ಮಂಗಳೂರು : ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಿಂದಲೇ ಭಾರೀ ವಂಚನೆ ನಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು. ಹಣ ವರ್ಗಾವಣೆ ಮಾಡಲು ಇರಿಸಿದ್ದ ಆನ್ಲೈನ್ ಕ್ಯೂಆರ್ ಕೋಡ್ ಜಾಗದಲ್ಲಿ ತನ್ನ ಕ್ಯೂಆರ್ ಕೋಡ್ ಅಂಟಿಸಿದ್ದ ಪೆಟ್ರೋಲ್ ಬಂಕ್ ಸಿಬ್ಬಂದಿಗಳು 58 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾನೆ.
ಮಂಗಳೂರಿನ ಬಂಗ್ರಕೂಳೂರಿನ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ ಘಟನೆ ನಡೆದಿದ್ದು. ಕಳೆದ 15 ವರ್ಷದಿಂದ ಪೆಟ್ರೋಲ್ ಬಂಕ್‌ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೋಹನದಾಸ್ ಎಂಬಾತನಿಂದ ಕೃತ್ಯ ನಡೆದಿದೆ.
ಇದನ್ನೂ ಓದಿ : ದರ್ಶನ್ ನೋಡಿ ಭಾವುಕಳಾದ ಪವಿತ್ರಾ : ಫೆ.25ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ !
ಆರೋಪಿ ಮೋಹನ್ ದಾಸ್ ಪೆಟ್ರೋಲ್ ಬಂಕ್ನಲ್ಲಿದ್ದ ಕ್ಯೂಆರ್ ಕೋಡ್ನ್ನು ಬದಲಿಸಿ ತನ್ನ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಅಂಟಿಸಿದ್ದನು. 23 ಮಾರ್ಚ್ 1 ರಿಂದ 2023 ಜುಲೈ 31ರವರೆಗೆ ಕ್ಯೂಆರ್ ಕೋಡ್ ಅಂಟಿಸಿದ್ದ ಆರೋಪಿ ಸುಮಾರು 58 ಲಕ್ಷ ರೂ ಹಣವನ್ನು ವಂಚಿಸಿದ್ದ. ಇದೀಗ ಆರೋಪಿಯ ಕುರಿತು ಪೆಟ್ರೋಲ್ ಬಂಕ್ನ ಮ್ಯಾನೇಜರ್ ಮ್ಯಾಥ್ಯೂ ಎಂಬುವವರಿಂದ ಮಂಗಳೂರು ಸಿಯಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.