ಟ ಪಡಬೇಕಿದೆ. ಈಗಾಗಲೇ ನಾವು ಹತ್ತಾರು ಸಹ ಸಂಗಾತಿಗಳನ್ನು ಕಳೆದುಕೊಂಡಿದ್ದೇವೆ. ಒಂದನ್ನು ಪಡೆಯಬೇಕಾದರೆ ನಾವು ಇನ್ನೊಂದನ್ನು ಕಳೆದುಕೊಳ್ಳಬೇಕು ಎಂದು ರಿಲೀಸ್ ಆಗಿರುವ ಆಡಿಯೋದಲ್ಲಿ ವಿಕ್ರಂಗೌಡ ಮಾತುಗಳು ವೈರಲ್ ಆಗಿವೆ.