ಬೆಂಗಳೂರು : ನಿನ್ನೆ (ಜ.08) ನಗರದ ಜಾಲಹಳ್ಳಿ ಕ್ರಾಸ್ ಬಳಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಟ್ವಿಸ್ಟ್ ದೊರೆತಿದ್ದು. ಆರೋಪಿ ಗಂಗರಾಜು ಜೊತೆ ಲಿವಿಂಗ್ ಇನ್ ರಿಲೇಶನ್ಶಿಪ್ನಲ್ಲಿದ್ದ ಪತ್ನಿ ಭಾಗ್ಯಮ್ಮ ಮತ್ತು ಆಕೆಯ ಮಗಳನ್ನು ಕೊಲೆ ಮಾಡಿದ ಗಂಗರಾಜು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಈ ಕೊಲೆ ಪ್ರಕರಣವೇ ಅತ್ಯಂತ ರೋಚಕವಾಗಿದ್ದು. ಇದರ ಕುರಿತಾದ ಒಂದು ವರದಿ ಈ ಕೆಳಗೆ ನೀಡಲಾಗಿದೆ.
ಕೊಲೆ ಮಾಡಲು ರೂಪಿಸಿದ್ದ ಖತರ್ನಾಖ್ ಪ್ಲಾನ್ !
ಕೊಲೆಯಾದ ಭಾಗ್ಯಮ್ಮ ಮತ್ತು ಕೊಲೆ ಆರೋಪಿ ಇಬ್ಬರಗೂ ಈ ಮೊದಲೆ ಬೇರೆಯವರ ಜೊತೆ ಮದುವೆಯಾಗಿತ್ತು. ಆದರೆ ಇಬ್ಬರು ತಮ್ಮ ಮೊದಲ ಪತಿ ಮತ್ತು ಪತ್ನಿಯರಿಂದ ವಿಚ್ಚೇದನ ಪಡೆದು ಲಿವಿಂಗ್ ರಿಲೇಷನ್ ಶಿಪ್ನಲ್ಲಿದ್ದರು. ಭಾಗ್ಯಮ್ಮಳಿಗೆ ಮೊದಲೆ ಮಗಳಿದ್ದ ವಿಚಾರವನ್ನು ತಿಳಿದಿದ್ದರು. ಗಂಗರಾಜು ಆಕೆಯೊಂದಿಗೆ ಜೀವನ ನಡೆಸಲು ಒಪ್ಪಿಗೆ ಸೂಚಿಸಿದ್ದನು.
ಇದನ್ನೂ ಓದಿ :KSRTC ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ : ನಾಲ್ವರು ಸಾ*ವು !
ಆದರೆ ಜೊತೆಯಾಗಿ ಜೀವನ ಸಾಗಿಸಲು ಮುಂದಾದ ನಂತರ ಆರೋಪಿ ಗಂಗರಾಜು ತನ್ನ ಪತ್ನಿ ಭಾಗ್ಯಮ್ಮಳ ಮೇಲೆ ಮತ್ತು ಆಕೆಯ ಮಗಳ ಮೇಲೆ ಸಾಕಷ್ಟು ಅನುಮಾನ ಪಡುತ್ತಿದ್ದ. ಪತ್ನಿ ಮತ್ತು ಮಗಳಿಬ್ಬರಿಗೂ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಅವರ ಜೊತೆ ಜಗಳ ಮಾಡಿತ್ತಿದ್ದ. ಇತ್ತೀಚೆಗೆ ಭಾಗ್ಯಮ್ಮಳ ಅಕ್ಕನ ಮಗಳು ಹೇಮಾವತಿ ಎಂಬಾಕೆ ಮನೆಗೆ ಬಂದಿದ್ದಳು. ಆಕೆಯ ಮೇಲೂ ಗಂಗರಾಜು ಅನುಮಾನ ಪಡುತ್ತಿದ್ದನು.
