ಚಿಕ್ಕೋಡಿ : ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸಬೇಕು ಅಂತಾರೆ. ಆದ್ರೆ ಇಲ್ಲೊಂದು ಖತರ್ನಾಕ್ ಗ್ಯಾಂಗ್ ಸುಳ್ಳನ್ನೇ ಬಂಡವಾಳ ಮಾಡಿಕೊಂಡು ಹಣಕ್ಕಾಗಿ ವಾರದ ಮದುವೆ ಮಾಡಿಸಿ ಗಂಡನ ಮನೆಯಲ್ಲಿ ಹಣ ಚಿನ್ನಾಭರಣ ಸಮೇತ ಪರಾರಿಯಾಗುವ ಗ್ಯಾಂಗ್ ಬೆಳಗಾವಿಯಲ್ಲಿ ಪತ್ತೆಯಾಗಿದೆ.
ಹೌದು.. ಮದುವೆ ವಯಸ್ಸು ಮಿರುತ್ತಿರುವ ಅವಿವಾಹಿತ ಪುರುಷರನ್ನೇ ಟಾರ್ಗೆಟ್ ಮಾಡಿಕೊಂಡು ಮದುವೆ ಹೆಸರಲ್ಲಿ ವಂಚನೆ ಎಸಗುತ್ತಿದ್ದವರು ಸಿಕ್ಕಿಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ನಡೆದಿದೆ. ಈ ಗ್ಯಾಂಗಿನ ಸದಸ್ಯನೊಬ್ಬನನ್ನು ಕಂಕನವಾಡಿ ಗ್ರಾಮಸ್ಥರು ರಾಯಬಾಗ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹರಾಷ್ಟ್ರದ ಮೂಲದ ಗ್ಯಾಂಗ್ ಒಂದು ಬೆಳಗಾವಿ ಸುತ್ತಮುತ್ತಲಿನ ಭಾಗದಲ್ಲಿ ಮದುವೆ ಮಾಡಿಸುತ್ತೇವೆ ಎಂದು ಹೇಳಿ. ಮೂರು ಲಕ್ಷ ಹಣ ಕೊಟ್ರೆ ಇವತ್ತೇ ಯಾದಿ ಮೇ ಶಾದಿ ಎಂದು ಹೇಳಿ ಮೋಸ ಮಾಡುತ್ತಿರುವ ಗ್ಯಾಂಗ್ ರೇಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ಮದುವೆ ಮಾಡಿಸುತ್ತೇವೆ ಎಂದು ಹೇಳಿ 3 ಲಕ್ಷ ರೂ. ಹಣ ಪಡೆದು ಮದುವೆ ಮಾಡಿಸಿ ನಂತರ ಹುಡುಗಿ ಒಂದುವಾರ ಸಂಸಾರ ಮಾಡಿ ಅಲ್ಲಿಂದ ಚಿನ್ನಾಭರಣ ಸಮೇತ ಪರಾರಿಯಾಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ :ರಾಮ ಮಂದಿರ ವಾರ್ಷಿಕೋತ್ಸವ ಸಂಭ್ರಮ: ಉಳಿ, ಸುತ್ತಿಗೆ ಪ್ರದರ್ಶನಕ್ಕೆ ಇಟ್ಟ ಅರುಣ್ ಯೋಗಿರಾಜ್ !
ಹಣದಾಸೆಗಾಗಿ ಮದುವೆಯಾಗದ ಯುವಕರನ್ನು ಟಾರ್ಗೆಟ್ ಮಾಡಿಕೊಂಡು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದವರನ್ನು ತಂದು ಮದುವೆ ಮಾಡಿಸುತ್ತಿರುವ ಈ ಗ್ಯಾಂಗ್ ಅಲ್ಲಲ್ಲಿ ಏಜೆಂಟರನ್ನು ರೆಡಿ ಮಾಡಿಕೊಡುಕೊಂಡು ನಮ್ಮದು ವಧುವರರ ಕೇಂದ್ರ ಇದೆ ಎಂದು ಹೇಳಿ ಇಂಥಹ ದಂಧೆ ಮಾಡುತ್ತಿದ್ದರು. ಇಂತಹ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಹಣ್ಣಕ್ಕಾಗಿ ಇಂಥ ಗ್ಯಾಂಗ್ ಮೋಸ ಮಾಡುತ್ತಾರೆ. ಇಂತವರನ್ನು ಬಂಧಿಸಿ ಪೊಲೀಸರು ಕಠಿಣ ಶಿಕ್ಷೆ ಕೊಡಿಸಬೇಕು ಹಾಗೂ ಮದುವೆ ಮಾಡಿಸುವ ಮುನ್ನ ಅವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುಯುವುದು ಉತ್ತಮ ಎನ್ನುತ್ತಾರೆ.
ಇತ್ತೀಚೆಗಷ್ಟೇ ಅಥಣಿ, ರಾಯಬಾಗ, ಹುಕ್ಕೇರಿ ಹಾಗೂ ಮಹಾರಾಷ್ಟ್ರ ಕರ್ನಾಟಕದ ಗಡಿ ಗ್ರಾಮಗಳಲ್ಲಿ ವಂಚನೆ ಬೆಳಕಿಗೆ ಬಂದಿದೆ. ಈ ರೀತಿ ಮದುವೆ ಮಾಡಿಸಲು ಈ ಗ್ಯಾಂಗ್ ಸದಸ್ಯನೊಬ್ಬ ಕಂಕನವಾಡಿ ಗ್ರಾಮಕ್ಕೆ ಬಂದಾಗ ಜನರಿಗೆ ಅನುಮಾನ ಬಂದಿದೆ. ಅನುಮಾನ ನಿಜವಾಗಿದ್ದು ಈಗ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮರ್ಯಾದೆಗೆ ಅಂಜಿ ಈತನ ವಿರುದ್ಧ ದೂರು ನೀಡಲು ಗ್ರಾಮಸ್ಥರು ಹಿಂದೇಟು ಹಾಕಿದ್ದಾರೆ. ಇನ್ನಾದರೂ ಪೊಲೀಸ್ ಇಲಾಖೆ ಈ ರೀತಿ ಮೋಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.