ಛತ್ತೀಸಗಡ್ : ಎರಡು ದಿನದ ಹಿಂದೆ ಛತ್ತೀಸಗಡದಲ್ಲಿ ನಡೆದ ಭೀಕರ ನೆಲಬಾಂಬ್ ಸ್ಪೋಟದಲ್ಲಿ ನಕ್ಸಲ್ ವಿರುದ್ದದ ಕಾರ್ಯಚರಣೆ ಮುಗಿಸಿಕೊಂಡು ಬರುತ್ತಿದ್ದ 8 ಜನ ಪೊಲೀಸರು ಸಾವನ್ನಪ್ಪಿದ್ದರು. ಈ 8 ಜನರಲ್ಲಿ ಐವರು ಮಾಜಿ ನಕ್ಸಲರಿದ್ದು ಸಮಾಜದ ಮುಖ್ಯ ವಾಹಿನಿಯಿಂದ ಹೊರ ಬಂದು ಪೊಲೀಸ್ ಪಡೆಗೆ ಸೇರಿದ್ದ ಐವರು ಸಾವನ್ನಪ್ಪಿದ್ದಾರೆ.
ಛತ್ತೀಸಗಡದ ಬಿಜಾಪುರದಲ್ಲಿ ನಡೆದ ಭೀಕರ ಸ್ಫೋಟದಲ್ಲಿ ಮೃತಪಟ್ಟ 8 ಮಂದಿ ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲರಿದ್ದರು ಎಂದು ತಿಳಿದು ಬಂದಿದೆ. ನಕ್ಸಲಿಸಂ ತೊರೆದು ಬಂದು ಮುಖ್ಯ ವಾಹಿನಿಯಲ್ಲಿ ಜೀವನ ನಡೆಸುತ್ತಿದ್ದ ಇವರು ಪೊಲೀಸ್ ಪಡೆಗೆ ಸೇರ್ಪಡೆಯಾಗಿದ್ದರು. ಆದರೆ ಎರಡು ದಿನದ ಹಿಂದೆ ನಡೆದ ಭೀಕರ ದುರಂತದಲ್ಲಿ ಇವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ :ಕಾಂಗ್ರೆಸ್ ಸರ್ಕಾರದಲ್ಲಿ ಉಗ್ರರಿಗೆ-ನಕ್ಸಲರಿಗೆ ಸುಗ್ಗಿ ಕಾಲವಿದೆ : ಸುನೀಲ್ ಕುಮಾರ್
ಜಿಲ್ಲಾ ರಿಸರ್ವ್ ಗಾರ್ಡ್ಗೆ(DRG) ಸೇರಿದ ಗೆಡ್ ಕಾನ್ಸ್ಟೇಬಲ್ ಬುಧ್ರಾಮ್ ಕೋರ್ಸಾ, ಕಾನ್ಸ್ಟೇಬಲ್ಗಳಾದ ಡುಮ್ಮಾ ಮರ್ಕಮ್, ಪಂಡರು ರಾಮ್, ಬಮನ್ಸೋಧಿ, ಮತ್ತು ಬಸ್ತಾರ್ ಫೈಟರ್ಸ್ನ ಕಾನ್ಸಟೇಬಲ್ ಸೋಮದು ವಟ್ಟಿ ಅವರು ಈ ಹಿಂದೆ ನಕ್ಸಲೈಟ್ಗಳಾಗಿ ಸಕ್ರಿಯರಾಗಿದ್ದರು. ಶರಣಾದ ನಂತರ ಪೊಲೀಸ್ ಪಡೆಗೆ ಸೇರಿಸಿಕೊಳ್ಳಲಾಗಿತ್ತು ಎಂದು ಬಸ್ತಾರ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿ ಸುಂದರ್ ರಾಜ್ ಖಾಸಗಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಕಳೆದ 7 ವರ್ಷಗಳ ಹಿಂದೆ ಬಸ್ತಾರ್ ಪ್ರದೇಶದಲ್ಲಿ 792 ನಕ್ಸಲರು ಶರಣಾಗಿದ್ದರು, ಅವರಲ್ಲಿ ಇವರು ಕೂಡ ಶರಣಾಗಿದ್ದರು ಎಂದು ತಿಳಿದು ಬಂದಿದೆ.