ಯಾದಗಿರಿ : ಜಿಲ್ಲೆಯಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು. ಎರಡು ವಾರದ ಅಂತರದಲ್ಲಿ ಮೂರು ನವಜಾತ ಕಂದಮ್ಮಗಳು ಕಣ್ಮುಚ್ಚಿವೆ. ಮೊಮ್ಮಗಳನ್ನು ಕಳೆದುಕೊಂಡ ತಾತ ಗೋಳಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದ್ದು. ನಿನ್ನೆ ಗಾಯಿತ್ರಿ ದಾಸರಿ ಎಂಬಾಕೆ ಆರೋಗ್ಯ ತಪಾಸಣೆಗೆ ಎಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ವೈದ್ಯರು ತಪಾಸಣೆಗೆ ಜಿಲ್ಲಾಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು. ಆದರೆ ತಡರಾತ್ರಿ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ.
ಇದನ್ನೂ ಓದಿ :ಪ್ರತ್ಯಂಗೀರ ದೇವಿಯ ದರ್ಶನ ಪಡೆದ ಡಿಕೆಶಿ : ಶತ್ರು ಸಂಹಾರಕ್ಕಾಗಿ ಜನಿಸಿದ ದೇವಿಯ ಕುರಿತಾದ ವರದಿ !
ಈ ವೇಳೆ ಕುಟುಂಬಸ್ಥರು ಮಹಿಳೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಬಂದಾಗಲೇ ಮಗು ಗರ್ಭದಿಂದ ಅರ್ಧ ಹೊರಗೆ ಬಂದಿತ್ತು. ಈ ವೇಳೆ ಜಿಲ್ಲಾಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್ ಇಲ್ಲದ ಕಾರಣ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಆದರೆ ಹೆರಿಗೆಯಾದ ಕೆಲವೇ ಕ್ಷಣದಲ್ಲಿ ನವಜಾತ ಶಿಶು ಮೃತ ಪಟ್ಟಿದೆ.
ಘಟನೆ ಬಗ್ಗೆ ತಿಳಿದ ಡಿಹೆಚ್ಓ ಮಹೇಶ್ ಬಿರಾದಾರ ಸಮುದಾಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಗುರುಮಿಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.