ಚಿಕ್ಕಮಗಳೂರು : ಇಂದು ಕರ್ನಾಟಕದ ಮೋಸ್ಟ್ ವಾಟೆಂಡ್ ನಕ್ಸಲರು ಶರಣಾಗುತ್ತಿದ್ದು. ಮುಂಡಗಾರು ಲತಾ ಸೇರಿದಂತೆ 6 ಜನ ನಕ್ಸಲರು ಕಾಡಿನಿಂದ ಹೊರಬಂದಿದ್ದಾರೆ. ಇವರು ಶರಣಾಗುವ ಹಿನ್ನಲೆ ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಹೈ ಅರ್ಲಟ್ ಘೋಷಣೆ ಮಾಡಿದ್ದು.ಶರಣಾಗುತ್ತಿರುವ ನಕ್ಸಲರ ಮೇಲೆ ರಾಷ್ಟ್ರೀಯ ತನಿಖಾ ದಳವು ಕಣ್ಣಿಟ್ಟಿದೆ.
ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಪಕ್ಕದಲ್ಲಿರುವ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ ರಚಿಸಿದ ತಂಡದ ಎದುರು ಎಲ್ಲಾ 6 ನಕ್ಸಲರು ಶರಣಾಗಿದ್ದಾರೆ. ಮುಂಡಗಾರು ಲತಾ, ಸುಂದರಿ ಕತ್ಲೂರು, ವನಜಾಕ್ಷಿ, ಮಾರಪ್ಪ, ಜೀಶು ಸಮಾಜದ ಮುಖ್ಯವಾಹಿನಿಗೆ ಹಾಜರಾಗುತ್ತಿದ್ದಾರೆ. ಶಾಂತಿಗಾಗಿ ವೇದಿಕೆ ತಂಡದಿಂದ ಇವರ ಮನವೊಲಿಸುವ ಕೆಲಸವಾಗಿದೆ.
ಇದನ್ನೂ ಓದಿ:ಮಗನನ್ನು ಶಾಲೆಗೆ ಬಿಡಲು ಹೋದಾಗ ಅಪಘಾತ : ಟ್ರ್ಯಾಕ್ಟರ್ ಹರಿದು ಬಾಲಕ ಸಾ*ವು !
ನಕ್ಸಲರನ್ನು ಬಾಳೆಹೊನ್ನೂರಿನಿಂದ ನೇರವಾಗಿ ಬೆಂಗಳೂರಿಗೆ ಕರೆತರುತ್ತಿದ್ದು. ಸಂಜೆ ನಾಲ್ಕು ಗಂಟೆ ವೇಳೆ ಮುಖ್ಯಮಂತ್ರಿ ಅಥವಾ ಗೃಹ ಸಚಿವರ ಮುಂದೆ ಶರಣಾಗುವ ಸಾಧ್ಯತೆ ಇದೆ. ನಕ್ಸಲರು ಶರಣಾದ ನಂತರ ಅವರನ್ನು ಪೊಲೀಸರು ವಶಕ್ಕೆ ಪಡೆಯಲಿದ್ದು. ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.