ಇದೇ ಕಾರಣಕ್ಕೆ ಇಬ್ಬರ ನಡುವೆ ನಿನ್ನೆ ಜಗಳ ನಡೆದಿದ್ದು, ಇದರಿಂದ ಸಿಟ್ಟಿಗೆದ್ದ ಆರೋಪಿ ಗಂಗರಾಜು ಕೊಲೆಗೆ ಸಂಚು ರೂಪಿಸಿದ್ದನು. ಇದಕ್ಕೆಂದೆ ನಿನ್ನೆ ಸಂಜೆ ಹೆಸರಘಟ್ಟದಲ್ಲಿ ನಡೆಯುತ್ತಿದ್ದ ರೈತರ ಸಂತೆಗೆ ಹೋಗಿದ್ದ ಗಂಗರಾಜು 500ರೂಪಾಯಿಗೆ ರೈತರು ಬಳಸುವ ಹರಿತವಾದ ಮಚ್ಚನ್ನು ಖರೀದಿಸಿ ತಂದಿದ್ದನು. ಬಳಿಕ ನೇರವಾಗಿ ಮನೆಗೆ ಬಂದಿದ್ದ ಗಂಗರಾಜು ಮೂವರನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗುವ ಯೋಜನೆ ರೂಪಿಸಿದ್ದನು.
ಇದನ್ನೂ ಓದಿ :ತಿರುಪತಿ ಕಾಲ್ತುಳಿತ ಪ್ರಕರಣ : ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಿದ ಆಂಧ್ರ ಸರ್ಕಾರ !
ಮನೆಗೆ ಬಂದಾಗ ಪತ್ನಿ ಇಲ್ಲದ್ದನ್ನು ಕಂಡು ಗಂಗರಾಜು, ಮೊದಲೆ ರೂಪಿಸಿದ್ದ ಯೋಜನೆಯಂತೆ ಮನೆಯಲ್ಲಿದ್ದ ಮಗಳು ನವ್ಯಾಳ ಜೊತೆ ಗಲಾಟೆ ತೆಗೆದು ನವ್ಯಾಳ ಕುತ್ತಿಗೆಗೆ ಮಚ್ಚು ಬೀಸಿದ್ದನು. ಈ ವೇಳೆ ಅಡ್ಡ ಬಂದ ಸಂಬಂಧಿ ಹೇಮಾವತಿಯ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿ. ಇಬ್ಬರ ರುಂಡ-ಮುಂಡವನ್ನು ಬೇರ್ಪಡಿಸಿದ್ದನು. ಬಳಿಕ ತನ್ನ ಪತ್ನಿ ಮನೆಗೆ ಬರುವುದನ್ನು ಕಾಯುತ್ತ ನಿಂದ ಗಂಗರಾಜು ಬಾಗಿಲ ಹಿಂದೆ ಅಡಗಿ ಕುಳಿತು ಕಾಯುತ್ತಿದ್ದನು.
ಇದೇ ವೇಳೆಯಲ್ಲಿ ಪತ್ನಿ ಭಾಗ್ಯಮ್ಮ ಮನೆಗೆ ಬಂದಿದ್ದು. ಮಕ್ಕಳ ಸ್ಥಿತಿಯನ್ನು ನೋಡಿ ಕಿರುಚಿಕೊಂಡಿದ್ದಾಳೆ. ಇದೇ ವೇಳೆ ಸಿನಿಮೀಯ ರೀತಿಯಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು. ಆಕೆಯ ಹತ್ಯೆ ಮಾಡಿ ನೇರವಾಗಿ ಪೀಣ್ಯಾ ಪೊಲೀಸ್ ಠಾಣೆಗೆ ಹೋಗಿ ಸೆರೆಂಡರ್ ಆಗಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದು. ಸ್ಥಳ ಮಹಜರು ನಡೆಸಿ, ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ದೊರೆತಿದೆ.