Friday, January 10, 2025

62ರ ಅಂಕಲ್​ ಜೊತೆಗೆ 8ನೇ ಭಾರಿ ಮದುವೆಯಾದ ಮಹಿಳೆ : PF ಹಣ ದೋಚಿದ್ದಾಳೆ ಎಂದ ಅಂಕಲ್​ !

ಬೆಂಗಳೂರು : ಮ್ಯಾಟ್ರಿಮೋನಿಯಲ್ಲಿ ಮೆಚ್ಚಿಕೊಂಡು ಮದುವೆಯಾಗಿದ್ದ ಅಂಕಲ್​ ಒಬ್ಬನಿಗೆ ಮಹಿಳೆ ಶಾಕ್​ ನೀಡುದ್ದು. ಮಹಿಳೆಯಿಂದ 25 ಲಕ್ಷ ಹಣವನ್ನು ಕಳೆದುಕೊಂಡ ಅಂಕಲ್​ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ. ಇದರ ಕುರಿತಾದ ಒಂದು ವರದಿ ಕೆಳಗಿದೆ.

ಹೌದು… 62 ವರ್ಷದ ರಾಮಕೃಷ್ಣ ಎಂಬಾತ ಮ್ಯಾಟ್ಟಿಮೋನಿಯಲ್ಲಿ 50 ವರ್ಷದ ವಿಜಯಲಕ್ಷಿ ಎಂಬಾಕೆಯನ್ನು ನೋಡಿ ಮದುವೆಯಾಗಿದ್ದನು. ಈ ಮದುವೆಗೂ ಮುನ್ನ ರಾಮಕೃಷ್ಣರಿಗೆ ಮದುವೆಯಾಗಿತ್ತು. ಆದರೆ ಮೊದಲ ಪತ್ನಿ ತೀರಿಕೊಂಡ ಹಿನ್ನಲೆ ಎರಡನೇ ಮದುವೆ ಮಾಡಿಕೊಂಡಿದ್ದನು. ಮಹಿಳೆ ವಿಜಯಲಕ್ಷ್ಮಿ ಕೂಡ ಈ ಮದುವೆಗೂ ಮುನ್ನ 7 ಮದುವೆಯಾಗಿದ್ದಳು. ಇದು ಆಕೆಗೆ 8ನೇ ಮದುವೆಯಾಗಿತ್ತು.

ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಕಿಶೋರ್‌ ನೇಮಕ !

ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಇಬ್ಬರು 2020ರ ನವೆಂಬರ್​ನಲ್ಲಿ ಮದುವೆಯಾಗಿದ್ದರು. ರಾಮಕೃಷ್ಣರ ಹಿನ್ನಲೆ, ಫಿಎಫ್​ ಅಮೌಂಟ್​, ಚಿನ್ನಭರಣದ ಬಗ್ಗೆ ತಿಳಿದು ಕೊಂಡಿದ್ದ ಮಹಿಳೆ ಮದುವೆಯಾದ ಕೆಲವೇ ತಿಂಗಳಲ್ಲಿ ಹಣ ಮತ್ತು ಚಿನ್ನಾಭರಣಕ್ಕಾಗಿ ಬೆದರಿಕೆ ಹಾಕಿದ್ದಳು. ಜೊತೆಗೆ ಮಹಿಳೆ ಇದಕ್ಕೂ ಮೊದಲು 7 ಮದುವೆಯಾಗಿದ್ದ ಬಗ್ಗೆ ಕೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಳು ಎಂದು ಅರೋಪಿಸಲಾಗಿದೆ.

ಹಾಗೇಯೆ ಮನೆಯಲ್ಲಿರುವ 25 ಲಕ್ಷ ಹಣವನ್ನು ಕಳವು ಮಾಡಿದ್ದಾರೆ ಎಂದು ರಾಮಕೃಷ್ಣ ದೂರು ನೀಡಿದ್ದು, ಜೊತೆಗೆ ಮಹಿಳೆ ಕೋರ್ಟ್​ನಲ್ಲಿ ಸುಳ್ಳು ದೂರನ್ನು ನೀಡಿರೋ ಆರೋಪ ಮಾಡಿದ್ದಾರೆ. ನ್ಯಾಯಾಲಯದ ಫಿಸಿಆರ್​ ಆಧರಿಸಿ ಬಸವೇಶ್ವರ ನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿಕೊಂಡಿದ್ದು. ಮಹಿಳೆ ವಿಜಯ್​ ಲಕ್ಷ್ಮಿ ಸೇರಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES