Friday, January 10, 2025

ಚೀನಾ 6ನೇ ತಲೆಮಾರಿನ ಯುದ್ದವಿಮಾನಗಳನ್ನು ಪರೀಕ್ಷಿಸುತ್ತಿದೆ, ನಾವಿನ್ನೂ ತೇಜಸ್​​ಗಾಗಿ ಕಾಯ್ತಿದ್ದೇವೆ : IAF ಮುಖ್ಯಸ್ಥರು

ನವದೆಹಲಿ: 21ನೇ ಸುಬ್ರೋತೋ ಮುಖರ್ಜಿ ಸೆಮಿನಾರ್‌ನಲ್ಲಿ ಮಾತನಾಡಿದ ಭಾರತದ ವಾಯುಪಡೆಯ ಮುಖ್ಯಸ್ಥ ಏರ್​ ಚೀಫ್​ ಮಾರ್ಷಲ್​​ ಅಮರ್​ಪ್ರೀತ್​ ಸಿಂಗ್​ ‘ ಚೀನಾ ಇಂದು ಆರನೇ ತಲೆಮಾರಿನ ಯುದ್ದವಿಮಾನಗಳನ್ನು ಪರೀಕ್ಷಿಸುತ್ತಿದೆ. ಆದರೆ ನಾವಿನ್ನೂ ತೇಜಸ್​ ವಿಮಾನಗಳಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ಸುಬ್ರೋತೋ ಮುಖರ್ಜಿ ಸೆಮಿನಾರ್​ನಲ್ಲಿ ವಾಯುಪ್ರದೇಶದಲ್ಲಿ ಸ್ವಾವಲಂಬನೆ ವಿಷಯದ ಕುರಿತು ಮಾತನಾಡಿದ ವಾಯುಪಡೆಯ ಮುಖ್ಯಸ್ಥರು ತೇಜಸ್ ಯುದ್ಧ ವಿಮಾನ ಪಡೆಯಲು ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ತೇಜಸ್​ ಯುದ್ದ ವಿಮಾನಗಳನ್ನು ವಾಯು ಪಡೆಗೆ ಸೇರ್ಪಡೆ ಮಾಡಿಕೊಳ್ಳುವ ಯೋಜನೆಯನ್ನು 1984ರಲ್ಲಿ ಆರಂಭಿಸಲಾಯಿತು. ಅದಾದ 17 ವರ್ಷಗಳ ನಂತರ ಮೊದಲ ತೇಜಸ್​ ವಿಮಾನ ಹಾರಾಟ ನಡೆಸಿತು.

ಇದನ್ನೂ ಓದಿ:ಬೈಕ್​ ಸವಾರನ ನಿರ್ಲಕ್ಷ್ಯಕ್ಕೆ ಹಿಂಬದಿ ಕುಳಿತ್ತಿದ್ದ ತಾಯಿ ಸಾ*ವು !

2009-10ರಲ್ಲಿ 40 ತೇಜಸ್​ ವಿಮಾನಗಳನ್ನು ಆರ್ಡರ್​​ ಮಾಡದ್ದೆವು. ಇಂದು ನಾವು 2025ರಲ್ಲಿದ್ದೇವೆ ಆದರೆ ಇನ್ನು ನಾವು ಈ ವಿಮಾನಗಳಿಗಾಗಿ ಕಾಯುತ್ತಿದ್ದೇವೆ. ಇದು ನಮ್ಮ ಉತ್ಪಾದನ ಸಾಮರ್ಥ್ಯ, ನಾವು ಸ್ಪರ್ಧೆಯನ್ನು ಉತ್ತೇಜಿಸಬೇಕಾಗಿದೆ, ಅದಕ್ಕಾಗಿ ನಾವು ಅನೇಕ ಮೂಲಗಳನ್ನು ಹೊಂದಿರಬೇಕು. ಇದು ಸಾಧ್ಯವಾಗದಿದ್ದರೆ ಪರಿಸ್ಥಿತಿ ಬದಲಾಗುವುದಿಲ್ಲ. ನಮ್ಮ ಸಾಮರ್ಥ್ಯ ವೃದ್ಧಿ ಬಹಳ ಮುಖ್ಯ, ಉತ್ಪಾದನಾ ಘಟಕಗಳು ಆಧುನಿಕ ಉತ್ಪಾದನಾ ಪ್ರಕ್ರಿಯೆಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು ಮತ್ತು ಅವರ ಉದ್ಯೋಗಿಗಳಿಗೆ ತರಬೇತಿ ನೀಡಬೇಕು ಎಂದು ಹೇಳಿದರು.

ಭಾರತದ ತೇಜಸ್ ಯುದ್ಧ ವಿಮಾನಗಳು 5ನೇ ತಲೆಮಾರಿನದ್ದಾಗಿದ್ದು, ಅವುಗಳಲ್ಲಿ ಸಾಕಷ್ಟು ವಿಳಂಬವಾಗಿದೆ. ಆದರೆ ಇದೇ ಸಮಯದಲ್ಲಿ ಚೀನಾ 6ನೇ ತಲೆಮಾರಿದ ಯುದ್ದ ವಿಮಾನವನ್ನು ಪರೀಕ್ಷೆ ಮಾಡುತ್ತಿದೆ. ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ನಮ್ಮ ಸವಾಲುಗಳು ಹೆಚ್ಚಾಗುತ್ತಿವೆ. ಎರಡು ದೇಶಗಳ ಸೇನೆಗಳು ತಮ್ಮ ಸಾರ್ಮಥ್ಯವನ್ನು ವೇಗವಾಗಿ ಹೆಚ್ಚಿಸುತ್ತಿವೆ. ಇದು ಸಂಖ್ಯೆಯಲ್ಲಿ ಮಾತ್ರವಲ್ಲ, ತಂತ್ರಜ್ನಾನದ ದೃಷ್ಟಿಯಲ್ಲೂ ಪ್ರಗತಿ ಸಾಧಿಸುತ್ತಿದೆ.

ಚೀನಾ ತಂತ್ರಜ್ನಾನದ ದೃಷ್ಟಿಯಿಂದಲೂ ವೇಗವಾಗಿ ಬೆಳವಣಿಗೆ ಸಾಧಿಸುತ್ತಿವೆ. ಅವರು ಇತ್ತೀಚೆಗೆ ಆರನೇ ತಲೆಮಾರಿನ ಯುದ್ಧ ವಿಮಾನವನ್ನು ಪರೀಕ್ಷಿಸಿದ್ದಾರೆ. ಚೀನಾ ತನ್ನ 6ನೇ ತಲೆಮಾರಿನ ಜೆ-20 ಮತ್ತು ಜೆ-35 ವಿಮಾನಗಳನ್ನು ದಾಖಲೆ ಸಮಯದಲ್ಲಿ ರಹಸ್ಯ ತಂತ್ರಜ್ಞಾನದೊಂದಿಗೆ ಸಿದ್ಧಪಡಿಸಿದೆ ಎಂದು ಹೇಳಿದರು.

 

 

RELATED ARTICLES

Related Articles

TRENDING ARTICLES