ಬೆಂಗಳೂರು : ನಗರದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು. ತನ್ನ ಪಾಡಿಗೆ ತಾನು ಮಲಗಿದ್ದ ನಾಯಿಯ ಮೇಲೆ ದುರಹಂಕಾರಿ ಮನುಷ್ಯನೊಬ್ಬ ಕಾರು ಚಲಾಯಿಸಿ ವಿಕೃತಿ ಮೆರೆದಿದ್ದಾನೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ :ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ : ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!
ಇತ್ತೀಚೆಗೆ ಶ್ವಾನಗಳ ಮೇಲೆ ಮನುಷ್ಯ ನಡೆಸುತ್ತಿರುವ ಕೌರ್ಯ ಹೆಚ್ಚಾಗುತ್ತಿದ್ದು. ರಸ್ತೆಯಲ್ಲಿ ಮಲಗಿರುವ ನಾಯಿಗಳ ಮೇಲೆ ವಾಹನ ಹರಿಸಿ ಹತ್ಯೆ ಮಾಡಿರುವ ದೃಶ್ಯಗಳನ್ನು ನಾವು ನೋಡುತ್ತಲೆ ಇರುತ್ತೇವೆ. ಅದೇ ರೀತಿಯ ಮತ್ತೊಂದು ಕೃತ್ಯ ಬೆಂಗಳೂರಿನ ಜೆ,ಪಿ ನಗರದಲ್ಲಿ ನಡೆದಿದ್ದು. ಕಿರಾತಕನೋರ್ವ ರಸ್ತೆಯ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಉದ್ದೇಶ ಪೂರ್ವಕವಾಗಿ ಜೀಪ್ ಹತ್ತಿಸಿ ವಿಕೃತಿ ಮೆರೆದಿದ್ದಾನೆ.