ಚೆನ್ನೈ: ರಾಜ್ಯದಲ್ಲಿ ಡಿನ್ನರ್ ಪಾಲಿಟಿಕ್ಸ್ ತಾರಕಕ್ಕೇರಿರುವ ಸಂದರ್ಭದಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದೇವರ ಮೊರೆ ಹೋಗಿದ್ದಾರೆ. ಶತ್ರು ಸಂಹಾರಕ್ಕೆಂದೆ ಜನಿಸಿರುವ ದೇವರ ರೂಪವಾದ ಪ್ರತ್ಯಂಗೀರ ದೇವಿಯ ದರ್ಶನ ಪಡೆದಿರುವ ಡಿಕೆ ಶಿವಕುಮಾರ್ ದಂಪತಿಗಳು, ವಿಷೇಶ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧದ ಅನುಮಾನ : ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆ ಮತ್ತು ಆಕೆಯ ಮಗಳ ಕೊ*ಲೆ !
ರಾಜ್ಯ ಕಾಂಗ್ರೆಸ್ನಲ್ಲಿ ಅನೇಕ ಗೊಂದಲಗಳು ಆರಂಭವಾಗಿದ್ದು. ಡಿನ್ನರ್ ಪಾಲಿಟಿಕ್ಸ್ ಹೆಚ್ಚಾಗುತ್ತಿದೆ. ಈ ಪಾರ್ಟಿಗಳನ್ನು ಡಿ,ಕೆ ಶಿವಕುಮಾರ್ ತಡೆಯಲು ಯತ್ನಿಸುತ್ತಿದ್ದಾರೆ ಎಂದು ಕೂಡ ಮಾಹಿತಿ ದೊರೆಯುತ್ತಿದೆ. ಇದರ ನಡುವೆ ಡಿ.ಕೆ ಶಿವಕುಮಾರ್ ತಮಿಳು ನಾಡಿನ ಕುಂಭಕೋಣಂಗೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಡಿಕೆಶಿ ಪ್ರತ್ಯಂಗೀರ ದೇವಿಯ ದರ್ಶನ ಪಡೆದಿದ್ದು. ರಾಜಕೀಯ ಸಮಸ್ಯೆ ಪರಿಹಾರಕ್ಕಾಗಿ ದರ್ಶನ ಪಡೆದರೆ ಎಂಬ ಪ್ರಶ್ನೆಯೂ ಇದ್ದಿದೆ.
ಪ್ರತ್ಯಂಗೀರ ದೇವಿಯ ಮಹಿಮೆ ಬಗ್ಗೆ ಗೊತ್ತೇ !
ವಿಷ್ಣು ಪುರಾಣದ ನಾಲ್ಕನೇ ಅವತಾರವಾದ ನರಸಿಂಹನ ಕೋಪವನ್ನು ತಣ್ಣಗಾಗಿಸಿದ ದೇವಿ ಎಂದು ವಿಷ್ಣು ಪುರಾಣದಲ್ಲಿ ದೇವಿಯ ಬಗ್ಗೆ ಉಲ್ಲೇಖವಿದ್ದು. ತ್ಯಂಗಿರಾ ದೇವಿಯು ಶಕ್ತಿ ದೇವತೆಗಳಲ್ಲಿ ಉಗ್ರ ಸ್ವರೂಪಿಣಿ, ಶತ್ರು ಸಂಹಾರಕ್ಕಾಗಿ ಜನಿಸಿ ಬಂದವಳು ಈಕೆ. ಶಿವ-ವಿಷ್ಣು ಹಾಗೂ ಆದಿಶಕ್ತಿ ಈ ಮೂವರ ಅಂಶವನ್ನು ಹೊಂದಿರುವ ದೇವತೆ ಎಂಬ ನಂಬಿಕೆಯಿದೆ.
ಈ ದೇವಿಯ ಆರಾಧನೆಯನ್ನು ಮಾಡಲು ನಿರ್ದಿಷ್ಟ ಸಮಯವಿದ್ದು. ವಿಷೇಶವಾಗಿ ಅಮವಾಸೆ, ಹುಣ್ಣಿಮೆ ಮತ್ತು ಅಷ್ಟಮಿಯ ದಿನಗಳಲ್ಲಿ ಈ ದೇವಿಯನ್ನು ಆರಾಧನೆ ಮಾಡುವುದರಿಂದ ವಿಷೇಶ ಫಲಗಳನ್ನು ಪಡೆಯುತ್ತಾರೆ ಎಂದು ನಂಬಿಕೆ ಇದೆ. ಜೊತೆಗೆ ಗ್ರಹಣದ ಸಮಯದಲ್ಲಿ ಬಹುತೇಕ ಎಲ್ಲಾ ದೇವಾಲಗಳ ಬಾಗಿಲು ಮುಚ್ಚಿದರು ಕೂಡ ಪ್ರತ್ಯಂಗೀರ ದೇವಿಯ ದೇವಾಸ್ಥಾನವನ್ನು ಮುಚ್ಚುವುದಿಲ್ಲ. ಗ್ರಹಣ ಸಮಯದಲ್ಲಿ ಪೂಜೆ ಮಾಡಿದರೆ ಹೆಚ್ಚು ಫಲ-ಫಲಾಗಳು ಲಭಿಸುತ್ತವೆ ಎಂದು ನಂಬಲಾಗಿದೆ.
ಇನ್ನೊಂದು ವಿಶೇಷ ಎಂದರೆ ದೇವಿಗೆ ಮಾಡುವ ಹೋಮದಲ್ಲಿ ಕ್ವಿಂಟಾಲ್ ಗಟ್ಟಲೆ ಬ್ಯಾಡಿಗೆ ಮೆಣಸಿನಕಾಯಿಯನ್ನು ಸುರಿಯಲಾಗುತ್ತದೆ. ಆದರೆ ಎಷ್ಟೆ ಮೆಣಸಿನಕಾಯಿ ಸುರಿದರೂ ಸ್ವಲ್ಪವೂ ಘಾಟು ಬರೋದಿಲ್ಲ ಎಂದು ನಂಬಲಾಗಿದೆ. ಈ ಹೋಮವನ್ನು 64 ವಿಶೇಷ ಮಂತ್ರ ಜಪಿಸುವ ಮೂಲಕ ಮಾಡಲಾಗುತ್ತದೆ.
ಮಾಟ ಮಂತ್ರ ಮಾಡಿದರೆ, ಅದರಿಂದ ರಕ್ಷಿಸಿಕೊಳ್ಳಲು ಈ ತಾಯಿಯ ಮೊರೆ ಹೋಗುತ್ತಾರೆ ಎಂದು ನಂಬಲಾಗಿದ್ದು. ರಾಜ- ಮಹರಾಜರ ಕಾಲದಿಂದಲೂ ತಾಯಿಯ ಆರಾಧನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.