Friday, January 10, 2025

ಒಂದೇ ಕುಟುಂಬದ ಐವರ ಭೀಕರ ಕೊ*ಲೆ : ಮಕ್ಕಳ ಮೃತದೇಹವನ್ನು ಬಾಕ್ಸ್​ನಲ್ಲಿ ತುಂಬಿದ ಕಿರಾತಕರು !

ಉತ್ತರ ಪ್ರದೇಶ : ಮೀರತ್‌ನ ಲಿಸಾರಿ ಗೇಟ್ ಪ್ರದೇಶದಲ್ಲಿ ಒಂದೇ ಕುಟುಂಬದ ಐವರು ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಮೃತಪಟ್ಟವರಲ್ಲಿ ಒಬ್ಬ ಪುರುಷ, ಅವನ ಹೆಂಡತಿ ಮತ್ತು ಅವರ ಮೂವರು ಹೆಣ್ಣುಮಕ್ಕಳು ಸೇರಿದ್ದಾರೆ, ಕೊಲೆಯಾಗಿರುವ ಎಲ್ಲಾ ಮಕ್ಕಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ದಂಪತಿಯ ಶವಗಳು ನೆಲದ ಮೇಲೆ ಪತ್ತೆಯಾಗಿದ್ದರೆ, ಮಕ್ಕಳ ಮಂಚದ ಒಳಗಿರುವ ಪೆಟ್ಟಿಗೆಯಲ್ಲಿ ಪತ್ತೆಯಾಗಿವೆ ಎಂದು ಮಾಹಿತಿ ದೊರೆತಿದೆ.

ಪೊಲೀಸರ ಪ್ರಕಾರ, ಎಲ್ಲಾ ದೇಹಗಳಿಗೆ ತಲೆಗೆ ಗಾಯಗಳಾಗಿದ್ದು, ಭಾರವಾದ ವಸ್ತುವಿನಿಂದ ಹೊಡೆದಂತೆ ಕಂಡುಬಂದಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪ್ರಾಥಮಿಕ ಅವಲೋಕನಗಳ ಆಧಾರದ ಮೇಲೆ ಇದು ವೈಯಕ್ತಿಕ ದ್ವೇಷದಿಂದ ನಡೆದ ಕೊಲೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ತನಿಖೆ ಚುರುಕುಗೊಂಡಿದೆ ಎಂದು ಎಸ್‌ಎಸ್‌ಪಿ ವಿಪಿನ್ ತಿಳಿಸಿದ್ದಾರೆ.

ಇದನ್ನು ಓದಿ : ಟ್ರ್ಯಾಕ್ಟರ್​ ಮತ್ತು ಕಾರ್​ ನಡುವೆ ಮುಖಾಮುಖಿ ಡಿಕ್ಕಿ : ಕಾರ್ ಚಾಲಕ ಸಾ*ವು !

ಕೊಲೆಯಾಗಿರು ಮನೆಯ ಸುತ್ತಮುತ್ತಾ ಏನೋ ಅಸಹಜವಾದುದನ್ನು ಅಕ್ಕಪಕ್ಕದ ಮನೆಯವರು ಗಮನಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಮನೆಗೆ ಹೊರಗಿನಿಂದ ಬೀಗ ಹಾಕಿರುವುದು ಕಂಡು ಬಂದಿದ್ದು. ಅವರು ಛಾವಣಿಯ ಮೂಲಕ ಪ್ರವೇಶಿಸಿ ಮನೆಯ ಒಳಗೆ ಬಂದು ನೋಡಿದ್ದಾರೆ. ಮನೆಯ ಒಳಗಿನ ದೃಷ್ಯಗಳನ್ನು ನೋಡಿದ ಪೊಲೀಸರು ದಂಗಾಗಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಎಸ್‌ಎಸ್‌ಪಿ ಟಾಡಾ, ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಪೊಲೀಸರು ಮೇಲ್ಛಾವಣಿಯಿಂದ ಪ್ರವೇಶಿಸಿದಾಗ ಶವಗಳು ಪತ್ತೆಯಾಗಿವೆ. ಫೋರೆನ್ಸಿಕ್ ತಂಡಗಳು ಮನೆಯನ್ನು ಪರಿಶೀಲಿಸುತ್ತಿದ್ದು, ಭಯಾನಕ ಘಟನೆಯ ಹಿಂದಿನ ಸಂದರ್ಭಗಳನ್ನು ಬಹಿರಂಗಪಡಿಸಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES