ಮಹರಾಷ್ಟ್ರ: ಪುಣೆಯ ಎರವಾಡದಲ್ಲಿ ಭೀಕರ ಕೊಲೆ ನಡೆದಿದ್ದು. ಸಹದ್ಯೋಗಿಯೊಬ್ಬ ತನ್ನ ಜೊತೆ ಕೆಲಸ ನಿರ್ವಹಿಸುತ್ತಿದ್ದ ಯುವತಿಯನ್ನು ಭೀಕರವಾಗಿ ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ಅಲ್ಲೆ ರಸ್ತೆಯಲ್ಲಿದ್ದ ಜನರು ಯುವತಿಯ ರಕ್ಷಣೆ ಮಾಡದೆ ನೋಡುತ್ತಾ ನಿಂತಿದ್ದಾರೆ.
ಯರವಾಡದ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಘಟನೆ ನಡೆದಿದ್ದು. ಹಣಕಾಸಿನ ವಿವಾದದ ಹಿನ್ನಲೆಯಲ್ಲಿ 28 ವರ್ಷದ ಮಹಿಳೆಗೆ ಯುವಕ ಚಾಕುವಿನಿಂದ ಗಂಭೀರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಮೃತ ಮಹಿಳೆಯನ್ನು ಶುಭದಾ ಶಂಕರ ಎಂದು ಗುರುತಿಸಿದ್ದು. ಕೊಲೆ ಮಾಡಿದ ಆರೋಪಿಯನ್ನು ಕೃಷ್ಣ ಸತ್ಯನಾರಾಯಣ ಕನೋಜಿಯಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಚೀನಾ 6ನೇ ತಲೆಮಾರಿನ ಯುದ್ದವಿಮಾನಗಳನ್ನು ಪರೀಕ್ಷಿಸುತ್ತಿದೆ, ನಾವಿನ್ನೂ ತೇಜಸ್ಗಾಗಿ ಕಾಯ್ತಿದ್ದೇವೆ : IAF ಮುಖ್ಯಸ್ಥರು
ಘಟನೆಯ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಕೃಷ್ಣ ನಾರಯಣ ಮಹಿಳೆಗೆ ಮಾಂಸ ಕತ್ತರಿಸುವ ಕತ್ತಿಯಿಂದ ಹಲ್ಲೆ ನಡೆಸಿ, ಶುಭಾದಳ ಸುತ್ತಲು ನಡೆದಾಡಿದ್ದಾನೆ. ಇಷ್ಟೆಲ್ಲಾ ನಡೆಯುತ್ತಿದ್ದರು ಜನರು ಯುವತಿಯ ರಕ್ಷಣೆಗೆ ಧಾವಿಸದೆ ಇರುವುದು ನಿಜಕ್ಕೂ ಆತಂಕದ ವಿಷಯವಾಗಿದೆ. ಕೊನೆಗೆ ಯುವಕ ಕತ್ತಿಯನ್ನು ಕೆಳಗೆ ಎಸೆದ ನಂತರ ಅಲ್ಲಿದ್ದ ಜನರು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ.