ಮಂಡ್ಯ : ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಂಭೀರವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು. ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೌದು.. ಮಂಡ್ಯದ ಅರೆಕೆರೆ ಗ್ರಾಮದಲ್ಲಿ ಅಪಘಾತ ಸಂಭವಿಸಿದ್ದು. ಅಪಘಾತದ ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎದುರು-ಬದುರು ಬಂದ ಬೈಕ್ ಸವಾರರು ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಆದರೆ ಇದೇ ವೇಳೆ ಅವರ ಪಕ್ಕದಲ್ಲಿ ಜೆಸಿಬಿ ಹಾದು ಹೋಗಿದ್ದು. ಒಂದು ವೇಳೆ ಜೆಸಿಬಿ ಕೆಳಗೆ ಬಿದ್ದಿದ್ದರೆ ಭಾರಿ ದೊಡ್ಡ ದುರಂತ ಸಂಭವಿಸುತ್ತಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತವಾಗಿದ್ದನ್ನು ಕಂಡ ಸ್ಥಳೀಯರು ಗಾಯಾಳುಗಳನ್ನು ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ :ನಡುರಸ್ತೆಯಲ್ಲೆ ಯುವತಿಯನ್ನು ಕೊಚ್ಚಿ ಕೊ*ಲೆ ಮಾಡಿದ ಯುವಕ : ನೋಡುತ್ತಾ ನಿಂತ ಜನ !
ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಮೈಸೂರು ಹಾಗೂ ಮಂಡ್ಯದ ಆಸ್ಪತ್ರೆಗೆ ರವಾನಿಸಿದ್ದು. ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.