ಹಾವೇರಿ : ಬೈಕ್ ಸವಾರನ ನಿರ್ಲಕ್ಷಕ್ಕೆ ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದ್ದು. ಅಪಾಘಾತದ ದೃಷ್ಯಾವಳಿಗಳು ಟೋಲ್ಗೇಟ್ನ ಕ್ಯಾಮರದಲ್ಲಿ ಸೆರೆಯಾಗಿದೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲಗೇಟ್ ನಲ್ಲಿ ಘಟನೆ ನಡೆದಿದ್ದು. ಬೈಕ್ ಚಾಲನೆ ಮಾಡುತ್ತಿದ್ದ ಯುವಕ ಹಿಂಬದಿಯಲ್ಲಿ ತನ್ನ ತಾಯಿ ಗಿರಿಜಮ್ಮಳನ್ನು ಕೂರಿಸಿಕೊಂಡು ಹೋಗುತ್ತಿದ್ದ. ಟೋಲ್ನಲ್ಲಿ ಗೇಟ್ ಹಾಕಿದ್ದರು ಕೂಡ ಬೇರೆ ಕಡೆಯಿಂದ ಹೋಗದೆ ಅದೇ ರಸ್ತೆಯಲ್ಲಿ ಹೋಗಿದ್ದಾನೆ.
ಇದನ್ನೂ ಓದಿ : ಹುಟ್ಟಿದ ಕೆಲವೇ ಕ್ಷಣಗಳಲ್ಲೆ ಕಣ್ಮುಚ್ಚಿದ ನವಜಾತ ಶಿಶು !
ಈ ವೇಳೆ ಟೋಲ್ ತಡೆಗೋಡೆಯ ಬಳಿ ಯುವಕ ಬಾಗಿದ್ದಾನೆ. ಆದರೆ ಹಿಂಬದಿಯಲ್ಲಿ ಕುಳಿತ್ತಿದ್ದ ಆತನ ತಾಯಿಗೆ ಟೋಲ್ ತಡೆಕಂಬ ಬಡಿದು, ಮಹಿಳೆ ನೆಲಕ್ಕೆ ಅಪ್ಪಳಿಸಿದ್ದಾಳೆ. ನೆಲಕ್ಕೆ ಅಪ್ಪಳಿಸಿದ ಮಹಿಳೆ ಗಿರಿಜಮ್ಮ ಸಾವನ್ನಪ್ಪಿದ್ದು. ಘಟನೆಯ ದೃಷ್ಯಗಳು ಸಿಸಿಟಿವಿಯಕಲ್ಲಿ ಸೆರೆಯಾಗಿವೆ. ಘಟನೆ ಸಂಬಂಧ ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.